ಜಮೀನಿಗೆ ಸಂಬಂಧಿಸಿದ ಪಹಣಿ ಪತ್ರದಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದು ಎಲ್ಲಿ ಹಾಗೂ ಹೇಗೆ ಮಾಡಿಸಬೇಕು. ಪಹಣಿ ಪತ್ರದಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಮುಂತಾದ ರೈತರಿಗೆ ಅನುಕೂಲವಾಗುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಜಮೀನಿಗೆ ಸಂಬಂಧಿಸಿದ ಪಹಣಿ ಪತ್ರದಲ್ಲಿ ಹೆಸರನ್ನು ತಿದ್ದುಪಡಿ ಮಾಡಿಸಲು ಕೆಲವು ದಾಖಲೆಗಳು ಬೇಕಾಗುತ್ತದೆ. 1964 ರಿಂದ ಇಲ್ಲಿಯವರೆಗೆ ಪ್ರತಿವರ್ಷ ಸಿಗುವ ಪಹಣಿ ಪತ್ರಗಳನ್ನು ತೆಗೆದುಕೊಳ್ಳಬೇಕು. ಪಹಣಿ ಪತ್ರವನ್ನು ತಾಲೂಕು ಆಫೀಸ್ ನಲ್ಲಿರುವ ಪಹಣಿ ಕೇಂದ್ರಗಳಲ್ಲಿ ತೆಗೆದುಕೊಳ್ಳಬೇಕು. 20 ರೂಪಾಯಿ ಬೆಲೆಯ ಈ ಸ್ಟ್ಯಾಂಪ್ ಪೇಪರ್ ಮೇಲೆ ಹೆಸರು ತಿದ್ದುಪಡಿ ಮಾಡುವ ಬಗ್ಗೆ ಟೈಪಿಂಗ್ ಫಾರ್ಮೇಟ್ ನಲ್ಲಿ ಇರಬೇಕು ಹಾಗೂ ವಕೀಲರಿಂದ ತಪ್ಪದೆ ನೋಟರಿ ಮಾಡಿಸಬೇಕು. ಪಹಣಿ ಪತ್ರದಲ್ಲಿ ಹೆಸರನ್ನು ತಿದ್ದುಪಡಿ ಮಾಡುವ ಸಲುವಾಗಿ ಮಾದರಿ ಅರ್ಜಿಯನ್ನು ಸಿದ್ದಮಾಡಬೇಕು, ಮಾದರಿ ಅರ್ಜಿಯಲ್ಲಿ ಪಹಣಿ ಪತ್ರದಲ್ಲಿ ಯಾವ ಹೆಸರನ್ನು ತಿದ್ದುಪಡಿ ಮಾಡಬೇಕು ಎನ್ನುವುದರ ಬಗ್ಗೆ ಟೈಪಿಂಗ್ ನಲ್ಲಿ ಇರಬೇಕು.

ಆಧಾರ ಕಾರ್ಡ್ ಬೇಕಾಗುತ್ತದೆ. ಆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ತಾಲೂಕು ಕಛೇರಿಯಲ್ಲಿರುವ ಭೂಮಿ ಕೇಂದ್ರಕ್ಕೆ ಸಲ್ಲಿಸಬೇಕು. ಭೂಮಿ ಕೇಂದ್ರದಿಂದ ದಾಖಲೆಗಳನ್ನು ಗ್ರಾಮ ಲೆಕ್ಕಿಗರಿಗೆ ಕಳುಹಿಸುತ್ತಾರೆ. ಗ್ರಾಮ ಲೆಕ್ಕಿಗರು ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳು ತಪ್ಪಾಗಿದ್ದಲ್ಲಿ ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾರೆ. ದಾಖಲೆಗಳು ಸರಿಯಾಗಿದ್ದಲ್ಲಿ ಭೂಮಿ ಕೇಂದ್ರಕ್ಕೆ ಪಹಣಿ ತಿದ್ದುಪಡಿ ಮಾಡಲು ಆದೇಶ ಮಾಡುವ ಅಧಿಕಾರವನ್ನು ಗ್ರಾಮ ಲೆಕ್ಕಿಗರು ಹೊಂದಿರುತ್ತಾರೆ. ಭೂಮಿ ಕೇಂದ್ರದಲ್ಲಿ ಪಹಣಿ ಪತ್ರದಲ್ಲಿ ತಿದ್ದುಪಡಿ ಮಾಡುತ್ತಾರೆ. ಕೆಲವು ದಿನಗಳ ನಂತರ ತಿದ್ದುಪಡಿ ಆದ ಪಹಣಿ ನಿಮಗೆ ತಲುಪುತ್ತದೆ. ತಿದ್ದುಪಡಿ ಮಾಡಿದ ಪಹಣಿ ಪತ್ರದಿಂದ ಅನೇಕ ಪ್ರಯೋಜನಗಳಿವೆ.

ಪಹಣಿ ಪತ್ರ ತಿದ್ದುಪಡಿ ಮಾಡಿದರೆ ಜಮೀನು ಮಾರುವಾಗ, ಕೊಂಡು ಕೊಳ್ಳುವಾಗ, ಕ್ರಯ ಮಾಡುವಾಗ, ಇಬ್ಭಾಗ ಮಾಡುವಾಗ ರಿಜಿಸ್ಟ್ರೇಷನ್ ಮಾಡುವಾಗ ಪಹಣಿ ಪತ್ರ ಬೇಕಾಗುತ್ತದೆ. ಈಗಿನ ದಿನಗಳಲ್ಲಿ ಎಲ್ಲಾ ದಾಖಲಾತಿಗಳು ಆಧಾರ ಬೇಸ್ಡ್ ಇರುವುದರಿಂದ ಪಹಣಿ ತಿದ್ದುಪಡಿ ಮಾಡಿದರೆ ಸರ್ಕಾರದಿಂದ ಸಿಗುವ ಸಹಾಯಧನ ಸರಿಯಾಗಿ ತಲುಪುತ್ತದೆ ಅಲ್ಲದೆ ಸರಿಯಾದ ಸಮಯಕ್ಕೆ ಸಿಗುತ್ತದೆ. ಪಿಎಂ ಕಿಸಾನ್ ಅಥವಾ ಇನ್ನಿತರ ಸರ್ಕಾರದ ಯಾವುದೆ ಯೋಜನೆಯಿಂದ ಹಣ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಡಿಬಿಟಿ ಮೂಲಕ ಬರಲು ಪಹಣಿ ತಿದ್ದುಪಡಿ ಅವಶ್ಯವಾಗಿ ಬೇಕಾಗುತ್ತದೆ. ಬ್ಯಾಂಕ್ ಇಂದ ಕ್ರಾಪ್ ಲೋನ್ ಪಡೆಯುವುದಾದರೆ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರದಲ್ಲಿ ಹೆಸರು ಸರಿಯಾಗಿದ್ದರೆ ಮಾತ್ರ ಲೋನ್ ಸಿಗುತ್ತದೆ. ಈ ಮಾಹಿತಿ ರೈತರಿಗೆ ಉಪಯುಕ್ತವಾಗಿದೆ, ಎಲ್ಲ ರೈತರಿಗೂ ತಿಳಿಸಿ.

Leave a Reply

Your email address will not be published. Required fields are marked *