ರಾತ್ರಿ ನಿದ್ರೆ ಮಾಡಿದಾಗ ಕೆಲವರು ಗೊರಕೆ ಹೊಡೆಯುತ್ತಾರೆ. ಇದರಿಂದಾಗಿ ಪಕ್ಕದಲ್ಲಿ ಇರುವವರಿಗೆ ಕಿರಿಕಿರಿಯಾಗುತ್ತದೆ. ಪಕ್ಕದಲ್ಲಿರುವವರ ನಿದ್ರೆಯೂ ಹಾಳಾಗುತ್ತದೆ. ಆದರೆ ಎಲ್ಲರೂ ನಿದ್ರೆ ಮಾಡಿದಾಗ ಗೊರಕೆ ಹೊಡೆಯುವುದಿಲ್ಲ. ಕೆಲವರು ಮಾತ್ರ ನಿದ್ರೆ ಮಾಡಿದಾಗ ಗೊರಕೆ ಹೊಡೆಯುತ್ತಾರೆ. ಇದರ ಕಾರಣ ಮತ್ತು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಗಂಟಲ ಮೇಲ್ಭಾಗ ಮತ್ತು ಮೂಗಿನ ಹಿಂದೆ ಕಟ್ಟಿಕೊಂಡಿರುವ ಕಫದಿಂದ ಗೊರಕೆ ಶಬ್ದ ಉಂಟಾಗುತ್ತದೆ. ಇದರಿಂದ ಗೊರಕೆ ಶಬ್ದ ಕೇಳಿ ಬರುತ್ತದೆ. ಇದಕ್ಕೆ ಬೇಗ ಪರಿಹಾರವನ್ನು ಕಂಡುಕೊಳ್ಳಬೇಕು. ಏಕೆಂದರೆ ಇದರಿಂದ ನೆಂಟರ ಮನೆಗೆ ಹೋದಾಗ ಅವಮಾನ ಆಗುತ್ತದೆ. ಇದಕ್ಕೆ ಹಲವಾರು ಪರಿಹಾರಗಳು ಇವೆ. ಕೆಲವು ಪರಿಹಾರಗಳ ಬಗ್ಗೆ ನಾವು ಇಲ್ಲಿ ನೋಡೋಣ.

ಇದನ್ನು ನಿವಾರಿಸಿಕೊಳ್ಳಲು ಒಂದು ಲೋಟ ಬಿಸಿ ಹಾಲಿಗೆ ಒಂದು ಚಿಕ್ಕ ಚಮಚ ಅರಿಶಿನ ಪುಡಿ ಹಾಕಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು. ಇದರಿಂದ ನಿಧಾನವಾಗಿ ಕಟ್ಟಿಕೊಂಡಿರುವ ಮೂಗು ತೆರೆಯುತ್ತದೆ. ಇದರಿಂದಾಗಿ ಗೊರಕೆ ಹೊಡೆಯುವ ಆಭ್ಯಾಸವೂ ದೂರ ಆಗುತ್ತದೆ. ಹಾಗೆಯೇ ಜೇನುತುಪ್ಪ ಗಂಟಲ ಒಳಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ಸಹಾಯಕಾರಿ. ಇದು ಗೊರಕೆಯನ್ನು ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ.

ಹಾಗೆಯೇ ಒಂದು ಲೋಟ ನೀರಿಗೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮಲಗುವ ಮುನ್ನ ಕುಡಿಯಬೇಕು. ಮಲಗುವಾಗ ಬೆನ್ನನ್ನು ಕೆಳಭಾಗ ಮಾಡಿಕೊಂಡು ಮಲಗಿದರೆ ಗಂಟಲಿನ ಮಾಂಸಖಂಡಗಳಿಗೆ ವಿಶ್ರಾಂತಿ ಸಿಗುತ್ತದೆ. ಗೊರಕೆ ಹೊಡೆಯುವುದು ಸಹ ತಪ್ಪುತ್ತದೆ. ಗಂಟಲ ಹಿಂಬದಿಯಲ್ಲಿ ಇರುವ ಗಾಳಿ ರವಾನೆಯಾಗುವ ಸ್ಥಳವು ಕಿರಿದಾಗುವುದರಿಂದ ಗೊರಕೆ ಉಂಟಾಗುತ್ತದೆ. ಕತ್ತಿನ ಭಾಗದಲ್ಲಿ ಅತೀ ಬೊಜ್ಜು ಇರುವವರಿಗೆ ಇದು ಜಾಸ್ತಿ ಎಂದು ಹೇಳಬಹುದು. ಹಾಗಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು.

ಮೂಗಿನ ಒಳಭಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಬಾಯಲ್ಲಿ ಉಸಿರಾಡುವ ಬದಲು ಮೂಗಿನಲ್ಲಿ ಉಸಿರಾಡಬಹುದು. ಹಾಗೆಯೇ ಮಲಗುವ ಕೋಣೆಯಲ್ಲಿ ಧೂಳು, ಸಾಕು ಪ್ರಾಣಿಗಳ ವಾಸ ಇರದಂತೆ ನೋಡಿಕೊಳ್ಳಬೇಕು. ಮಲಗುವ ಹಾಸಿಗೆಯು ಸ್ವಚ್ಛವಾಗಿ ಇರಬೇಕು. ಈ ರೀತಿ ಮಾಡುವುದರಿಂದಲೂ ಗೊರಕೆಯಿಂದ ದೂರವಿರಬಹುದು.

Leave a Reply

Your email address will not be published. Required fields are marked *