ನಿಮ್ಮ ಭೂಮಿ ಅಥವಾ ಜಮೀನಿನ ಸರ್ವೇ ಸ್ಕೆಚ್ ಡೌನ್ಲೋಡ್ ಮಾಡಿಕೊಳ್ಳುವ ಸುಲಭ ವಿಧಾನ

0 14,044

ಪ್ರತಿಯೊಬ್ಬರೂ ಅವರದೇ ಆದ ಜಮೀನುಗಳನ್ನು ಹೊಂದಿರುತ್ತಾರೆ. ಎಕರೆವಾರು ಜಮೀನುಗಳ ಮಾಹಿತಿಯನ್ನು ಹೊಂದಿರುತ್ತಾರೆ. ಆದರೆ ಅದರ ಸರಿಯಾದ ವಿಸ್ತೀರ್ಣದ ಬಗ್ಗೆ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ. ಯಾವುದೇ ಸಮಸ್ಯೆಗಳು ಬಂದಲ್ಲಿ ಅದರ ಬಗ್ಗೆ ಯೋಚಿಸುತ್ತಾರೆ. ಸರ್ವೇಗಳನ್ನು ಮಾಡಿಸುತ್ತಾರೆ. ಪ್ರತಿಯೊಬ್ಬರೂ ಅವರ ಜಮೀನಿನ ಸುತ್ತಳತೆಯನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸರ್ವೇ ಮಾಡಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ ಇದಕ್ಕೆ ಬಹಳ ಹಂತಗಳು ಇರುತ್ತವೆ. ಸರ್ವೇಗೆ ಅರ್ಜಿ ಹಾಕಿದರೆ ಅದು ಆಫೀಸ್ ನವರು ಸರ್ವೇ ಮಾಡಲು ಬರಲು ಸುಮಾರು ಎರಡು ವರ್ಷಗಳು ಹಿಡಿಯುತ್ತವೆ. ಹಾಗೆಯೇ ಸರ್ವೇಯಲ್ಲಿ ಎರಡು ವಿಧಗಳಿವೆ. ಮೊದಲನೆಯದು ಗವರ್ನ್ಮೆಂಟ್ ಸರ್ವೇ. ಎರಡನೆಯದು ಪ್ರೈವೇಟ್ ಸರ್ವೇ. ಪ್ರೈವೇಟ್ ಸರ್ವೇಗೆ ಹಾಕಿದರೆ ಸ್ವಲ್ಪ ಹಣವನ್ನು ನೀಡಿ ಬೇಗ ಮಾಡಿಕೊಳ್ಳುತ್ತಾರೆ. ಗವರ್ನ್ಮೆಂಟ್ ಸರ್ವೇಗೆ ಮಾತ್ರ ಲೇಟಾಗುತ್ತದೆ. ಎಷ್ಟೋ ಜನರು ಅವಿಭಕ್ತ ಕುಟುಂಬವನ್ನು ಹೊಂದಿರುತ್ತಾರೆ.

ಎಷ್ಟೋ ಜನ ವಿಭಕ್ತ ಕುಟುಂಬವನ್ನು ಹೊಂದಿರುತ್ತಾರೆ. ಅವಿಭಕ್ತ ಕುಟುಂಬದವರು ತಮ್ಮ ತಮ್ಮ ಪಾಲಿನ ಆಸ್ತಿಯನ್ನು ಪಡೆಯುವಾಗ ಅಂದರೆ ಹಿಸೆಯನ್ನು ಪಡೆಯುವಾಗ ಸರ್ವೇ ಮಾಡಿಸುತ್ತಾರೆ. ಆದರೆ ಸರ್ವೇ ಬಹಳ ಲೇಟಾಗಿ ಆಗುವುದರಿಂದ ಬಹಳ ತೊಂದರೆ ಆಗುತ್ತದೆ. ಆದ್ದರಿಂದ ಮೊಬೈಲ್ ನಲ್ಲಿಯೇ ಇದರ ಫಲಿತಾಂಶವನ್ನು ಸುಲಭವಾಗಿ ಪಡೆಯಬಹುದು. ಮೊದಲನೆಯದಾಗಿ ಬ್ರೌಸಿಂಗ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಬೇಕು. ಅದರಲ್ಲಿ ಮೋಜ್ ನಿ ಎಂದು ಸರ್ಚ್ ಮಾಡಬೇಕು. ಅದನ್ನು ಸರ್ಚ್ ಮಾಡಿದಾಗ  bhumojni.karnataka.gov.in ಎಂಬ ಗೌರ್ಮೆಂಟ್ ವೆಬ್ಸೈಟ್ ದೊರಕುತ್ತದೆ.

ಅದರ ಮೇಲೆ ಕ್ಲಿಕ್ ಮಾಡಬೇಕು. ಅದನ್ನು ಓಪನ್ ಮಾಡಿದ ಮೇಲೆ ಅಲ್ಲಿ ಒಂದಷ್ಟು ಸರ್ವಿಸ್ ಗಳು ದೊರೆಯುತ್ತವೆ. ಅರ್ಜಿ ಮುಗಿದ ನಂತರ ರಿಪೋರ್ಟ್ ನ್ನು  ವ್ಯೂವ್ ಸ್ಕಿಚ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಒಂದು ಲಿಂಕ್ ಓಪನ್ ಆಗುತ್ತದೆ. ಅಲ್ಲಿ ಸರ್ವೇ ಅಪ್ಲಿಕೇಶನ್ ನಂಬರ್ ಹಾಕಬೇಕು. ನಂತರ ಸ್ಕೆಚ್ ವ್ಯೂವ್ ಎಂದು ಹಾಕಬೇಕು. ಈಗ ಸರ್ವೇಯ ಫಲಿತಾಂಶದ ಫೋಟೋ ದೊರೆಯುತ್ತದೆ. ಇದನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು. ಸೈಬರ್ ಗೆ ಹೋಗಿ ಮೊಬೈಲ್ ನಲ್ಲಿ ಇರುವ ಸರ್ವೇ ಫಲಿತಾಂಶದ ಫೋಟೋವನ್ನು ಕಳುಹಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ಇದನ್ನು ಲಾಪ್ಟಾಪ್ ನಲ್ಲಿ ಸೇವ್ ಮಾಡಿ ಕೂಡ ಇಟ್ಟುಕೊಳ್ಳಬಹುದು.

Leave A Reply

Your email address will not be published.