ಕುರಿ ಸಾಕಾಣಿಕೆಗೆ ಶೆಡ್ ನಿರ್ಮಿಸುವ ಸುಲಭ ಉಪಾಯ

0 21

ಗ್ರಾಮೀಣ ಪ್ರದೇಶದಲ್ಲಿ ಕುರಿ ಸಾಕಾಣಿಕೆ ಆರ್ಥಿಕ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಕುರಿ ಸಾಕಾಣಿಕೆಯನ್ನು ಸಣ್ಣ ಹಾಗೂ ಅತಿ ಸಣ್ಣ ರೈತರ ಕಿರು ಕಾಮಧೇನು ಎಂದು ಕರೆಯಲಾಗುತ್ತದೆ. ಉಣ್ಣೆ ಮಾಂಸ ಚರ್ಮ ಗೊಬ್ಬರ ಇತ್ಯಾದಿ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವಹಿಸುತ್ತದೆ. ಇದು ಸಣ್ಣ ರೈತರ ಹಾಗೂ ಕೃಷಿ ಕಾರ್ಮಿಕರ ಕಸುಬಾಗಿದೆ. ಕುರಿ ಸಾಕಾಣಿಕೆಯು ಸುಲಭ ಹಾಗೂ ಲಾಭದಾಯಕವಾಗಿದೆ. ನಾವೀಗ ಕರ್ನಾಟಕ ರಾಜ್ಯದ ರಾಣೆಬೆನ್ನೂರಿನ ಒಂದು ಕುರಿ ಸಾಕಾಣಿಕಾ ಕೇಂದ್ರದ ಪರಿಚಯವನ್ನು ಮಾಡಿಕೊಳ್ಳೋಣ. ಈ ಕೇಂದ್ರದ ಮಾಲೀಕರು ಬಸಪ್ಪ ದೊಡ್ಡಮನಿ ಅವರು ಆಗಿರುತ್ತಾರೆ. ಇವರು ಸುಮಾರು ಎಂಟು ತಿಂಗಳಿನಿಂದ ಈ ಕುರಿ ಸಾಕಾಣಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಇವರ ಕಾರ್ಯವೈಖರಿಯ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು ಸುಮಾರು ಹದಿನಾರು ವರೆ ಲಕ್ಷ ಬಂಡವಾಳದೊಂದಿಗೆ ಕುರಿ ಸಾಕಾಣಿಕೆ ಕೇಂದ್ರವನ್ನು ತೆರೆದಿದ್ದಾರೆ. ಇಲ್ಲಿ ವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣವನ್ನು ಮಾಡಿಕೊಂಡಿದ್ದಾರೆ. ಆಹಾರ ಗೊಬ್ಬರ ಹಾಗೂ ಸಾಕಾಣಿಕೆಯ ಭಾಗವನ್ನು ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದಾರೆ. ಇವರೊಬ್ಬರೇ ದೈಹಿಕ ಶ್ರಮಪಟ್ಟು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಕೇಂದ್ರದಲ್ಲಿ ಸುಮಾರು 110 ಕುರಿಗಳು ಹಿಡಿಯುವಷ್ಟು ದೊಡ್ಡದಾದ ಅಂಕಣವನ್ನು ನಿರ್ಮಿಸಿದ್ದಾರೆ. ಕುರಿಗಳಿಗೆ ಮೇವುಗಳನ್ನು ನೀಡಲು ವ್ಯವಸ್ಥಿತವಾದ ಕಾಂಕ್ರೀಟ್ ಕಾಲುವೆಗಳನ್ನು ಹಾಗೂ ಅಡ್ಡ ಕಲ್ಲುಗಳನ್ನು ನಿರ್ಮಿಸಿದ್ದಾರೆ. ಇವರು ಮೊದಲು 25 ಕುರಿಗಳನ್ನು ನಂತರ 75 ಕುರಿಗಳನ್ನು ತದನಂತರ 110 ಕುರಿಗಳ ವರೆಗೆ ಸಾಕಾಣಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ.

ಕುರಿಗಳಿಗೆ ಮೇವು ಗಳಾಗಿ ಬಿಜಾಲ ಸೊಪ್ಪುಗಳನ್ನು ಕಟಾವು ಮಾಡಿಸಿ ಅದರ ಹೊಟ್ಟುಗಳನ್ನು ಆಹಾರವಾಗಿ ನೀಡುತ್ತಾರೆ ಹಾಗೂ ಅದರ ಕಚ್ಚಾ ಗಳನ್ನು ಹಸುವಿನ ಮೇವು ಗಳಾಗಿ ಬಳಸಲಾಗುತ್ತದೆ. ಕುರಿಗಳಿಗೆ ಆಹಾರವಾಗಿ ಶೇಂಗಾ ಹೊಟ್ಟುಗಳನ್ನ ಬಳಸಲಾಗುತ್ತದೆ. ಇವುಗಳನ್ನು ಬೇರೆಬೇರೆಯಾಗಿ ದಾಸ್ತಾನು ಮಾಡಲಾಗುತ್ತದೆ. ಹಾಗೆ ಗೊಂಜೂಲದ ಹಿಟ್ಟುಗಳನ್ನು ಸಹ ಆಹಾರವಾಗಿ ನೀಡಲಾಗುತ್ತದೆ. ಇವರು ಮೊದಲನೆಯದಾಗಿ ಸುಮಾರು 3-4 ತಿಂಗಳದ ಕುರಿಗಳನ್ನು ಕೊಂಡುಕೊಂಡು 8-9 ತಿಂಗಳದ ನಂತರ ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹಾಗೆ ಕುರಿಗಳ ಗೊಬ್ಬರಗಳನ್ನು ಸಹ ಮಾರಾಟ ಮಾಡುತ್ತಾರೆ ಹಾಗೂ ಇದಕ್ಕೆ ಬಹಳ ಬೇಡಿಕೆ ಇದೆ. ವಿಶೇಷ ಹಬ್ಬಗಳ ಸಮಯದಲ್ಲಿ ಇವುಗಳ ಮಾರಾಟ ಅಧಿಕವಾಗಿರುತ್ತದೆ ಎಂಬುದು ಇವರ ಅಭಿಪ್ರಾಯ. ಇದು ಬಸಪ್ಪ ದೊಡ್ಡಮನಿ ಅವರ ಕುರಿ ಸಾಕಾಣಿಕೆ ಕೇಂದ್ರದ ಒಳನೋಟದ ಮಾಹಿತಿಯಾಗಿದೆ ಇವರು ಹೇಳುವಂತೆ ಕುರಿ ಸಾಕಾಣಿಕೆಯು ಲಾಭದಾಯಕ ಹಾಗೂ ಸ್ವಯಂ ಉದ್ಯೋಗವಾಗಿದೆ.

Leave A Reply

Your email address will not be published.