ಬ್ಯಾಂಕ್ ಕೆಲಸ ಬಿಟ್ಟು ಇದ್ದ ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ಇಂದು 450 ಎಕರೆ ಗಳಿಸಿದು ಹೇಗೆ ನೋಡಿ

0 8

ಭೂಮಿಯಲ್ಲಿ ಕೆಲಸ ಮಾಡುವುದರಿಂದ ಆದಾಯ ಗಳಿಸಲು ಆಗುವುದಿಲ್ಲ ಖರ್ಚು ಹೆಚ್ಚು ಎಂದು ಮೂಗು ಮುರಿಯುವ ಯುವಕರೆ ಹೆಚ್ಚು. ಕರ್ನಾಟಕದ ಕಿಶನ್ ಬ್ರದರ್ಸ್ ಆಂಧ್ರಪ್ರದೇಶದ ಪೆನುಕೊಂಡ ಊರಿನಲ್ಲಿ ವ್ಯವಸಾಯದ ಉದ್ದೇಶ ಇಟ್ಟುಕೊಂಡು ತಮ್ಮದೆ ಆದ ಸಂಸ್ಥೆಯನ್ನು ಸ್ಥಾಪಿಸಿ ಆದಾಯ ಪಡೆಯುತ್ತಿದ್ದಾರೆ. ಹಾಗಾದರೆ ಆ ಸಂಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕಿಶನ್ ಬ್ರದರ್ಸ್ ಎಂದೇ ಖ್ಯಾತಿ ಪಡೆದ ಅಮಿತ್ ಕಿಶನ್ ಹಾಗೂ ಅಶ್ರಿತ್ ಕಿಶನ ಅವರು ಹುಟ್ಟಿ ಬೆಳೆದಿದ್ದು ಹಾಗೂ ಶಿಕ್ಷಣ ಪಡೆದಿದ್ದು ಚಿಕ್ಕಬಳ್ಳಾಪುರದಲ್ಲಿ. ನಂತರ ಬೆಂಗಳೂರಿನಲ್ಲಿ ಬ್ಯಾಂಕ್ ನಲ್ಲಿ ಕೆಲಸ ಮಾಡಿದರು ಸಂಬಳ ಚೆನ್ನಾಗಿ ಬರುತ್ತಿತ್ತು ಆದರೆ ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂಬ ಆಸೆಯಿಂದ ಅವರು ಆಂಧ್ರಪ್ರದೇಶದ ಪೆನುಕೊಂಡದಲ್ಲಿ ಹೆಬ್ಬೇವು ಫ್ರೆಶ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಹೈನುಗಾರಿಕೆಗೆ ಸಂಬಂಧಿಸಿದ ಈ ಸಂಸ್ಥೆಯಲ್ಲಿ ಅನೇಕ ಹಸುಗಳನ್ನು ಸಾಕಿದ್ದಾರೆ, ಹಸುಗಳ ಗೊಬ್ಬರವನ್ನು ಹೊಲಕ್ಕೆ ಬಳಸುತ್ತಾರೆ. ಹಾಲನ್ನು ಕೂಡ ಮಾರಾಟ ಮಾಡುತ್ತಾರೆ.

ಆರ್ಗ್ಯಾನಿಕ್ ವಿಧಾನಗಳಲ್ಲಿ ಅವರು ಬೆಳೆ ಬೆಳೆಯುತ್ತಾರೆ. ಅವರ ತಾತ ಹಸು ಸಾಕಿದ್ದರು ನಂತರ ಅವರ ತಂದೆ ಹೈನುಗಾರಿಕೆಯನ್ನು ಮಾಡಲಿಲ್ಲ ಕಿಶನ್ ಬ್ರದರ್ಸ್ ಅವರಿಗೆ ತಮ್ಮ ತಾತ ಮಾಡಿಕೊಂಡು ಬಂದ ಹೈನುಗಾರಿಕೆಯನ್ನು ಮುಂದುವರಿಸಬೇಕೆಂಬ ಆಸೆ ಹುಟ್ಟಿತು ಅದನ್ನು ಪೂರೈಸಿದರು. ಬೆಂಗಳೂರಿಗೆ ಹತ್ತಿರದಲ್ಲಿ ಬೆಳೆ ಬೆಳೆಯಲು ಅನುಕೂಲವಾಗುವಷ್ಟು ನೀರಾವರಿ ಜಮೀನು ಇರುವ ಪ್ರದೇಶವನ್ನು ಹುಡುಕಿದಾಗ ಕಿಶನ್ ಬ್ರದರ್ಸ್ ಅವರಿಗೆ ಆಂಧ್ರಪ್ರದೇಶದ ಪೆನುಕೊಂಡ ಸ್ಥಳದ ಬಗ್ಗೆ ತಿಳಿಯಿತು ಹೀಗಾಗಿ ಅಲ್ಲಿಯೆ ತಮ್ಮ ಸಂಸ್ಥೆಯನ್ನು ಪ್ರಾರಂಭಿಸಿದರು. ನಿಸರ್ಗ ವುಡ್ಸ್ ಎಂಬ ಕಂಪನಿಯನ್ನು ಪ್ರಾರಂಭಿಸಿ ಅನೇಕ ಬ್ರಾಂಚ್ ಗಳನ್ನು ಸ್ಥಾಪಿಸಿದರು.

ಹೆಬ್ಬೇವು ಫಾರ್ಮ್ಸ್ ಎನ್ನುವುದು ನಿಸರ್ಗ ವುಡ್ಸ್ ಕಂಪನಿಯ ಒಂದು ಬ್ರಾಂಚ್. ಹೆಬ್ಬೇವು ಫಾರ್ಮ್ಸ್ ನಲ್ಲಿ ವ್ಯವಸಾಯ ಮಾಡಲು ಆಗದೆ ಇರುವ ವ್ಯವಸಾಯದ ಭೂಮಿ ಬೇಕಾಗಿರುವವರಿಗೆ ಭೂಮಿಯನ್ನು ಮಾರಿ ಓನರ್ ಶಿಪ್ ಕೊಟ್ಟು ಸರ್ವಿಸ್ ಅಗ್ರೀಮೆಂಟ್ ಎಂದು 15ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡು ಭೂಮಿಯಲ್ಲಿ ಇವರೆ ವ್ಯವಸಾಯ ಮಾಡುತ್ತಾರೆ. ಬಂದಿರುವ ಆದಾಯದಲ್ಲಿ ಇಬ್ಬರಿಗೂ ಪಾಲು ಇರುತ್ತದೆ. 15 ವರ್ಷಗಳ ನಂತರ ಅದನ್ನು ಕಂಟಿನ್ಯೂ ಮಾಡಬಹುದು ಅಥವಾ ಗ್ರಾಹಕರು ಅವರ ಜಮೀನಿನಲ್ಲಿ ಅವರೆ ವ್ಯವಸಾಯ ಮಾಡಿಕೊಳ್ಳಬಹುದು ಅಥವಾ ಗ್ರಾಹಕರಿಗೆ ಜಮೀನನ್ನು ಮಾರುವ ಮನಸಿದ್ದರೆ ಹೆಬ್ಬೇವು ಫಾರ್ಮ್ ಅವರು ಹಣಕೊಟ್ಟು ಖರೀದಿಸುತ್ತಾರೆ.

ಸುಮಾರು 180 ಜನರು ಇವರ ಗ್ರಾಹಕರಾಗಿದ್ದಾರೆ. ಅವರ ಗ್ರಾಹಕರು ದೇಶ-ವಿದೇಶಗಳಲ್ಲಿ ಇದ್ದಾರೆ. ಹೆಬ್ಬೇವು ಫ್ರೆಶ್ ಎನ್ನುವ ಇನ್ನೊಂದು ಬ್ರಾಂಚ್ ಸೂಪರ್ ಮಾರ್ಕೆಟ್ ಆಗಿದ್ದು ಬೆಳೆದ ಬೆಳೆಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ. ಸೂಪರ್ ಮಾರ್ಕೆಟ್ ನಿಂದ ಗ್ರಾಹಕರು ನೇರವಾಗಿ ಖರೀದಿಸುತ್ತಾರೆ.

ಹಾಲು ಮಾರಾಟ ಮಾಡಲು ಇನ್ನೊಂದು ಸೂಪರ್ ಮಾರ್ಕೆಟ್ ಅನ್ನು ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಅವರು 6-8 ವರ್ಷ ಕಷ್ಟಪಟ್ಟು ದುಡಿದು 30- 40 ಲಕ್ಷ ರೂಪಾಯಿ ಬಂಡವಾಳ ಹಾಕಿ 10 ಎಕರೆ ಜಮೀನನ್ನು ಖರೀದಿಸುತ್ತಾರೆ, ಅವರಿಗೆ ಮನೆಯಲ್ಲಿ ಬೆಂಬಲವಾಗಿ ನಿಲ್ಲುತ್ತಾರೆ. ಇಂದು 450 ರಿಂದ 500 ಎಕರೆ ಜಮೀನನ್ನು ಹೊಂದಿದ್ದಾರೆ. ಭೂಮಿಯನ್ನು ಖರೀದಿಸುವ ಗ್ರಾಹಕರ ಬೇಡಿಕೆಯ ಅನುಗುಣವಾಗಿ ಭೂಮಿಯನ್ನು ಉಳುಮೆ ಮಾಡಲಾಗುತ್ತದೆ.

ಆದಾಯ ಬೇಗ ಬರಬೇಕು ಎನ್ನುವ ಗ್ರಾಹಕರಿಗೆ 10 ರೀತಿ ತರಕಾರಿಗಳನ್ನು ಬೆಳೆಯಲಾಗುತ್ತದೆ, ಲಾಂಗ್ ಟರ್ಮ್ ಆದಾಯ ಬೇಕು ಎನ್ನುವ ಗ್ರಾಹಕರಿಗೆ ಮಿಲಿಯಡುಪಿಯಾ, ಟೀಕ್, ಶ್ರೀಗಂಧ ಬೆಳೆಯಲಾಗುತ್ತದೆ. ಹೊಲಕ್ಕೆ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು ಎಂದು ಉತ್ತಮ ತಳಿಯ ಹಸುಗಳನ್ನು ಗೊಬ್ಬರಕ್ಕಾಗಿ ಸಾಕುತ್ತಾರೆ ಆದರೆ ರೋಗದಿಂದ ಹಸುಗಳು ಸಾಯುತ್ತವೆ. ನಂತರ ದೇಶಿಯ ಹಸುಗಳನ್ನು ಸಾಕಿದರು ಇದರಲ್ಲಿ ಅವರು ಯಶಸ್ವಿಯಾದರು. ಅವರ ಬಳಿ ಈಗ ಸುಮಾರು 450 ಹಸುಗಳಿವೆ. ಪ್ರತಿದಿನ ಸುಮಾರು ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಲ್ಲಿಯ ಹಾಲನ್ನು ಕರ್ನಾಟಕದ ಬೆಂಗಳೂರಿನಲ್ಲಿ ಒದಗಿಸಲಾಗುತ್ತಿದೆ.

ಅವರ ಸಂಸ್ಥೆಯಲ್ಲಿ ಖಾಯಂ ಆಗಿ 100ಜನರಿಗಿಂತ ಹೆಚ್ಚು ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ. 100-150 ಜನರು ದಿನಗೂಲಿ ಕೆಲಸಗಾರರು ಬರುತ್ತಾರೆ. ಮೊದಲ ಲಾಕ್ ಡೌನ್ ಆದ ಸಮಯದಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಆಗದೆ ಸಮಸ್ಯೆ ಎದುರಿಸಿದರು. ಆಗ ಅವರದೆ ಒಂದು ಸೂಪರ್ ಮಾರ್ಕೆಟ್ ಪ್ರಾರಂಭಿಸಿದರು. ಹೆಬ್ಬೇವು ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಲು ಆನ್ಲೈನ್ ನಲ್ಲಿ ಹೆಬ್ಬೇವು ಫಾರ್ಮ್ ಫ್ರೆಷ್ ಎಂಬ ಪೋರ್ಟಲ್ ಇದೆ ಅಲ್ಲದೆ ಹೆಬ್ಬೇವು ಫ್ರೆಶ್ ಎಂಬ ಮೊಬೈಲ್ ಆಪ್ ಕೂಡ ಇದ್ದು ಮನೆಗಳಿಗೆ ನೇರವಾಗಿ ತಲುಪುವ ವ್ಯವಸ್ಥೆ ಇದೆ.

ಈ ಸಂಸ್ಥೆಯಲ್ಲಿ ಕಿಶನ್ ಬ್ರದರ್ಸ್ ಅವರ ಕುಟುಂಬದವರೆಲ್ಲರೂ ಕೆಲಸಮಾಡುತ್ತಾರೆ. ಕರ್ನಾಟಕದಲ್ಲಿಯೂ ಹೆಬ್ಬೇವು ಫಾರ್ಮ್ ಸಂಸ್ಥೆಯನ್ನು ಸ್ಥಾಪನೆ ಮಾಡುವ ಗುರಿಯನ್ನು ಕಿಶನ್ ಬ್ರದರ್ಸ್ ಹೊಂದಿದ್ದಾರೆ. ಒಟ್ಟಿನಲ್ಲಿ ಭೂಮಿಯಲ್ಲಿ ದುಡಿಮೆಯ ಸಾರ್ಥಕತೆಯನ್ನು ಪಡೆದುಕೊಂಡ ಕಿಶನ್ ಬ್ರದರ್ಸ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.