ನಮ್ಮ ಜೀವನದ ಕಷ್ಟ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು

0 11

ಸಮಸ್ಯೆ, ದುಃಖ ಎಲ್ಲರಿಗೂ ಇರುತ್ತದೆ ನಾವು ಇತರರೊಂದಿಗೆ ಏನನ್ನು ಹಂಚಿಕೊಳ್ಳಬೇಕು, ಹೇಗಿರಬೇಕು ಎಂಬುದನ್ನು ಒಂದು ಕಥೆಯ ಮೂಲಕ ತಿಳಿಯೋಣ. ಬಹಳ ವರ್ಷಗಳ ಹಿಂದೆ ಒಂದು ಆಶ್ರಮವಿತ್ತು ಸುತ್ತ 40ಹಳ್ಳಿಗಳಿಗೆ ಪ್ರಿಯವಾಗಿತ್ತು. ನೊಂದು ಬೆಂದವರಿಗೆ ಆಶ್ರಮ ನೆಮ್ಮದಿಯ ತಾಣವಾಗಿತ್ತು. ಎಲ್ಲರೊಂದಿಗೂ ಸದಾ ನಗು ನಗುತ್ತಾ ಮಾತನಾಡುವ ಅಲ್ಲಿಯ ಯೋಗಿಯನು ಕಂಡರೆ ಜನರಿಗೆ ಸಮಾಧಾನ ಆಗಾಗ ಜನರು ಆಶ್ರಮಕ್ಕೆ ಬರುತ್ತಿದ್ದರು ಒಮ್ಮೆ ಆಶ್ರಮದಲ್ಲಿ ಉತ್ಸವ ಮಾಡಬೇಕೆಂದು ನಿರ್ಧರಿಸಿದರು ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡರು ಸಾವಿರಾರು ಜನರು ಆಶ್ರಮದಲ್ಲಿ ಸೇರಿದ್ದರು ಅಲ್ಲೊಬ್ಬ ವ್ಯಕ್ತಿ ಜೋರಾಗಿ ಎಲ್ಲರಿಗೂ ಕೇಳಿಸುವ ಹಾಗೆ ಯೋಗಿಗಳಿಗೆ ನೀವು ಯಾವಾಗಲೂ ನಮ್ಮನ್ನು ಖುಷಿ ಪಡಿಸುತ್ತೀರಿ ನಿಮ್ಮ ಬಗ್ಗೆ ಏನು ಹೇಳುವುದಿಲ್ಲ ಈ ಜಾಗ ಬಿಟ್ಟು ಎಲ್ಲೂ ಹೋಗುವುದಿಲ್ಲ ಏಕೆ ಹೇಳಿ ಎಂದು ಕೇಳಿದನು ಅಲ್ಲಿದ್ದ ಉಳಿದವರು ಹೇಳಬೇಕೆಂದು ಕೇಳಿಕೊಂಡರು.

ಆಗ ಯೋಗಿಯವರಿಗೆ ಹೇಳಲೇಬೇಕಾಯಿತು ಜೀವನದಲ್ಲಿ ಎಲ್ಲರಿಗೂ ಅವರದೆ ಆದ ನೋವು, ಯಾತನೆ ಇರುತ್ತದೆ ನನಗೂ ಕೂಡ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ನನ್ನ ಎರಡು ಕಾಲುಗಳನ್ನು ಕಳೆದುಕೊಂಡೆ ಸಂಚರಿಸಲು ಅಸಮರ್ಥನಾದ ನನಗೆ ನೆಮ್ಮದಿ ನೀಡಿದ ಈ ಜಾಗದಲ್ಲಿ ವಿಶ್ರಮಿಸಲು ನಿರ್ಧರಿಸಿದೆ ಎನ್ನುತ್ತಾ ತಮ್ಮ ಕತ್ತರಿಸಿದ ಕಾಲುಗಳನ್ನು ಅಲ್ಲಿನ ಜನರಿಗೆ ತೋರಿಸಿದರು ಆಗ ಆಶ್ಚರ್ಯಗೊಂಡ ಜನರು ಮರುಗಿದರು ನಿಮ್ಮ ನೋವನ್ನು ನಮ್ಮ ಬಳಿಯಾದರೂ ಹೇಳಿಕೊಳ್ಳಬಹುದಿತ್ತು ಎಂದು ಕೇಳಿದರು ಆಗ ಯೋಗಿಗಳು ಕಾಲು ಕಳೆದುಕೊಂಡಿದ್ದು ನನ್ನ ಸಮಸ್ಯೆ ಅದನ್ನು ಬೇರೆಯವರಿಗೆ ತೋರಿಸಿ ಯಾಕೆ ನೋವನ್ನು ನೀಡಲಿ ಯೋಗ ಮಾರ್ಗವನ್ನು ಹಿಡಿದ ನಾನು ಸದ್ವಿಚಾರಗಳನ್ನು ಹಂಚುವುದು ನನ್ನ ಧರ್ಮವಾಗಿದೆ ಎಂದು ಹೇಳಿದಾಗ ಜನರಿಗೆ ಮಾತೆ ಹರಡಲಿಲ್ಲ.

ಜೀವನವೆಂದರೆ ಭಗವಂತನು ಕರುಣಿಸಿದ ಸುಂದರ ಅವಕಾಶ ಎಷ್ಟು ಸಾಧ್ಯವೋ ಅಷ್ಟು ಖುಷಿಯ ವಿಚಾರಗಳನ್ನು ಹಂಚಿಕೊಂಡಾಗ ನಮ್ಮ ಬದುಕಿಗೆ ಮೌಲ್ಯ ಬರುತ್ತದೆ. ನಮ್ಮ ದುಃಖವನ್ನು ಆಪ್ತರ ಬಳಿ ಹೇಳಿಕೊಂಡು ಭಾರ ಕಡಿಮೆ ಮಾಡಿಕೊಂಡರೆ ತಪ್ಪಿಲ್ಲ ಆದ್ರೆ ಎಲ್ಲರ ಬಳಿ ಹೇಳಿಕೊಂಡರೆ ದುಃಖಿ ಎಂದು ನಮ್ಮನ್ನು ದೂರ ತಳ್ಳುತ್ತಾರೆ. ಮಗುವಿನ ಸಾವಿನ ಸುದ್ದಿಯೊಂದಿಗೆ ಮನೆ ಮನೆಗೆ ತಿರುಗಿದ ಕಿಸಾ ಗೌತಮಿಗೆ ಎಲ್ಲರೂ ತಮ್ಮ ದುಃಖವನ್ನು ಹೇಳಿಕೊಂಡರು ಜನರಿಗೆ ನಾವು ಏನನ್ನು ಹೇಳುತ್ತೇವೊ ಅದನ್ನೆ ಜನರಿಂದ ಪಡೆಯುತ್ತೇವೆ ಏನನ್ನು ಬಿತ್ತುತ್ತೇವೊ ಅದನ್ನೇ ಬೆಳೆಯಾಗಿ ಪಡೆಯುತ್ತೇವೆ. ಏನ ಕೇನ ಪ್ರಕಾರೇಣ ಯಸ್ಯ ಕಸ್ಯಪಿ ದೇಹಿನ ಸಂತೋಷಂ ಜನಯತ್ ಪ್ರಜ್ಞಸ್ಥ ದೇವೆಶ್ವರ ಪೂಜನಂ ಎಂದರೆ ವ್ಯಕ್ತಿಯೊಬ್ಬನನ್ನು ಯಾವುದಾದರೂ ರೂಪದಲ್ಲಿ ಖುಷಿ ಪಡಿಸುವುದೆ ಪ್ರಾಜ್ಞನ ಲಕ್ಷಣ. ಸುತ್ತಲಿನವರಲ್ಲಿ ಸಂತೋಷ ಹರಡುವುದೆ ಈಶ್ವರನ ಪೂಜೆ. ನಗುತ್ತಾ ನಗಿಸುವುದೆ ಜೀವನ ಧರ್ಮ ಎಂದು ಡಿ.ವಿ.ಜಿ ಯವರು ಹೇಳಿದ್ದಾರೆ. ನೋವು, ದುಃಖ ಎಲ್ಲರ ಬಳಿಯೂ ಇರುತ್ತದೆ ನಮ್ಮ ದುಃಖವನ್ನು ಹಂಚಿಕೊಂಡಾಗ ನಮಗೆ ಸಮಾಧಾನ ಹೇಳುವವರಿಗಿಂತ ನಮ್ಮನ್ನು ಹೀಯಾಳಿಸುವವರೇ ಹೆಚ್ಚು, ಒಳ್ಳೆಯವರು ಇರುತ್ತಾರೆ ನಮ್ಮ ದೌರ್ಬಲ್ಯ ಹೇಳುವ ಮುನ್ನ ಎಚ್ಚರದಿಂದಿರಬೇಕು. ಆದಷ್ಟು ಸಂತೋಷವನ್ನು ಹಂಚಿ ಸಂತೋಷವಾಗಿರೋಣ.

Leave A Reply

Your email address will not be published.