ಹೆಂಗಸರು ಮಾಸಿಕವಾಗಿ ರಜೆ ಆಗುವುದು ಸಹಜವಾಗಿದೆ. ಆದರೆ ಎಲ್ಲರೂ ತಿಂಗಳಿಗೆ ಸರಿಯಾಗಿ ಆಗುವುದಿಲ್ಲ. ಇದರಿಂದ ಹಲವಾರು ತೊಂದರೆಗಳು ಉಂಟಾಗುತ್ತದೆ. ಕೆಲವರು ಮೂರು ತಿಂಗಳಿಗೊಮ್ಮೆ ಆಗುತ್ತಾರೆ. ಕೆಲವರು ಆರು ತಿಂಗಳಿಗೊಮ್ಮೆ ಆಗುತ್ತಾರೆ. ಆದರೆ ಅವರು ಹೆಚ್ಚಾಗಿ ಬೊಜ್ಜನ್ನು ಹೊಂದಿರುತ್ತಾರೆ. ಆದ್ದರಿಂದ ನಾವು ಇಲ್ಲಿ ಸರಿಯಾದ ಸಮಯಕ್ಕೆ ರಜೆಯಾಗುವ ಅಂದರೆ ಮುಟ್ಟಾಗುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಒಂದು ಇಂಚಿನಷ್ಟು ಶುಂಠಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಸರಿಯಾಗಿ ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು. ಮೊದಲು ಶುಂಠಿಯನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು. ಹಾಗೆಯೇ ಇದರ ಸ್ಟೋವ್ ಆನ್ ಮಾಡಿ ಜೊತೆಗೆ ನೀರನ್ನು ಕುದಿಯಲು ಇಟ್ಟುಕೊಳ್ಳಬೇಕು. ನೀರು ಚೆನ್ನಾಗಿ ಕುದಿಯುತ್ತಿರಬೇಕು. ಆಗ ಜಜ್ಜಿದ ಶುಂಠಿಯನ್ನು ಹಾಕಬೇಕು. ಇದು ಚೆನ್ನಾಗಿ ಕುದಿಯಬೇಕು. ಕುದ್ದಿದ ನಂತರ ನೀರನ್ನು ಒಂದು ಲೋಟಕ್ಕೆ ಸೋಸಿಕೊಳ್ಳಬೇಕು.

ಸೋಸಿಕೊಂಡ ನೀರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆ ನೀರನ್ನು ಊಟವಾದ ಮೇಲೆ ದಿನವೂ ಕುಡಿಯಬೇಕು. ದಾಲ್ಚಿನಿಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಮಿಕ್ಸಿ ಜಾರಿಯಲ್ಲಿ ಬೇಕಾದರೂ ಹಾಕಿ ಪುಡಿ ಮಾಡಿಕೊಳ್ಳಬಹುದು. ಹಾಗೆಯೇ ಅರ್ಧ ಚಮಚ ದಾಲ್ಚಿನಿ ಪುಡಿಯನ್ನು ತೆಗೆದುಕೊಂಡು ತಿನ್ನಬೇಕು. ಹಾಗೆಯೇ ಅದರ ಜೊತೆಗೆ ಒಂದು ಲೋಟ ಹಾಲನ್ನು ಕುಡಿಯಬೇಕು. ಇದನ್ನು ಸಹ ಊಟವಾದ ನಂತರವೇ ಕುಡಿಯಬೇಕು. ಇದನ್ನು ಮಲಗುವ ಮುನ್ನ ಕುಡಿಯಬೇಕು.

ಹಾಗೆಯೇ ಪುದಿನಾ ಎಲೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಳ್ಳಬೇಕು. ಇದನ್ನು ಒಂದು ಚಮಚ ತೆಗೆದುಕೊಂಡು ಅದರ ಜೊತೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಂಡು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಇದರಿಂದ ಋತುಚಕ್ರ ಏರುಪೇರು ಆಗುತ್ತಿದ್ದರೆ ಸರಿಯಾಗಿ ಆಗುತ್ತದೆ. ಹೆಂಗಸರ ಆರೋಗ್ಯ ಇರುವುದೇ ಋತುಚಕ್ರದಲ್ಲಿ. ಹಾಗಾಗಿ ಋತುಚಕ್ರ ಸರಿಯಾಗಿ ಆಗದೇ ಇರುವವರು ಇವೆಲ್ಲ ಪರಿಹಾರವನ್ನು ಮಾಡಬಹುದು.

Leave a Reply

Your email address will not be published. Required fields are marked *