ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ ಚಾಣಕ್ಯ ಎಂದೇ ಪ್ರಖ್ಯಾತಿ ಪಡೆದಿರುವ ವಿಷ್ಣುಗುಪ್ತ ಮಹಾನ್ ಗ್ರಂಥ ಅರ್ಥಶಾಸ್ತ್ರದ ಕರ್ತೃ. ಚಾಣಕ್ಯ ರಚಿಸಿದ ಈ ಅರ್ಥಶಾಸ್ತ್ರ ಕೃತಿಯು ಯಾವುದೇ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದು ಅಲ್ಲ ಆಗಿನ ಕಾಲದ ರಾಜಕೀಯ ವಿಚಾರಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಅದೇ ರೀತಿ ಚಾಣಕ್ಯ ತನ್ನ ಈ ಕೃತಿಯಲ್ಲಿ ನಮ್ಮ ಇಂದಿನ ಜೀವನಕ್ಕೆ ನಾವು ಪಾಲಿಸಿಕೊಳ್ಳಬಹುದಾದ ಕೆಲವು ಸೂತ್ರಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿ ಒಂದನ್ನು ನಾವು ತಿಳಿಯೋಣ. ಚಾಣಕ್ಯನ ಈ ಐದು ಸೂತ್ರಗಳನ್ನು ನಾವು ಪಾಲನೇ ಮಾಡುವುದರಿಂದ ನಮ್ಮ ಜೀವನದಲ್ಲಿ ಕಷ್ಟಗಳು ಹಾಗೂ ಸೋಲು ನಮ್ಮ ಹತ್ತಿರ ಸುಳಿಯುವುದಿಲ್ಲ. ಆ ಐದು ಸೂತ್ರಗಳು ಯಾವುದು ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಚಾಣಕ್ಯ ಹೇಳಿದ ಜೀವನದ ಪಾಠಗಳು ಇಂದಿಗೂ ಪ್ರಸ್ತುತದಲ್ಲಿ ಇದೆ. ಚಾಣಕ್ಯನ ನೀತಿ ಪಾಠವನ್ನು ಕೇಳಿದರೆ ಈಗಲೂ ಇಂದಿಗೂ ಜೀವನದಲ್ಲಿ ನಮಗೆ ಅತಿ ಉತ್ಸಾಹ ಮೂಡುತ್ತದೆ. ಒಂದನೆಯ ಸೂತ್ರ. ಬೇರೆಯವರು ಮಾಡುವ ತಪ್ಪುಗಳನ್ನು ನೋಡಿ ನೀವು ನಿಮ್ಮ ಜೀವನದಲ್ಲಿ ಎನನ್ನಾದರೂ ಕಲಿಯಿರಿ. ಅಷ್ಟೂ ತಪ್ಪುಗಳನ್ನು ನೀವು ಮಾಡುವವರೆಗೆ ಅಷ್ಟು ಸಮಯ ನೀವು ಬದುಕಿರುವುದಿಲ್ಲ.
ಎರಡನೇ ಸೂತ್ರ ನಿಮಗೆ ಹಣದ ಸಮಸ್ಯೆ ಇದ್ದರೆ ಅದನ್ನು ಯಾರ ಬಳಿಯೂ ಕೂಡಾ ಚರ್ಚೆ ಮಾಡಬಾರದು. ನಿಮ್ಮ ಆರ್ಥಿಕ ಸಮಸ್ಯೆಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು.
ಮೂರನೆಯ ಸೂತ್ರ ತನ್ನ ಹೆಂಡತಿಯ ಬಗ್ಗೆ ಬೇರೆಯವರ ಬಳಿ ಹೇಳುವವರು ತಾವು ಅಂದುಕೊಂಡಿದ್ದನ್ನು ಬೇರೆಯದ್ದನ್ನೆ ಹೇಳುತ್ತಾರೆ. ನಾಲ್ಕನೆಯ ಸೂತ್ರ ಚಾಣಕ್ಯ ಹೇಳುವಂತೆ ಒಬ್ಬ ಮನುಷ್ಯ ತನ್ನ ಕೆಲಸದಿಂದ ಮಾತ್ರ ದೊಡ್ಡವನಾಗುತ್ತನೆಯೆ ವಿನಃ ತನ್ನ ಹುಟ್ಟಿನಿಂದ ಅಲ್ಲಾ.
ನಮ್ಮ ಸಂತೋಷದ ಜೀವನಕ್ಕೆ ಚಾಣಕ್ಯ ಹೇಳುವ ಕೊನೆಯ ಹಾಗೂ ಐದನೆಯ ಸೂತ್ರ ಎಂದರೆ, ಬೇರೆಯವರ ಬಳಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳುವ ಜನರನ್ನು ಅಪಹಾಸ್ಯ ಮತ್ತು ಅಸಡ್ಡೆಯಿಂದ ನೋಡಿಕೊಳ್ಳಲಾಗುತ್ತದೆ ಮತ್ತು ಬೆನ್ನ ಹಿಂದೆಯೂ ಹಾಸ್ಯ ಮಾಡಿ ನಗುತ್ತಾರೆ. ಹಾಗಾಗಿ ಈ ಸೂತ್ರಗಳನ್ನು ನಾವುಗಳು ನೆನಪಿನಲ್ಲಿ ಇತ್ತು ಕೊಂಡು ಜೀವನ ಮಾಡಿದರೆ ನಮ್ಮ ಜೀವನ ಸುಂದರಮಯವಾಗುವುದು.