ಕೋವಿಡ್ ಸೋಂಕಿತೆಗೆ ಏರ್ ಆಂಬುಲೆನ್ಸ್ ಮೂಲಕ ಸೋನುಸೂದ್ ಏನ್ ಮಾಡಿದ್ರು ನೋಡಿ ಇದು ಮಾನವೀಯತೆ

0 0

ಬಹಳಷ್ಟು ನಟರು ಸಿನಿಮಾದಲ್ಲಿ ಮಾತ್ರ ನಟರಾಗಿ ರಿಯಲ್ ಜೀವನದಲ್ಲಿ ಹೀರೊ ಆಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ನಟ ಸೋನು ಸೂದ್ ಅವರು ಸಿನಿಮಾದಲ್ಲಿ ಖಳ ನಟನಾಗಿ ರಿಯಲ್ ಜೀವನದಲ್ಲಿ ಕೊರೋನ ಸೋಂಕಿತರ ಪಾಲಿಗೆ ಹೀರೊ ಆಗಿದ್ದಾರೆ ಇದು ವಿಶೇಷವಾಗಿದೆ. ಎರಡನೆ ಅಲೆ, ರೂಪಾಂತರಿ ಕೊರೋನ ವೈರಸ್ ಮತ್ತೆ ನಮ್ಮನ್ನು ಕಾಡುತ್ತಿದೆ. ಆಕ್ಸಿಜನ್ ಕೊರತೆಯಿಂದ ಜನರು ನರಳಿ ನರಳಿ ಸಾಯುತ್ತಿರುವ ದೃಶ್ಯವನ್ನು ಪ್ರತಿದಿನ ನೋಡುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಟ ಸೋನು ಸೂದ್ ಅವರು ಮತ್ತೊಮ್ಮೆ ಕೊರೋನ ಸೋಂಕಿತೆ 25 ವರ್ಷದ ಯುವತಿಗೆ ಸಹಾಯ ಮಾಡಿದ್ದಾರೆ ಅದರ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕಳೆದ ವರ್ಷ ಕೊರೋನ ವೈರಸ್ ಧಾಳಿಯಿಂದ ಬಹಳಷ್ಟು ಜನರು ಕಂಗಾಲಾಗಿದ್ದರು. ಈ ಸಮಯದಲ್ಲಿ ಅನೇಕ ನಟರು, ಇನ್ನಿತರರು ಸಹಾಯಕ್ಕೆ ಧಾವಿಸಿದರು, ಅದೆ ರೀತಿ ನಟ ಸೋನು ಸೂದ್ ಅವರು ದೊಡ್ಡ ಪ್ರಮಾಣದಲ್ಲಿ ಸಹಾಯ ಹಸ್ತ ನೀಡಿದ್ದರು. ನಟ ಸೋನು ಸೂದ್ ಅವರು ಕಳೆದವಾರ ಕೊರೋನಾ ಸೋಂಕಿಗೆ ಒಳಗಾಗಿದ್ದರು, ಕ್ವಾರಂಟೈನ್‌ನಲ್ಲಿದ್ದ ಸೋನು ಸೂದ್ ಅವರು ಈಗ ಕೊರೋನಾದಿಂದ ಗುಣಮುಖರಾಗಿದ್ದಾರೆ. ಅವರು ವಿಶ್ರಾಂತಿಯಲ್ಲಿದ್ದರೂ ಸಹ ತಮ್ಮ ಸಾಮಾಜಿಕ ಕೆಲಸವನ್ನು ನಿಲ್ಲಿಸಲಿಲ್ಲ ಇದನ್ನು ಮೆಚ್ಚಲೆಬೇಕು. ಕಳೆದ ವರ್ಷದಂತೆ ಈ ವರ್ಷವು ಅಗತ್ಯ ಸೇವಗೆಳನ್ನು ಸೋನು ಸೂದ್ ಅವರು ಮಾಡುತ್ತಿದ್ದಾರೆ. ನಾಗಪುರದ 25 ವರ್ಷದ ಹುಡುಗಿಯೊಬ್ಬಳು ಕೋವಿಡ್‌ನಿಂದ ತೀವ್ರ ಬಳಲುತ್ತಿದ್ದರು. ಚಿಕಿತ್ಸೆಗಾಗಿ ನಾಗಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಶ್ವಾಸಕೋಶ ಕಸಿ ಮತ್ತು ಇನ್ನು ಕೆಲವು ವಿಶೇಷ ಚಿಕಿತ್ಸೆ ಮಾಡಬೇಕಾದ ಕಾರಣ, ಹೈದರಾಬಾದ್ ನ ಅಪೋಲೊ ಆಸ್ಪತ್ರೆಯಲ್ಲಿ ಮಾತ್ರ ಸಾಧ್ಯ ಎಂದು ವೈದ್ಯರು ಸೂಚಿಸಿದರು.

ಇದರಿಂದ ಕಂಗಾಲಾಗಿದ್ದ ಪೋಷಕರ ಸಹಾಯಕ್ಕೆ ತಕ್ಷಣ ಧಾವಿಸಿದವರು ನಟ ಸೋನು ಸೂದ್. ಅವರು ಹೈದರಾಬಾದ್‌ನ ಆರು ವೈದ್ಯರ ತಂಡದೊಂದಿಗೆ ನಾಗಪುರದಿಂದ ಹೈದರಾಬಾದ್ ನ ಅಪೋಲೊ ಆಸ್ಪತ್ರೆಗೆ ಏರ್ ಆಂಬುಲೆನ್ಸ್ ಮೂಲಕ ಶಿಫ್ಟ್ ಮಾಡಿಸಿದರು. ಅಪೋಲೊ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ನಟ ಸೋನು ಸೂದ್ ಅವರು ಶೇ.20ರಷ್ಟು ಬದುಕುಳಿಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು. ಅವಳು 25 ವರ್ಷದ ಯುವತಿಯಾಗಿರುವುದರಿಂದ ಕಠಿಣ ಯುದ್ಧ ಮಾಡಿ ಗೆಲ್ಲುತ್ತಾಳೆ, ಇದರಿಂದ ಹೊರಬರುತ್ತಾಳೆ ಅದಕ್ಕಾಗಿ ನಾವು ಈ ಅವಕಾಶವನ್ನು ಪಡೆದುಕೊಂಡೆವು. ಅವಳಿಗೆ ಚಿಕಿತ್ಸೆ ನೀಡಲು ದೇಶದ ಅತ್ಯುತ್ತಮ ವೈದ್ಯರ ತಂಡವನ್ನು ಸಂಪರ್ಕಿಸಿ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಶೀಘ್ರದಲ್ಲೆ ಗುಣಮುಖಳಾಗಿ ಹಿಂದಿರುಗುತ್ತಾರೆ ಎಂದು ಯುವತಿಯ ಕಂಡೀಷನ್ ಬಗ್ಗೆ ಹೇಳಿದರು.

ಕೊರೋನ ಎರಡನೆ ಅಲೆ ಭೀಕರವಾಗಿದ್ದು, ಸೋಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ನರಳಾಡುತ್ತಿದ್ದಾರೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆ ರೋಗಿಗಳಿಗೂ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕಷ್ಟದ ಸಮಯದಲ್ಲಿ ನಾಗಪುರದಿಂದ ಏರ್ ಲಿಫ್ಟ್ ಮೂಲಕ ಚಿಕಿತ್ಸೆ ಕೊಡಿಸಿದ ಸೋನು ಸೂದ್ ಅವರಿಗೆ ಮತ್ತೊಮ್ಮೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ ಸೋನು ಸೂದ್ ಅವರ ಸಹಾಯ ಮನೋಭಾವನೆಯನ್ನು ಎಲ್ಲರೂ ಮೆಚ್ಚಲೆಬೇಕು. ನಟ ಸೋನು ಸೂದ್ ಅವರಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ, ಇನ್ನು ಹೆಚ್ಚಿನ ಸಹಾಯ ಮಾಡುವ ಶಕ್ತಿಯನ್ನು ಕೊಡಲಿ ಎಂದು ಆಶಿಸೋಣ.

Leave A Reply

Your email address will not be published.