ಕಾರ್ಮಿಕರ ಅಥವಾ ಕಟ್ಟಡ ಕಾರ್ಮಿಕರ ಬಳಿ ಕಾರ್ಮಿಕರ ಕಾರ್ಡ್ (ಲೇಬರ್ ಕಾರ್ಡ್ ) ಇದ್ದರೆ ಅಂತಹವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ವಿದ್ಯಾರ್ಥಿವೇತನ ರೂಪದಲ್ಲಿ ಪಡೆಯಬಹುದು. ಹೇಗೆ ಪಡೆಯುವುದು ಮತ್ತು ಎಷ್ಟು ಪಡೆಯಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಕಟ್ಟಡ ಕಾರ್ಮಿಕರ ಕಾರ್ಡ್ (ಲೇಬರ್ ಕಾರ್ಡ್) ಹೊಂದಿರುವವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಹಾಯಧನ ಎಂಬುದರ ಮೂಲಕ ಹಣವನ್ನು ಪಡೆಯಬಹುದು. ಈ ಯೋಜನೆಯು ಕೇವಲ ಎರಡು ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ವಿದ್ಯಾರ್ಥಿಗಳು ಓದುತ್ತಿರುವ ತರಗತಿ ಹಾಗೂ ಪಡೆದಿರುವ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅವುಗಳು ಯಾವುದೆಂದರೆ ಒಂದು, ಎರಡು ಮತ್ತು ಮೂರನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ನಾಲ್ಕು , ಐದು ಮತ್ತು ಆರನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ಮೂರು ಸಾವಿರ ರೂಪಾಯಿ, ಏಳು ಹಾಗೂ ಎಂಟನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ನಾಲ್ಕು ಸಾವಿರ ರೂಪಾಯಿ, ಒಂಬತ್ತು, ಹತ್ತನೇ ತರಗತಿ ಹಾಗೂ ಪ್ರಥಮ ಪಿಯುಸಿ ಓದುತ್ತಿರುವವರಿಗೆ ಆರು ಸಾವಿರ ರೂಪಾಯಿ, ದ್ವಿತೀಯ ಪಿಯುಸಿ ಓದುತ್ತಿರುವವರಿಗೆ ಎಂಟು ಸಾವಿರ ರೂಪಾಯಿ, ಐಟಿಐ ಮತ್ತು ಡಿಪ್ಲೋಮಾ ಓದುತ್ತಿರುವವರಿಗೆ ಪ್ರತಿ ವರ್ಷ ಏಳು ಸಾವಿರ ರೂಪಾಯಿ, ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷ ಹತ್ತು ಸಾವಿರ ರೂಪಾಯಿ, ಸ್ನಾತಕೋತ್ತರ ಪದವಿ ಸೇರ್ಪಡೆಗೆ ಇಪ್ಪತ್ತು ಸಾವಿರ ರೂಪಾಯಿ ಹಾಗೂ ಪ್ರತಿ ವರ್ಷ ಹತ್ತು ಸಾವಿರ ರೂಪಾಯಿ ಎರಡು ವರ್ಷದವರೆಗೆ ನೀಡಲಾಗುತ್ತದೆ.
ಇಂಜಿನಿಯರಿಂಗ್ ಕೋರ್ಸ್ ಗೆ ಸೇರ್ಪಡೆಯಾದರೆ ಇಪ್ಪತೈದು ಸಾವಿರ ರೂಪಾಯಿ ಹಾಗೂ ಪ್ರತಿ ವರ್ಷ ತೇರ್ಗಡೆಯಾದರೆ ಇಪ್ಪತ್ತು ಸಾವಿರ ರೂಪಾಯಿ ಹಣ ನೀಡಲಾಗುತ್ತದೆ. ವೈದ್ಯಕೀಯ ಕೋರ್ಸ್ ಗೆ ಸೇರ್ಪಡೆಯಾದರೆ ಮೂವತ್ತು ಸಾವಿರ ರೂಪಾಯಿ ಪ್ರತಿ ವರ್ಷ ತೇರ್ಗಡೆಯಾದರೆ ಇಪ್ಪತೈದು ಸಾವಿರ ರೂಪಾಯಿ ನೀಡುತ್ತಾರೆ. ಪಿ ಹೆಚ್ ಡಿ ಕೋರ್ಸಿಗೆ ಪ್ರತಿ ವರ್ಷಕ್ಕೆ ಇಪ್ಪತ್ತು ಸಾವಿರ ರೂಪಾಯಿ ( ಗರಿಷ್ಠ ಎರಡು ವರ್ಷ) ಮತ್ತು ಪಿ ಹೆಚ್ ಡಿ ಪ್ರಬಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ಇಪ್ಪತ್ತು ಸಾವಿರ ರೂಪಾಯಿ ನೀಡಲಾಗುತ್ತದೆ. ಪ್ರತಿಭಾವಂತ ಮಕ್ಕಳಿಗಾಗಿ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇಕಡ 75 ರಷ್ಟು ಅಂಕ ಪಡೆದವರಿಗೆ ಐದು ಸಾವಿರ ರೂಪಾಯಿ, ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇಕಡ 75 ರಷ್ಟು ಅಂಕ ಪಡೆದರೆ ಏಳು ಸಾವಿರ ರೂಪಾಯಿ, ಪದವಿ ಅಥವಾ ತತ್ಸಮಾನ ಕೋರ್ಸ್ನಲ್ಲಿ ಶೇಕಡ 75 ರಷ್ಟು ಅಂಕ ಪಡೆದವರಿಗೆ ಹತ್ತು ಸಾವಿರ ರೂಪಾಯಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇಕಡ 75 ರಷ್ಟು ಅಂಕ ಪಡೆದವರಿಗೆ ಹದಿನೈದು ಸಾವಿರ ರೂಪಾಯಿ ನೀಡಲಾಗುತ್ತದೆ. ವಿದ್ಯಾರ್ಥಿವೇತನವನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಅನ್ನು ಲಾಗಿನ್ ಮಾಡಬೇಕು. ಒಂದು ವೇಳೆ ಯೂಸರ್ ಐಡಿ ಅಥವಾ ಪಾಸ್ವರ್ಡ್ ಇಲ್ಲವೆಂದರೆ ನ್ಯೂ ಯೂಸರ್ ರಿಜಿಸ್ಟರ್ ಹಿಯರ್ ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ ರಿಜಿಸ್ಟರ್ ಆಗಿ ನಂತರ ಸೇವಾ ಸಿಂಧು ಪೋರ್ಟಲ್ ನಲ್ಲಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಸೇವಾ ಸಿಂಧು ಪೋರ್ಟಲ್ ನ ಎಡ ಭಾಗದಲ್ಲಿ ಅಪ್ಲೈ ಫೋರ್ ಸರ್ವಿಸಸ್ ಮೇಲೆ ಕ್ಲಿಕ್ ಮಾಡಿದ ನಂತರ ವ್ಯೂ ಆಲ್ ಅವೈಲಬಲ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಂತರ ಸರ್ಚ್ ಬಾರ್ ನಲ್ಲಿ ಎಜುಕೇಶನಲ್ ಅಸಿಸ್ಟೆನ್ಸ್ ಎಂದು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಅರ್ಜಿ ಹಾಕುವ ಪೇಜ್ ಓಪನ್ ಆಗುತ್ತದೆ. ಅರ್ಜಿದಾರರ ವಿವರಗಳು ಎಂಬಲ್ಲಿ ವಿದ್ಯಾರ್ಥಿಯ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಹೆಸರನ್ನು ನಮೂದಿಸಬೇಕು ನಂತರ ಜನ್ಮದಿನಾಂಕ , ದೂರವಾಣಿ ಸಂಖ್ಯೆ ಯನ್ನು ಕಡ್ಡಾಯವಾಗಿ ಹಾಕಬೇಕು. ಪಡಿತರ ಚೀಟಿಯ ಸಂಖ್ಯೆ ಇದ್ದರೆ ಹಾಕಬಹುದು. ಬ್ಯಾಂಕುಗಳ ವಿವರಗಳಾದ ಬ್ಯಾಂಕ್ ಹೆಸರು ಹಾಗೂ ಶಾಖೆಯ ಹೆಸರು, ಐ ಎಫ್ ಎಸ್ ಸಿ ಕೋಡ್ ಹಾಗೂ ಖಾತೆಯ ಸಂಖ್ಯೆಯನ್ನು ನೀಡಬೇಕು. ಕೆಳಗಡೆಯಲ್ಲಿ ಫಲಾನುಭವಿ ಎಂದು ನೊಂದಾಯಿಸಲ್ಪಟ್ಟ ವಿಳಾಸ ಎಂಬಲ್ಲಿ ವಿದ್ಯಾರ್ಥಿಯ ವಿಳಾಸದ ಬಗ್ಗೆ ಮಾಹಿತಿ ನೀಡಬೇಕು ಇಲ್ಲಿ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್, ಗ್ರಾಮ ಅಥವಾ ವಾರ್ಡ್ ನ ಮಾಹಿತಿಯನ್ನು ನೀಡಬೇಕು.
ನೋಂದಣಿ ವಿವರಗಳು (ರಿಜಿಸ್ಟ್ರೇಷನ್ ಡೀಟೇಲ್ಸ್) ನಲ್ಲಿ ನೋಂದಣಿ ಸಂಖ್ಯೆ , ನೋಂದಣಿ ಸಮಯದಲ್ಲಿ ಅರ್ಜಿದಾರನ ವಯಸ್ಸು, ಕಟ್ಟಡ ಕಾರ್ಮಿಕರ ಕಾರ್ಡ್ ನೋಂದಣಿ ಕೊನೆಯ ದಿನಾಂಕ, ಹಾಗೂ ನಿಮ್ಮ ಗಂಡ ಹೆಂಡತಿ ಫಲಾನುಭವಿಯೇ ಎಂಬ ಆಯ್ಕೆಯಲ್ಲಿ ಇಲ್ಲ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಮುಂದಿನ ಹಂತದಲ್ಲಿ ಫಲಾನುಭವಿಯ ಮಗ ಅಥವಾ ಮಗಳ ವಿವರಗಳನ್ನು ನೀಡಬೇಕಾಗುತ್ತದೆ ಇಲ್ಲಿ ಅರ್ಜಿದಾರನ ಮಗುವಿನ ಹೆಸರು, ವಯಸ್ಸು, ಅಧ್ಯಯನ ಮಾಡುತ್ತಿರುವ ತರಗತಿ, ಯಾವ ತರಗತಿಯಲ್ಲಿ ಓದುತ್ತಿದ್ದಾರೆ, ಶಾಲಾ-ಕಾಲೇಜಿನ ವಿಳಾಸ, ಶೈಕ್ಷಣಿಕ ವರ್ಷದ ಆರಂಭದ ದಿನಾಂಕವನ್ನು ಹಾಕಬೇಕು ನಂತರ ಕೆಳಭಾಗದಲ್ಲಿ ಇರುವ ಡಿಕ್ಲರೇಷನ್ ಅಥವಾ ಘೋಷಣೆ ಎಂಬಲ್ಲಿ ಐ ಅಗ್ರಿ ಮೇಲೆ ಕ್ಲಿಕ್ ಮಾಡಬೇಕು. ಮುಂದಿನ ಹಂತದಲ್ಲಿ ವರ್ಡ್ ವೆರಿಫಿಕೇಶನ್ ನಲ್ಲಿ ನೀಡಿರುವ ಸಂಖ್ಯೆಯನ್ನು ನೀಡಿರುವ ಜಾಗದಲ್ಲಿ ಬರೆದು ನಂತರ ಸಬ್ ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಂತರ ಆಧಾರ್ ವೇರಿಫಾಯಿಡ್ ಎಂಬುದರ ಮೇಲೆ ಓಕೆ ಎಂದು ಕ್ಲಿಕ್ ಮಾಡಿ ನಂತರ ನೀಡಿದ ಮಾಹಿತಿಗಳು ಸರಿಯಾಗಿದೆ ಎಂದಾದಲ್ಲಿ ಅಟ್ಯಾಚ್ ಅನೆಕ್ಷರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಇಲ್ಲಿ ಕೆಲವೊಂದು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ ಯಾವುದೆಂದರೆ ಕಟ್ಟಡ ಕಾರ್ಮಿಕರ ಕಾರ್ಡ್, ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಪಾಸ್ ಬುಕ್, ಉದ್ಯೋಗ ಪ್ರಮಾಣ ಪತ್ರ, ವಿದ್ಯಾರ್ಥಿಯ ಉತ್ತೀರ್ಣ ಪ್ರಮಾಣಪತ್ರ ಅಥವಾ ಮಾರ್ಕ್ಸ್ ಕಾರ್ಡ್ ಇದನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಫೋರ್ ಮೇಟ್ ನಲ್ಲಿ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಈ ದಾಖಲೆಗಳು 1 ಎಮ್ ಬಿ ಗಿಂತ ಹೆಚ್ಚಿರಬಾರದು ನಂತರ ಸೇವ್ ಅನೆಕ್ಷರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಸಬ್ಮಿಟ್ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಇದಾದ ನಂತರ ಕನ್ಸೆಂಟ್ ಒಥೇಂಟಿಫಿಕೇಷನ್ ಫಾರ್ಮ್ ಬರುತ್ತದೆ ಅದರ ಕೆಳಗಡೆ ಐ ಅಗ್ರಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಓಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಆಧಾರ್ ಇ- ಒಥೇಂಟಿಫಿಕೇಷನ್ ನಲ್ಲಿ ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನು ಹಾಕಬೇಕು ನಂತರ ಗೆಟ್ ಓಟಿಪಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಖಾಲಿ ಬಿಟ್ಟಿರುವ ಜಾಗದಲ್ಲಿ ಹಾಕಿ ಐ ಹಾವ್ ರೀಡ್ ಅಂಡ್ ಪ್ರೋವೈಡ್ ಮೈ ಕನ್ ಸೇಂಟ್ ಎಂಬಲ್ಲಿ ಕ್ಲಿಕ್ ಮಾಡಬೇಕು. ಇದಾದ ನಂತರ ಒಂದು ಪೇಮೆಂಟ್ ಆಯ್ಕೆ ಬರುತ್ತದೆ ಅಲ್ಲಿ ನಿಗದಿ ಪಡಿಸಿದ ಹಣವನ್ನು ಪಾವತಿಸಬೇಕು. ವಿದ್ಯಾರ್ಥಿವೇತನಕ್ಕೆ ಹಾಕಿದ ಅರ್ಜಿಯ ರಶೀದಿ ಯನ್ನು ಪ್ರಿಂಟ ತೆಗೆದುಕೊಳ್ಳಬೇಕು. ಇದರಲ್ಲಿರುವ ರೆಫರೆನ್ಸ್ ಸಂಖ್ಯೆಯ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ಸ್ಟೇಟಸ್ ನೋಡುವುದಕ್ಕೆ ಹಾಗೂ ಯಾವುದೇ ಮಾಹಿತಿ ತಿಳಿದುಕೊಳ್ಳುವುದಕ್ಕೆ ಇದು ಅವಶ್ಯಕವಾಗಿರುತ್ತದೆ.
ಅರ್ಜಿಯ ಸ್ಟೇಟಸ್ ನೋಡುವುದಕ್ಕೆ ಸೇವ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ನಂತರ ಎಡಭಾಗದಲ್ಲಿರುವ ನ್ಯೂ ಸ್ಟೇಟಸ್ ಅಪ್ಲಿಕೇಶನ್ ಇದರಲ್ಲಿ ಕ್ಲಿಕ್ ಮಾಡಿದಾಗ ಟ್ರ್ಯಾಕ್ ಅಪ್ಲಿಕೇಶನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ಅಪ್ಲಿಕೇಶನ್ ರೆಫರೆನ್ಸ್ ಸಂಖ್ಯೆಯನ್ನು ಹಾಕಿದಾಗ ಅರ್ಜಿಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲಿ ಯಾವುದೇ ತಪ್ಪುಗಳು ಬಂದಲ್ಲಿ ನ್ಯೂ ಸ್ಟೇಟಸ್ ಆಫ್ ಅಪ್ಲಿಕೇಶನ್ನಲ್ಲಿ ವ್ಯೂ ಇನ್ ಕಂಪ್ಲೀಟ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಪೂರ್ಣವಾಗದ ಅರ್ಜಿಯನ್ನು ನೋಡಬಹುದು ಮತ್ತು ಆಕ್ಷನ್ ಎಂಬ ಕಾಲಂ ನಲ್ಲಿ ಎಡಿಟ್ ಚಿನ್ಹೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ಎಡಿಟ್ ಮಾಡಿ ರಿ ಸಬ್ಮೀಟ್ ಮಾಡಬೇಕು. ಈ ರೀತಿಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನವಾಗಿದೆ. ನೀವೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗೂ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿ. ಬೇರೆಯವರಿಗೂ ಈ ಮಾಹಿತಿ ಬಗ್ಗೆ ತಿಳಿಸಿ.