Ultimate magazine theme for WordPress.

ಬಂಗಾರಪ್ಪ ಮಗಳನ್ನ ಶಿವಣ್ಣ ಮದುವೆ ಆಗಿದ್ದು ಹೇಗೆ ಗೊತ್ತೇ? ತುಂಬಾನೇ ಇಂಟ್ರೆಸ್ಟಿಂಗ್

0 3

ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವರಾಜ ಕುಮಾರ್ ಅವರು ನಂತರ ಹ್ಯಾಟ್ರಿಕ್ ಹೀರೋ ಎಂಬ ಪ್ರಸಿದ್ಧಿಯನ್ನು ಪಡೆದರು. ವರ ನಟ ಡಾಕ್ಟರ್ ರಾಜಕುಮಾರ್ ಅವರ ಮಗನಾದ ಶಿವರಾಜ ಕುಮಾರ್ ಅವರು ಅನೇಕ ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಶಿವರಾಜ ಕುಮಾರ್ ಅವರ ಮದುವೆ ವಾರ್ಷಿಕೋತ್ಸವ ನಡೆದಿದ್ದು, ಅವರ ಮದುವೆಯ ಬಗ್ಗೆ ಹಾಗೂ ಅವರ ಕುಟುಂಬದವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ಇದೇ ತಿಂಗಳು ಮೇ 19ರಂದು ತಮ್ಮ 35ನೇ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಶಿವರಾಜ ಕುಮಾರ್ ಹಾಗೂ ಗೀತಾ ಶಿವರಾಜ ಕುಮಾರ್ ಅವರು ಆರೆಂಜ್ ಮ್ಯಾರೇಜ್ ಆಗಿದ್ದಾರೆ. ಮೊದಲು ಇಬ್ಬರ ಮನೆಗಳಲ್ಲಿ ಮಾತುಕತೆ ಆಡಿದ ನಂತರ ಶಿವರಾಜ ಕುಮಾರ್ ಅವರಿಗೆ ಹುಡುಗಿ ನೋಡಿರುವ ವಿಷಯವನ್ನು ತಿಳಿಸಿದರು. ಶಿವಣ್ಣ ಅವರು ತಮ್ಮ 24 ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ ಅವರು ವಿವಾಹವಾಗುವ ಸಮಯದಲ್ಲಿ ಅವರು ನಟಿಸಿದ ಮೊದಲ ಚಿತ್ರ ಆನಂದ್ ಬಿಡುಗಡೆಯಾಗಿತ್ತು. ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಪ್ರೀತಿ, ಗೌರವ, ಅಭಿಮಾನವಿತ್ತು. ಬಂಗಾರಪ್ಪ ಅವರು ಡಾಕ್ಟರ್ ರಾಜಕುಮಾರ್ ಅವರ ಬಳಿ ತಮ್ಮ ಮಗಳನ್ನು ನಿಮ್ಮ ಮನೆಗೆ ಸೊಸೆಯಾಗಿ ಮಾಡುವ ಆಸೆ ಇದೆ ಎಂದು ಹೇಳಿಕೊಂಡರು. ಡಾಕ್ಟರ್ ರಾಜಕುಮಾರ್ ಅವರು ಬಂಗಾರಪ್ಪನವರ ಮಾತು ಕೇಳಿ ಸಂತೋಷಗೊಂಡು ಕುಟುಂಬದವರೊಂದಿಗೆ ಚರ್ಚೆ ಮಾಡಿದರು. ಮನೆಯವರೆಲ್ಲರಿಗೂ ಇಷ್ಟವಾಗಿ ಶಿವಣ್ಣ ಹಾಗೂ ಗೀತಾ ಅವರ ಮದುವೆಯ ಮುಹೂರ್ತ ಫಿಕ್ಸ್ ಆಯಿತು.

ಡಾಕ್ಟರ್ ರಾಜಕುಮಾರ್ ಅವರ ಮೊದಲ ಮಗನಾದ ಶಿವಣ್ಣ ಅವರ ಮದುವೆ ಯುವರಾಜನ ಮದುವೆಯಂತೆ ಆಯಿತು. ಅರಮನೆ ಮೈದಾನದ ತುಂಬ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಚಿತ್ರರಂಗದ ಅನೇಕ ಗಣ್ಯಾತಿಗಣ್ಯರು ಮದುವೆಯಲ್ಲಿ ಭಾಗವಹಿಸಿ ನೂತನ ವಧು-ವರರಿಗೆ ಶುಭಕೋರಿದರು. ಶಿವಣ್ಣ ಅವರ ಮದುವೆಯಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಊಟ ಸಿಗಲಿಲ್ಲ ಅಷ್ಟು ಜನರು ಸೇರಿದ್ದರು. ಡಾಕ್ಟರ್ ರಾಜಕುಮಾರ್ ಅವರು ತಮ್ಮ ಮಗನ ಮದುವೆಯಲ್ಲಿ ಇಷ್ಟೊಂದು ಜನ ಸೇರಿರುವುದನ್ನು ನೋಡಿ ಬಹಳ ಸಂತೋಷಪಟ್ಟರು. ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜ ಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಇಬ್ಬರಿಗೂ ಅಪ್ಪನನ್ನು ಕಂಡರೆ ಬಹಳ ಪ್ರೀತಿ. ಶಿವರಾಜ ಕುಮಾರ್ ಅವರು ತಮ್ಮ ಮೊದಲ ಮಗಳು ನಿವೇದಿತಾ ಅವರ ಮದುವೆಯನ್ನು ಇತ್ತೀಚೆಗೆ ಅದ್ದೂರಿಯಾಗಿ ಮಾಡಿದ್ದಾರೆ.

ಶಿವರಾಜ ಕುಮಾರ್ ಅವರು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್, ಕುರುಬನ ರಾಣಿ, ಓಂ, ರಣರಂಗ ಅದೇ ಹಾಡು ಅದೇ ರಾಗ, ಆಸೆಗೊಬ್ಬ ಮೀಸೆಗೊಬ್ಬ, ಮುತ್ತಣ್ಣ ಇನ್ನು ಹಲವಾರು ಸಿನಿಮಾಗಳಲ್ಲಿ ಶಿವರಾಜ ಕುಮಾರ್ ಅವರು ನಟನಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟಿಯರೊಂದಿಗೆ ನಟಿಸಿದ್ದಾರೆ. ಸುಧಾರಾಣಿ ಅವರೊಂದಿಗೆ ತಮ್ಮ ಮೊದಲ ಚಿತ್ರ ಆನಂದ್ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಪ್ರೇಮಾ, ತಾರಾ, ರಮ್ಯಾ, ರಕ್ಷಿತಾ ಮೊದಲಾದ ನಟಿಯರೊಂದಿಗೆ ಶಿವರಾಜ ಕುಮಾರ್ ಅವರು ನಟಿಸಿದ್ದಾರೆ. ಶಿವರಾಜ ಕುಮಾರ್ ಹಾಗೂ ಗೀತಾ ಶಿವರಾಜ ಕುಮಾರ್ ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ ಎಂದು ಆಶಿಸೋಣ.

Leave A Reply

Your email address will not be published.