ಚಿರು ಮೇಘನಾ ಮಗುವಿಗೆ 7ತಿಂಗಳ ಸಂಭ್ರಮ ಮಗನ ಬಗ್ಗೆ ತಾಯಿ ಮೇಘನಾ ಏನ್ ಅಂದ್ರು ಗೊತ್ತೇ?

0 1

ಈಗ ಸುಮಾರು ತಿಂಗಳುಗಳ ಹಿಂದೆ ಚಿರಂಜೀವಿ ಸರ್ಜಾ ಅವರು ತೀರಿ ಹೋದರು. ಆಗ ಮೇಘನಾ ರಾಜ್ ಅವರು 6 ತಿಂಗಳ ಪ್ರಗ್ನೆಂಟ್ ಇದ್ದರು. ನಂತರ ಅವರಿಗೆ ಗಂಡು ಮಗು ಹುಟ್ಟಿದೆ. ಚಿರಂಜೀವಿ ಸರ್ಜಾ ಅವರೇ ವಾಪಸ್ ಬಂದಂತೆ ಆಗಿದೆ. ಮೇಘನಾ ರಾಜ್ ಅವರ ಪುತ್ರ ನೋಡಲು ಬಹಳ ಸುಂದರವಾಗಿ ಮತ್ತು ಮುಗ್ಧನಾಗಿ ಇದ್ದಾನೆ. ಆದ್ದರಿಂದ ನಾವು ಇಲ್ಲಿ ಮೇಘನಾ ರಾಜ್ ಅವರ ಪುತ್ರನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಿರಂಜೀವಿ ಸರ್ಜಾ ಅವರು ನಿಧಾನರಾಗಿ ಇಡೀ ಕುಟುಂಬಕ್ಕೆ ಒಂದು ಮುತ್ತನ್ನು ಕಳೆದುಕೊಂಡಂತೆ ಆಗಿತ್ತು. ನಂತರ ಮಗು ಹುಟ್ಟಿ ಒಂದು ಸಂತೋಷ ಮನೆಗೆ ಬಂದಿದೆ.  ಫೆಬ್ರವರಿ 14, 2021ರಂದು ಸರಿಯಾಗಿ ರಾತ್ರಿ 12 ಗಂಟೆಗೆ ಮೇಘನಾ ಮಗನನ್ನು ಪರಿಚಯಿಸಿದ್ದಾರೆ. ಒಂದು ವಿಶೇಷವಾದ ವಿಡಿಯೋ ಮೂಲಕ ಅವರನ್ನು ತೋರಿಸಿದ್ದಾರೆ. ಹಾಗೆಯೇ ನಂತರದಲ್ಲಿ ತನ್ನ ಪುತ್ರನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರಲಿಲ್ಲ. ಚಿರು ಅವರ ಸಿನೆಮಾವನ್ನು ರೀಲೀಸ್ ಮಾಡುವ ಒಂದು ತುಣುಕಿನಲ್ಲಿ ಪರಿಚಯಿಸಿದ್ದರು.

ಹಾಗೆಯೇ ಜೂನಿಯರ್ ಚಿರು ಅವರ ಚಿಕ್ಕಪ್ಪ ಧ್ರುವ ಸರ್ಜಾ ಅವರಿಗೆ ಚಿರು ಅವರ ಪುತ್ರ ಎಂದರೆ ಬಹಳ ಪ್ರೀತಿ. ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರು ಗೋವಾಕ್ಕೆ ಹೋಗಿದ್ದರು. ಅಲ್ಲಿಂದ ತನ್ನ ಪ್ರೀತಿಯ ಸಹೋದರರಾದ ಚಿರು ಅವರ ಪುತ್ರನಿಗೆ ವಿಶೇಷವಾದ ಉಡುಗೊರೆಯನ್ನು ತಂದಿದ್ದರು. ಅದೇನೆಂದರೆ ಮಕ್ಕಳು ಆಡುವ ಆಟಿಕೆ ಸಾಮಾನುಗಳು. ಇದರಲ್ಲಿ ಬಣ್ಣಬಣ್ಣದ ಆಟಿಕೆ ಸಾಮಾನುಗಳು ಇವೆ. ಹಾಗೆಯೇ ಅವರ ನಾಮಕರಣವನ್ನು ಧ್ರುವ ಸರ್ಜಾ ಅವರು ತಮ್ಮ ಮನೆಯಲ್ಲಿ ಮಾಡಬೇಕೆಂದು  ನಿರ್ಧಾರವನ್ನು ಕೈಗೊಂಡಿದ್ದರು.

ಹಾಗೆಯೇ ಬಹಳ ವಿಜೃಂಭಣೆಯಿಂದ ನಾಮಕರಣ ಮಾಡಿದ್ದಾರೆ. ಹಾಗೆಯೇ ಮೇ 23ನೇ ತಾರೀಖಿನಂದು ಮೇಘನಾ ಅವರ ಮುದ್ದು ಕಂದನ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಮಗನ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಆತ್ಮೀಯ ಜೂನಿಯರ್ ಚಿರು ನಿನ್ನ ಆರು ತಿಂಗಳ ಹುಟ್ಟು ಹಬ್ಬವನ್ನು ಆಚರಿಸಿದ್ದು ನಿನ್ನೆ ಅಲ್ಲವೇ. ಆದರೆ ಆರು ತಿಂಗಳು ತುಂಬಿದೆ. ಈಗ ಏಳು ತಿಂಗಳು ಆಗಿದೆ. ನಮ್ಮ ಪುಟ್ಟ ಮಗು ವೇಗವಾಗಿ ಬೆಳೆಯುತ್ತಿದ್ದಾನೆ. ನನ್ನ ಜೀವಿತಾವಧಿಯಲ್ಲಿ ಮಧುರವಾದ ಖುಷಿ ಕೊಟ್ಟಿರುವ ನಿನಗೆ ನನ್ನ ಪ್ರೀತಿಯ ಚುಂಬನ. ನನ್ನ ಪ್ರೀತಿಯ ಕಂದನಿಗೆ ಏಳು ತಿಂಗಳು ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.