ಸರ್ಕಾರದ ಸೌಲಭ್ಯ ಪಡೆಯಲು ಕಾರ್ಮಿಕ ಕಾರ್ಡ್ ಯಾರೆಲ್ಲ ಮಾಡಿಸಬಹುದು ನೋಡಿ

0 19

ಸರ್ಕಾರ ಜನಪರ ಅನೇಕ ಯೋಜನೆಗಳು ಜಾರಿಗೊಳಿಸುತ್ತದೆ ಆದರೆ ಕೆಲವು ಯೋಜನೆಗಳು, ಸೌಲಭ್ಯಗಳು ಪ್ರತಿಯೊಬ್ಬ ಪ್ರಜೆಗೆ ತಲುಪುತ್ತಿಲ್ಲ. ಈ ಕಾರಣದಿಂದ ಸರ್ಕಾರ ಕಾರ್ಮಿಕ ಕಾರ್ಡ್ ಮಾಡುವ ಮೂಲಕ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲಾಗುತ್ತದೆ. ಹಾಗಾದರೆ ಕಾರ್ಮಿಕ ಕಾರ್ಡ್ ಅನ್ನು ಯಾವ ಯಾವ ಕಾರ್ಮಿಕರು ಮಾಡಬಹುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಸರ್ಕಾರ ಬಡ ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಬೇಕು ಎಂದರೆ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಬೇಕು. ಕಾರ್ಮಿಕ ಕಾರ್ಡ್ ಯಾರು ಯಾರು ಮಾಡಿಸಿಕೊಳ್ಳಬಹುದು ಎಂಬುದನ್ನು ನೋಡುವುದಾದರೆ. ಗ್ಲಾಸ್ ಪಾನಲ್ ಅಂದರೆ ಗ್ಲಾಸ್ ಜೋಡಿಸುವವರು, ಮನೆಗಳಲ್ಲಿ , ಕಂಪನಿಗಳಲ್ಲಿ ಗ್ಲಾಸ್ ಐಟಮ್ಸ್ ಗಳನ್ನು ಜೋಡಿಸುವವರು ಕಾರ್ಮಿಕ ಕಾರ್ಡ್ ಪಡೆಯಲು ಅಪ್ಲೈ ಮಾಡಬಹುದು. ಎಸಿಪಿ ಶೀಟ್ ಗಳನ್ನು ಜೋಡಿಸುವವರು, ಕಾಂಕ್ರೀಟ್ ಮೊಡಲ್, ಕಾಂಕ್ರೀಟ್ ಬ್ರಿಕ್ಸ್, ಬ್ಲಾಕ್ಸ್, ಟೈಲ್ಸ್ ಮೆನುಫಾಕ್ಚರ್ ಮಾಡುವವರು ಕಾರ್ಮಿಕ ಕಾರ್ಡ್ ಮಾಡಿಸಲು ಅಪ್ಲೈ ಮಾಡಬಹುದು.

ಬಸ್ ಶೆಲ್ಟರ್, ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡುವವರು, ಫೌಂಟೇನ್ಸ್, ಸ್ವಿಮ್ಮಿಂಗ್ ಪೂಲ್ ಅರೆಂಜ್ ಮೆಂಟ್ ಮಾಡುವವರು ಕಾರ್ಮಿಕ ಕಾರ್ಡ್ ಪಡೆಯಬಹುದು. ಭೂಮಿಯ ಸಮ ಮಾಡುವವರು, ಕಟಿಂಗ್ ಮಾಡುವವರು, ಸ್ಪ್ರೆಡ್ಡಿಂಗ್ ಮಾಡುವವರು ಕಾರ್ಮಿಕ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಫಿಲ್ಮ್ ಶೂಟಿಂಗ್ ಸಮಯದಲ್ಲಿ ಫಿಲ್ಮ್ ಸೆಟ್ ಹಾಕುವವರು, ರೋಡ್ ಕನ್ಸಟ್ರಕ್ಷನ್, ಅಲ್ಟ್ರೇಷನ್, ಡೆಮೊಲೇಷನ್ ಮಾಡುವವರು, ರೇಲ್ವೆ ಕನಸ್ಟ್ರಕ್ಷನ್ ಮಾಡುವವರು, ಡ್ರೈನೇಜ್ ಕನಸ್ಟ್ರಕ್ಷನ್, ಅಲ್ಟ್ರೇಶನ್, ಡೆಮೊಲೇಷನ್, ಪ್ಲಂಬರ್ ಕೆಲಸ ಮಾಡುವವರು, ಹೊಳೆಗಳಿಗೆ ಕಟ್ಟೆ ಅಥವಾ ಏರು ಹಾಕುವವರು, ಸೇತುವೆ ನಿರ್ಮಾಣ ಮಾಡುವವರು ಕಾರ್ಮಿಕ ಕಾರ್ಡ್ ಪಡೆಯಲು ಅಪ್ಲೈ ಮಾಡಬಹುದು. ಕರೆಂಟ್ ಲೈನ್ ಎಳೆಯುವವರು, ರಿಪೇರಿ ಮಾಡುವವರು, ಫ್ಲೋರ್ ಪೊಲಿಷ್ ಮಾಡುವವರು, ಕ್ರೇನ್ ಓಡಿಸುವ ಡ್ರೈವರ್ಸ್, ಪೇಂಟರ್, ವೆಲ್ಡಿಂಗ್ ಮಾಡುವ ವೆಲ್ಡರ್, ಮನೆ ಕನಸ್ಟ್ರಕ್ಷನ್ ಮಾಡುವವರು, ಸೆಕ್ಯೂರಿಟಿ ಗೇಟ್ ಹಾಕುವವರು ಕಾರ್ಮಿಕ ಕಾರ್ಡ್ ಪಡೆಯಲು ಅಪ್ಲೈ ಮಾಡಬಹುದು.

ನೀರಿನ ಪೈಪ್ ಲೈನ್ ವರ್ಕ್ ಮಾಡುವವರು, ಗ್ರಿಲ್ಸ್, ವಿಂಡೋಸ್, ಡೋರ್ಸ್ ಇನ್ಸ್ಟಾಲೇಷನ್ ಮಾಡುವವರು, ಮಾಲ್ ಗಳಲ್ಲಿ ಲಿಫ್ಟ್, ಎಸ್ಕಲೇಟರ್ ಇನ್ಸ್ಟಾಲೇಷನ್ ಮಾಡುವವರು, ಬ್ರಿಡ್ಜ್ ನಿರ್ಮಾಣ ಮಾಡುವವರು ಡ್ಯಾಂ ನಿರ್ಮಾಣ ಹಾಗೂ ಮೆಂಟೇನ್ ಮಾಡುವ ಕಾರ್ಮಿಕರು ಕಾರ್ಮಿಕ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಈ ಎಲ್ಲಾ ಕೆಲಸಗಾರರು ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಕಾರ್ಮಿಕ ಕಾರ್ಡ್ ಸಿಗುತ್ತದೆ ಅದರ ಸಹಾಯದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ಎಲ್ಲರಿಗೂ ತಿಳಿಸಿ.

Leave A Reply

Your email address will not be published.