Gomala Land: ಗೋಮಾಳ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

0 2,002

Gomala Land: ಸಕ್ರಮವಾಗಿ ಗೋಮಾಳದ ಜಮೀನುಗಳನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಎಂಬ ಮಾಹಿತಿಯನ್ನ ಈ ಕೆಳಗಿನ ತಿಳಿದುಕೊಳ್ಳೋಣ. ಅಷ್ಟಕ್ಕೂ ಗೋಮಾಳದ ಜಮೀನು ಎಂದರೆ ಒಂದು ಗ್ರಾಮದ ವ್ಯಾಪ್ತಿಯಲ್ಲಿ ಬರುವಂತಹ ಅನುಪಯೋಗಿ ಜಮೀನುಗಳನ್ನು ಸರ್ಕಾರವು ಧನಕರುಗಳ ಮೇವಿಗೆಂದೇ ಮೀಸಲಿಟ್ಟಿರುತ್ತದೆ ಹೀಗೆ ಮೀಸಲಿಟ್ಟ ಜಮೀನನ್ನ ಗೋಮಾಳ ಜಮೀನು ಎಂದು ಕರೆಯಲಾಗುತ್ತದೆ. ಕಾನೂನಿನ ಪ್ರಕಾರ ಪ್ರತಿ ಗ್ರಾಮದಲ್ಲಿ ನೂರು ಹೆಕ್ಟರ್ಗಳಷ್ಟು ಗೋಮಾಳದ ಜಮೀನು ಮೀಸಲಿಡಬೇಕು ಎಂದು ಕರ್ನಾಟಕ ಭೂಕಂದಾಯ ನಿಯಮಾವಳಿ 1966ರ ನಿಯಮ 97(1)ಉಲ್ಲೇಖಿಸಿದೆ.

ಈ ರೀತಿಯ ಗೋಮಾಳದ ಜಮೀನುಗಳಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿರುತ್ತವೆ ಹಾಗೂ ಬೇರೆ ಬೇರೆ ಉಪಯೋಗಗಳಿಗಾಗಿ ಈ ಜಾಗವನ್ನ ಬಳಸಿಕೊಳ್ಳಲಾಗುತ್ತಿದೆ. ಅಷ್ಟಕ್ಕೂ ಈ ಜಾಗವನ್ನು ಸಕ್ರಮಗೊಳಿಸಿಕೊಳ್ಳಲು ಯಾರಿಗೆ ಅವಕಾಶವಿದೆ ಹಾಗೂ ಹೇಗೆ ಅದನ್ನ ವಶಪಡಿಸಿಕೊಳ್ಳುವುದು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ

Gomala Land information

ಗೋಮಾಳ ಎನ್ನುವುದು ಸಾರ್ವಜನಿಕ ಆಸ್ತಿಯಾಗಿದ್ದು 2006ರ ನವೆಂಬರ್ 18ರಂದು ಕರ್ನಾಟಕ ಹೈಕೋರ್ಟ್ ಭೂಕಂದಾಯ ಕಾಯ್ದೆ 94 ಎಬಿಸಿ ಪ್ರಕಾರ ಗೋಮಾಳವನ್ನು ಅನಧಿಕೃತ ಸಾಗುವಳಿ ಮಾಡಿಕೊಳ್ಳುವವರೆಗೂ ಸಕ್ರಮವಾಗಿ ಮಾಡಿಕೊಳ್ಳಲು ಅವಕಾಶ ಇದೆ ಎಂಬುದಾಗಿ ಆದೇಶವನ್ನು ನೀಡಿದೆ ಆದರೆ ಯಾರು ಈ ರೀತಿಯ ಸಕ್ರಮ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ, ಯಾರು ಈ ಭೂಮಿಯನ್ನು ಹಲವು ವರ್ಷಗಳ ಕಾಲದಿಂದ ತಮ್ಮ ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು ಉಪಯೋಗ ಮಾಡಿಕೊಳ್ಳುತ್ತಾ ಇರುತ್ತಾರೋ ಅಂತಹ ರೈತ ಹಾಗೂ ಆತನ ಕುಟುಂಬವು ಇದಕ್ಕೆ ಅರ್ಹವಾಗಿರುತ್ತದೆ ಆ ರೈತರ ಅರ್ಹತೆಗಳನ್ನ ಅನುಕೂಲಗಳನ್ನು ಸರ್ಕಾರವು ಪರಿಶೀಲನೆ ಮಾಡಿ ಮಂಜೂರಾತಿ ಸಮಿತಿಗೆ ಸಲಹೆ ನೀಡುತ್ತದೆ.

ಈ ಕುರಿತಾಗಿ ಇನ್ನು ಕೆಲವು ನಿಯಮಗಳನ್ನ ಈ ಕೆಳಗೆ ನೀಡಲಾಗಿದೆ ಅವುಗಳು ಯಾವವು ಎಂದರೆ. ಭೂ ಕಂದಾಯ ನಿಯಮಾವಳಿಯ ಮಿತಿಗಿಂತ ಹೆಚ್ಚಿನ ಗೋಮಾಳ ಲಭ್ಯವಿದ್ದ ಪ್ರದೇಶಗಳಲ್ಲಿ ಮಾತ್ರ ಈ ರೀತಿ ಸಕ್ರಮಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.

ಈ ಅರ್ಜಿ ಸಲ್ಲಿಸುವ ರೈತನಿಗೆ ಸ್ವಂತ ಭೂಮಿ ಇರಬಾರದು ಅಂದರೆ ಆ ಗೋಮಾಳದ ಜಮೀನನ್ನೇ ಆತ ಜೀವನೋಪಾಯಕ್ಕಾಗಿ ಅವಲಂಬಿಸಿರಬೇಕು. ಗೋಮಾಳದಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

ಭೂಮಿಯ ಲಭ್ಯತೆ, ಎಸ್ಸಿ ಎಸ್ಟಿ, ಮತ್ತು ತೆರೆದ ಆಧಾರದ ಮೇಲೆ ಗೋಮಾಳದ ಭೂಮಿಯನ್ನು ಮಂಜೂರು ಮಾಡಲಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಸಹ ಖಾಸಗಿ ಸಂಸ್ಥೆ ಅಥವಾ ಗಣಿಗಾರಿಕೆಗಾಗಿ ಈ ಭೂಮಿಯನ್ನು ಮಂಜೂರು ಮಾಡಲು ಆಗುವುದಿಲ್ಲ.

ಸರ್ಕಾರದ ಕೆಲವು ಉದ್ದೇಶಗಳಾದ ಸಾರ್ವಜನಿಕ ಆಸ್ಪತ್ರೆ ಶಾಲೆ ಇನ್ನಿತರ ಸರ್ಕಾರಿ ಸೌಲಭ್ಯಗಳ ನಿರ್ಮಾಣಕ್ಕಾಗಿ ಇದನ್ನ ಬಳಸಬಹುದು. ರೈತನು ಈ ಭೂಮಿಯನ್ನು ಸಕ್ರಮ ಮಾಡಿಕೊಂಡ ನಂತರ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಸಕ್ರಮಗೊಳಿಸಿಕೊಂಡ ಗೋಮಾಳ ಭೂಮಿಯು ಒಳ ಭೂಮಿ ಅಥವಾ ಸಾಧಾರಣ ಭೂಮಿಯಾಗಿದ್ದರೆ ಎರಡು ಹೆಕ್ಟೇರ್ ವರೆಗೂ ಕೂಡ ಸಕ್ರಮಕ್ಕೆ ಅವಕಾಶ ಇರುತ್ತದೆ. ಇದನ್ನೂ ಓದಿ ಕೊನೆಗೂ ಮಂಜೂರಾಯ್ತು ಗೃಹಲಕ್ಷ್ಮಿ ಯೋಜನೆಯ ಹಣ, ಈ ರೀತಿ ಚೆಕ್ ಮಾಡಿಕೊಳ್ಳಿ

Leave A Reply

Your email address will not be published.