Land Records Pahani Carection: ಕರ್ನಾಟಕ ರಾಜ್ಯದ ರೈತರು ಗಮನಿಸಬೇಕಾದ ಅಂಶಗಳು ಏನೆಂದರೆ ಅದು ಜಮೀನು ತಮ್ಮದು ಎಂಬುದಕ್ಕೆ ಒಂದು ಪುರಾವೆ ಇರಬೇಕು ಅದುವೇ ಪಹಣಿ. ಅಂದರೆ ಫಾರಂ 16 ಪಹಣಿಯಲ್ಲಿ ಒಂದರಿಂದ ಹದಿನಾರು ಕಾಲಂಗಳು ಇರುತ್ತವೆ ಪ್ರತಿಯೊಂದು ಕೋಲಂಗಳು ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುತ್ತವೆ.

ಅಂದಿನ ಕಾಲದಲ್ಲಿ ಪ್ರತಿಯೊಂದು ದಾಖಲೆಗಳು ಕೈಬರಹದಲ್ಲಿ ಇರುತ್ತಿದ್ದರಿಂದ ಸಹಜ ಮತ್ತು ಸಾಮಾನ್ಯ ತಪ್ಪುಗಳು ಆಗುತ್ತಿದ್ದವು ಆದ್ದರಿಂದ ನಮ್ಮ ಜಮೀನಿನ ಪಹಣಿಯಲ್ಲಿ ಇರುವ ವಿಷಯಗಳಿಗೂ ಹಾಗೂ ಸರ್ವೆ ಆಫೀಸ್ ನಲ್ಲಿ ಇರುವಂತಹ ವಿಷಯಗಳಿಗೂ ಒಂದಕ್ಕೊಂದು ತಾಳೆ ಆಗದೆ ಇದ್ದರೆ ರೈತರು ಸಂಕಷ್ಟವನ್ನು ಎದುರಿಸುವ ಸಂದರ್ಭ ಒದಗುತ್ತಿತ್ತು ಆದ್ದರಿಂದ ರೈತರು ತಮ್ಮ ಪಹಣಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಅವಶ್ಯಕ.

ಸಾಮಾನ್ಯವಾಗಿ ಪಹಣಿಯಲ್ಲಿ ಸರ್ವೆ ನಂಬರ್ ಅಥವಾ ಹಿಸ್ಸಾ ನಂಬರ್ ತಪ್ಪಾಗಿ ಬಂದಿರುತ್ತದೆ ಹೀಗೆ ತಪ್ಪಾಗಿ ಬಂದಿರುವ ಮಾಹಿತಿಗಳನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬೇಕು ಏನು ಮಾಡಬೇಕು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

Land Records Pahani Carection

ಪಹಣಿಯಲ್ಲಿ ಹೊಸದಾಗಿ ತಿದ್ದುಪಡಿ ಮಾಡಿಕೊಳ್ಳಲು ಕೆಲವೊಂದು ದಾಖಲೆಗಳು ಮುಖ್ಯವಾಗಿ ಬೇಕಾಗುತ್ತವೆ ಅವುಗಳು ಯಾವುವು ಎಂದರೆ ಮೊದಲನೆಯದು ಚಾಲ್ತಿ ವರ್ಷದ ಪಹಣಿ ಹಾಗೂ ಹಳೆಯ ಕಾಲದ ಕೈಬರಹದ ಪಹಣಿಗಳು ಬೇಕಾಗುತ್ತವೆ. ಈ ಪಹಣಿಗಳನ್ನು ನೀವು ನಿಮ್ಮ ತಹಶೀಲ್ದಾರ್ ಆಫೀಸಿನ ಮೂಲಕ ತೆಗೆದುಕೊಳ್ಳಬಹುದು ಇದರ ಜೊತೆಗೆ ಆಧಾರ್ ಕಾರ್ಡ್ ಆಕಾರ್ ಬಂದ್ ಮತ್ತು ನಿಮ್ಮ ಜಮೀನಿನ ನಕ್ಷೆ ಬೇಕಾಗುತ್ತದೆ. ಜಮೀನಿಗೆ ಸಂಬಂಧಿಸಿದ ಎಲ್ಲಾ ಮೋಟೇಶನ್ ಪ್ರತಿಗಳು ಸಹ ಬೇಕಾಗುತ್ತದೆ ಈ ಮೋಟೇಶನ್ ಕಾಫಿಗಳು ಭೂಮಿ ಕೇಂದ್ರದಲ್ಲಿ ಸಿಗುತ್ತವೆ.

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಕಚೇರಿಯಿಂದ ತೆಗೆದುಕೊಂಡು ಅದರ ಜೊತೆಗೆ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ನಿಮ್ಮ ತಹಶೀಲ್ದಾರ್ ಕಚೇರಿಯಲ್ಲಿರುವ ಇನ್ವರ್ಡ್ ಸೆಂಟರ್ ಗೆ ಈ ಅರ್ಜಿಗಳನ್ನು ಸಲ್ಲಿಸಬೇಕು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

ಸದರಿ ಅರ್ಜಿಗಳು ಪರಿಶೀಲನೆಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಸರ್ವೇ ಆಫೀಸಿಗೆ ಕಳಿಸಲಾಗುತ್ತದೆ ಸರ್ವೆ ಆಫೀಸ್ ಅಧಿಕಾರಿಗಳು ಅರ್ಜಿಯನ್ನ ಪರಿಶೀಲನೆ ಮಾಡಿ ಅದನ್ನು ಸದರಿ ಕಡತ ನಿರ್ವಹಿಸಲು ಅದನ್ನು ಕೆಳಹಂತದ ಅಧಿಕಾರಿಗೆ ನಿರ್ದೇಶಸುತ್ತಾರೆ ಸದರಿ ಅಧಿಕಾರಿಯು ಕಡತವನ್ನು ಕೂಲಂಕುಶವಾಗಿ ತಿಳಿದುಕೊಂಡು ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿರುವ ಎಲ್ಲಾ ಹಳೆಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಬಹು ಮಾಲೀಕರ ಜೊತೆ ಸ್ಥಳ ಪರಿಶೀಲನೆಗೆ ಸಹ ಬರಬಹುದು ಹೀಗೆ ವಾಸ್ತವಿಕ ಹಾಗೂ ಹಳೆಯ ದಾಖಲೆಗಳ ಆಧಾರದ ಮೇಲೆ ವರದಿಯನ್ನ ಬರೆದು ಮುಂದಿನ ಕಾರ್ಯಕ್ರಮಕ್ಕಾಗಿ ಕಳಿಸಿಕೊಡಲಾಗುತ್ತದೆ. ಹೀಗೆ ಕಡತವು ನೇರವಾಗಿ ಭೂಮಿ ಕೇಂದ್ರಕ್ಕೆ ಹೋಗಿ ಅಲ್ಲಿ ಕಾರ್ಯಕರ್ತಗೊಳ್ಳುತ್ತದೆ ಇಲ್ಲಿಗೆ ಪಹಣಿಯಲ್ಲಿರುವ ತಿದ್ದುಪಡಿ ಕಾರ್ಯ ಮುಕ್ತಾಯಗೊಳ್ಳುತ್ತದೆ.

ಒಂದು ವೇಳೆ ಅಧಿಕಾರಿಗಳು ಅರ್ಜಿಯನ್ನ ತಿರಸ್ಕರಿಸಿದ್ದರೆ ಸಂಬಂಧಪಟ್ಟ ರೈತರಿಗೆ ಕೈಬರಹದ ಮೂಲಕ ಹಿಂಬರಹವನ್ನು ಕಳಿಸಲಾಗುತ್ತದೆ. ಇದನ್ನೂ ಓದಿ Gomala Land: ಗೋಮಾಳ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

By AS Naik

Leave a Reply

Your email address will not be published. Required fields are marked *