ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಕಾರ್ಯಕ್ರಮದ ಕುರಿತಾಗಿ ಎಲ್ಲರಿಗೂ ತಿಳಿದಿದೆ. ಸೃಜನ್ ಲೋಕೇಶ್ ಅವರ ಸಾರಥ್ಯದಲ್ಲಿ , ಲೋಕೇಶ್ ಪ್ರೊಡಕ್ಷನ್ ಅಡಿಯಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಈಗಾಗಲೇ ಹಲವಾರು ಸಂಚಿಕೆಗಳನ್ನು ಪೂರೈಸಿದ್ದು, ಲಾಕ್ಡೌನ್ ಮುಗಿದ ನಂತರ ಈಗ ಮತ್ತೆ ಪುನರಾಂಭಗೊಂಡಿದೆ. ಮಜಾ ಟಾಕೀಸ್ ಅಂದರೆ ಬರೀ ನಗುವಿನ ಅರಮನೆ ಅಂತಲೇ ಹೇಳಬಹುದು. ಸಾಕಷ್ಟು ಕಾಮಿಡಿ ಕಲಾವಿದರನ್ನು ಒಳಗೊಂಡ ಮಜಾ ಟಾಕೀಸ್ ಒಂದು ಉತ್ತಮ ಮನೋರಂಜನಾ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಆದರೆ ಈಗ ಆರಂಭವಾಗಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನಾವು ಇಷ್ಟು ದಿನ ನೋಡಿದ ಒಬ್ಬ ವ್ಯಕ್ತಿಯನ್ನು ಇನ್ನುಮುಂದೆ ಕಾಣುವುದಿಲ್ಲ ಅವರ ಪಾತ್ರದ ಬದಲಾಗಿ ಬೇರೊಬ್ಬರನ್ನು ತರಲಾಗಿದೆ. ಇನ್ನು ಮುಂದೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕಾಣಿಸದ ಆ ಪಾತ್ರ ಯಾರು? ಯಾವ ಕಾರಣಕ್ಕೆ ಅವರು ಈ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ? ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಇಷ್ಟು ದಿನ ಸೃಜನ್ ಅವರ ಹೆಂಡತಿಯಾಗಿ ರಾಣಿ ಪಾತ್ರ ನಿಭಾಯಿಸುತ್ತಿದ್ದ ಶ್ವೇತ ಚಂಗಪ್ಪ ಅವರು ಈ ಬಾರಿ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರ ಬದಲಿಗೆ ಇನ್ನೊಂದು ಹೊಸ ಪಾತ್ರ ಕಾಣಿಸಿಕೊಳ್ಳಲಿದೆ. ಅವರು ಯಾರು ಅನ್ನೋದನ್ನ ನೋಡೋಣ. ಆಗಸ್ಟ್ ೨೯ ರಿಂದ ಪ್ರತೀ ಶನಿವಾರ ಹಾಗೂ ಭಾನುವಾರ ರಾತ್ರಿ ಎಂಟು ಗಂಟೆಗೆ ಮಜಾ ಟಾಕೀಸ್ ಕಾರ್ಯಕ್ರಮ ಆರಂಭವಾಗಲಿದೆ. ಈಗಾಗಲೇ ಎರಡು ಸೀಸನ್ ಗಳನ್ನು ಯಶಸ್ವಿ ಆಗಿ ಪೂರೈಸಿದ ಇದು ಮಜಾ ಟಾಕೀಸ್ ಕಾರ್ಯಕ್ರಮದ ಮೂರನೇ ಸೀಸನ್ ಆಗಿದೆ. ಅದರ ಪ್ರೋಮೋ ಕೂಡಾ ಬಿಡುಗಡೆ ಆಗಿತ್ತು. ಆದರೆ ಈಗಾಗಲೇ ಪ್ರಸಾರ ಆಗಿರುವ ಪ್ರಮೋಗಳಲ್ಲಿ ಯಾವುದರಲ್ಲಿಯೂ ಕೂಡಾ ಶ್ವೇತ ಚಂಗಪ್ಪ ಅವರು ಕಾಣಿಸಿಕೊಳ್ಳಲಿಲ್ಲ. ಅವರ ಬದಲಿಗೆ ಇನ್ನೊಂದು ಹೊಸ ಪಾತ್ರ ಬರಲಿದೆ. ಮಜಾ ಟಾಕೀಸ್ ಸೀಸನ್ ಒಂದು ಹಾಗೂ ಎರಡರಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡ ಶ್ವೇತ ಚಂಗಪ್ಪ ಅವರು ಮೂರನೇ ಸೀಸನ್ ಅಲ್ಲಿ ಇರುವುದಿಲ್ಲ. ನಟನೆಗೆ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವ ಶ್ವೇತಾ ಈಗ ಸಧ್ಯ ತಮ್ಮ ಪುಟ್ಟ ಮಗ ಜೀಯನ್ ಜೊತೆ ಕಾಲ ಕಳೆಯುತ್ತಾ ಇದ್ದಾರೆ. ಈ ಕಾರಣದಿಂದಾಗಿ ಶ್ವೇತ ಚಂಗಪ್ಪ ಅವರು ಈ ಬಾರಿಯ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಈಗ ಶ್ವೇತ ಚಂಗಪ್ಪ ಅವರ ಬದಲಿಗೆ ಶೇಷಮ್ಮ ಎಂಬ ಪಾತ್ರದ ಮೂಲಕ ನಟಿ ಪಲ್ಲವಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದಿದೆ.

ಪಲ್ಲವಿ ಅವರು ಖ್ಯಾತ ಧಾರಾವಾಹಿಗಳಾದ ಜೋಡಿ ಹಕ್ಕಿ ಹಾಗೂ ಸೇವಂತಿ ಈ ಎರಡೂ ಧಾರವಾಹಿಗಳಲ್ಲಿ ನಟಿಸಿದ್ದರು. ಖಳನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದ ಪಲ್ಲವಿ ಅವರು ಈಗ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಪ್ರೇಕ್ಷಕರನ್ನು ನಗುವಿನತ್ತ ಕೊಂಡೊಯ್ಯಲು ಈ ಮೂಲಕ ಮಜಾ ಟಾಕೀಸ್ ಸೀಸನ್ ಮೂರರಲ್ಲಿ ಮಿಂಚಲಿದ್ದಾರೆ. ಇದುವರೆಗೂ ಖಳನಾಯಕಯಾಗಿ, ಅಂತದ್ದೇ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಪಲ್ಲವಿ ಈಗ ಪ್ರೇಕ್ಷಕರಿಗೆ ಹೇಗೆ ನಗುವಿನ ಊಟ ಬಡಿಸುವರು ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!