Ultimate magazine theme for WordPress.

ಈ ಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ಉಚಿತ ರೇಷನ್ ಕೊಡುತ್ತಾ ಸರ್ಕಾರ

0 2

ಕೇಂದ್ರ ಸರ್ಕಾರದಿಂದ ನಾಡಿನ ಜನತೆಗೆ ಸಿಹಿಸುದ್ದಿಯೊಂದಿದೆ. ಕೊರೋನ ವೈರಸ್ ದಿನೆ ದಿನೆ ಹರಡುತ್ತಿರುವುದರಿಂದ ದೇಶದ ಅನೇಕ ರಾಜ್ಯಗಳಲ್ಲಿ ಅನಿವಾರ್ಯವಾಗಿ ಲಾಕ್ ಡೌನ್ ಮಾಡಲೇಬೇಕಾಗಿದೆ. ಲಾಕ್ ಡೌನ್ ಪ್ರಾರಂಭವಾಗಿರುವುದರಿಂದ ಆರ್ಥಿಕ ಸಂಕಷ್ಟವನ್ನು ಮತ್ತೆ ನಾವೆಲ್ಲರೂ ಎದುರಿಸಬೇಕಾಗಿದೆ. ಆರ್ಥಿಕ ಸಂಕಷ್ಟದಿಂದ ಅನೇಕರಿಗೆ ಊಟವಿಲ್ಲದೆ ಪರದಾಡಬೇಕಾಗುತ್ತದೆ ಆದ್ದರಿಂದ ನಾಡಿನ ಜನತೆಗೆ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ಯಾವಾಗಿನಿಂದ ಆರಂಭವಾಗುತ್ತದೆ, ಈ ಯೋಜನೆಯಡಿಯಲ್ಲಿ ಉಚಿತವಾಗಿ ಯಾವ ಆಹಾರಧಾನ್ಯವನ್ನು ಕೊಡುತ್ತಾರೆ ಹಾಗೂ ಈ ಯೋಜನೆಯಡಿಯಲ್ಲಿ ಎಷ್ಟು ಪ್ರಮಾಣದಲ್ಲಿ ಆಹಾರಧಾನ್ಯವನ್ನು ವಿತರಿಸಲಾಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೇಂದ್ರ ಸರ್ಕಾರ ನಾಡಿನ ಜನರಿಗೆ ಉಚಿತ ಆಹಾರ ಧಾನ್ಯ ಕೊಡಬೇಕೆಂದು ನಿರ್ಧರಿಸಿದೆ. ನಮಗೆಲ್ಲಾ ಗೊತ್ತಿರುವ ಹಾಗೆ ದೇಶಾದ್ಯಂತ ಕೋವಿಡ್ ೧೯, 2ನೆ ಅಲೆ ಪ್ರಾರಂಭವಾಗಿದೆ ಇದರಿಂದ ಅಪಾರ ಪ್ರಮಾಣದ ಸಾವು ನೋವಾಗುತ್ತಿದೆ. ಈಗಾಗಲೆ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಜನರು ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಾರೆ. ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳುವುದರಿಂದ ಅವರಿಗೆ ಕೆಲಸ ಇರುವುದಿಲ್ಲ ಆದ್ದರಿಂದ ಜನರಿಗೆ ಆಹಾರ ಧಾನ್ಯಗಳನ್ನು ಖರೀದಿಸಲು ಹಣದ ಕೊರತೆ ಇರುವುದರಿಂದ ಉಚಿತ ಆಹಾರ ಧಾನ್ಯ ವಿತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರ ಈ ಬಾರಿ ಅಂದಾಜು 80 ಕೋಟಿ ಜನರಿಗೆ ಆಹಾರ ಧಾನ್ಯ ವಿತರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಈ ಕಾರ್ಯಕ್ಕೆ ಸುಮಾರು 26,000 ಕೋಟಿ ರೂಪಾಯಿ ಹಣ ಖರ್ಚಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸುಮಾರು 80 ಲಕ್ಷ ಟನ್ ಆಹಾರಧಾನ್ಯವನ್ನು ಖರೀದಿಸಿ 80 ಕೋಟಿ ಜನರಿಗೆ ಆಹಾರಧಾನ್ಯವನ್ನು ವಿತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಯೋಜನೆಯಡಿಯಲ್ಲಿ ರೈತರು, ಮಹಿಳಾ ಜನ ಧನ್ ಖಾತೆದಾರರು, ನರೇಗಾ ಕಾರ್ಮಿಕರು, ಮಹಿಳಾ ಸ್ವಸಹಾಯ ಗುಂಪುಗಳು, ವೃದ್ಧರು, ವಿಧವೆಯರು, ಅಂಗವಿಕಲ ಪಿಂಚಣಿದಾರರು. ಖಾಸಗಿ ಉದ್ಯೋಗಿಗಳು, ವಲಸೆ ಕಾರ್ಮಿಕರು ಇವರು ತಾವು ಯಾವ ಜಾಗದಲ್ಲಿ ಇರುತ್ತಾರೊ ಅಲ್ಲಿಯೆ ಈ ಯೋಜನೆಯ ಅಡಿಯಲ್ಲಿ ಉಚಿತ ಆಹಾರಧಾನ್ಯವನ್ನು ಪಡೆಯಬಹುದು. ರೇಷನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರು ಈ ಯೋಜನೆಯಡಿಯಲ್ಲಿ ಆಹಾರಧಾನ್ಯವನ್ನು ಪಡೆಯಬಹುದು. ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ಅಥವಾ ಐದು ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಮೆ 1 ರಿಂದ ಆಹಾರ ಧಾನ್ಯ ವಿತರಣೆ ಆರಂಭವಾಗುತ್ತದೆ, ಇದರ ಅವಧಿ ಜೂನ್ 30ರವರೆಗೆ ಇರುತ್ತದೆ ಅಂದರೆ ಎರಡು ತಿಂಗಳಿನ ಆಹಾರಧಾನ್ಯವನ್ನು ಉಚಿತವಾಗಿ ಕೇಂದ್ರ ಸರ್ಕಾರ ನಾಡಿನ ಜನತೆಗೆ ನೀಡಲಿದೆ. ರೇಷನ್ ಕಾರ್ಡ್ ಇರುವವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಬರುವ ರೇಷನ್ ನೊಂದಿಗೆ 5 ಕೆಜಿ ಗೋಧಿ ಅಥವಾ 5 ಕೆಜಿ ಅಕ್ಕಿ ವಿತರಣೆಯಾಗುತ್ತದೆ.

ರೇಷನ್ ಕಾರ್ಡ್ ಇಲ್ಲದೆ ಇರುವವರು ಉಚಿತ ಆಹಾರ ಧಾನ್ಯ ಪಡೆಯಲು ಯಾವುದೆ ದಾಖಲಾತಿಯನ್ನು ತೋರಿಸುವ ಅವಶ್ಯಕತೆ ಇರುವುದಿಲ್ಲ. ವಲಸೆ ಕಾರ್ಮಿಕರು ಬೇರೆ ರಾಜ್ಯಗಳಲ್ಲಿ ವಾಸವಾಗಿರುವುದರಿಂದ ತಮ್ಮ ಊರಿನಲ್ಲಿ ಯಾವುದೆ ದಾಖಲಾತಿಯನ್ನು ಹೊಂದಿರುವುದಿಲ್ಲ ಅಥವಾ ಕೆಲವರು ತಾವಿದ್ದ ಮನೆಯಲ್ಲೆ ದಾಖಲಾತಿಯನ್ನು ಬಿಟ್ಟು ಬಂದಿರುತ್ತಾರೆ ಈ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಯಾವುದೆ ದಾಖಲಾತಿಯನ್ನು ತೋರಿಸುವ ಅವಶ್ಯಕತೆ ಇಲ್ಲ ಎಂದು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯು ಒಂದು ಪ್ರಮುಖ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಸಮಂಜಸವಾಗಿದ್ದು, ಜನರಿಗೆ ಸಹಾಯವಾಗುತ್ತದೆ. ಈ ಯೋಜನೆಯ ಮೂಲಕ ಬಹಳಷ್ಟು ಜನರಿಗೆ ಉಚಿತವಾಗಿ ಆಹಾರ ಸಿಗುವ ಮೂಲಕ ಹಸಿವಿನಿಂದ ಬಳಲುವುದು ತಪ್ಪುತ್ತದೆ.

Leave A Reply

Your email address will not be published.