ಕಳ್ಳತನ ಮಾಡಿ ಈಗಿನ ಕಾಲದಲ್ಲಿ ಜೀವನ ಸಾಗಿಸುವಂತಹವರು ಅನೇಕರಿದ್ದಾರೆ. ಸುಲಭ ಮಾರ್ಗದಲ್ಲಿ ದೇಹವನ್ನು ದಣಿಸದೆ ಹಣ ಮಾಡುವುದು ಅಥವಾ ಹೊಟ್ಟೆಯನ್ನು ತುಂಬಿಕೊಳ್ಳುವ ಒಂದು ಮಾರ್ಗವಾಗಿ ಬಿಟ್ಟಿದೆ. ತಮ್ಮ ಜೀವನದ ಸ್ವಾರ್ಥತೆಗಾಗಿ ಅಡ್ಡ ಮಾರ್ಗವನ್ನು ಹಿಡಿದು ಸಂಪಾದನೆಯನ್ನು ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಕಳ್ಳತನ,ದರೋಡೆ ವಿಪರೀತವಾಗಿದೆ. ಸರ ಕಳ್ಳರು ಮನೆಯನ್ನು ದರೋಡೆ ಮಾಡುವುದು ಗಾಡಿಗಳನ್ನು ಕಳ್ಳತನ ಮಾಡುವುದು, ಹೀಗೆ ಅನೇಕ ಕಳ್ಳತನ ಮಾರ್ಗವನ್ನು ಜನರು ಹೊಡೆಯತೊಡಗಿದ್ದಾರೆ. ಆದ್ದರಿಂದ ನಾವು ಇಲ್ಲಿ ಅಂತಹ ಒಂದು ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈಗಿನ ಕಾಲದಲ್ಲಿ ಯಾರನ್ನು ನಂಬುವುದು ಕೂಡ ಕಷ್ಟವಾಗಿಬಿಟ್ಟಿದೆ. ವಯಸ್ಕರೆಂದು ಅಥವಾ ವಯಸ್ಸಾದವರೆಂದು ಕನಿಕರವನ್ನು ತೋರಿದರೆ ನಮ್ಮ ಆಪತ್ತನ್ನು ನಾವೇ ತಂದುಕೊಂಡ ಹಾಗೆ ಆಗುತ್ತದೆ. ಇಂತಹ ಸಮಾಜ ಈಗಿನ ಕಾಲದಲ್ಲಿ ನಿರ್ಮಾಣವಾಗಿಬಿಟ್ಟಿದೆ. ಈಗಿನ ಕಾಲದಲ್ಲಿ ಜನರು ದುಡ್ಡು ಮಾಡುವ ಅಥವಾ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗವನ್ನು ಇದರಲ್ಲಿ ಕಂಡುಕೊಳ್ಳುತ್ತಿದ್ದಾರೆ. ಇದೇ ರೀತಿ ಒಂದು ಅಜ್ಜ-ಅಜ್ಜಿ ಕೋಳಿಯನ್ನೂ ಕದಿಯುವ ಕೆಲಸವನ್ನು ಮಾಡುತ್ತಿದ್ದಾರೆ.

ಅಜ್ಜ-ಅಜ್ಜಿ ಭಿಕ್ಷುಕರ ರೂಪದಲ್ಲಿ ಬಂದು ಮನೆಯಲ್ಲಿ ಜನರಿರುವುದು ಮತ್ತು ಇಲ್ಲದಿರುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳುತ್ತಾರೆ. ಖಾತ್ರಿಪಡಿಸಿಕೊಂಡ ನಂತರ ಮನೆಯಂಗಳದಲ್ಲಿ ಬಂದು ಹಾಯಾಗಿ ಕುಳಿತುಕೊಳ್ಳುತ್ತಾರೆ. ಮೊದಲು ಕೋಳಿಗಳಿಗೆ ಆಹಾರವನ್ನು ಹಾಕುತ್ತಾರೆ. ಆ ಕುಳಿಗಳು ಆಹಾರವನ್ನು ತಿನ್ನಲು ಬಂದರೆ ಅದನ್ನು ಹಿಡಿಯಲು ಸಂಚನ್ನು ಮಾಡುತ್ತಾರೆ. ಕೋಳಿ ಆಹಾರವನ್ನು ತಿನ್ನುತ್ತಿರುವ ಸಂದರ್ಭದಲ್ಲಿ ಕ್ಷಣಮಾತ್ರದಲ್ಲಿ ಕೋಳಿಯ ಕುತ್ತಿಗೆಯನ್ನು ಹಿಡಿದು ಮತ್ತು ಕುತ್ತಿಗೆಯನ್ನು ಹಿಸುಕಿ ತಮ್ಮ ಜೋಳಿಗೆಗೆ ತುಂಬಿಕೊಳ್ಳುತ್ತಾರೆ.

ಇಂತಹ ಒಂದು ಕಳ್ಳತನ ಉಡುಪಿ ಜಿಲ್ಲೆಯ ಕಾಪು ಸಮೀಪದ ಮುದುರಂಗಡಿಯಲ್ಲಿ ನಡೆದಿದೆ. ಬೇಬಿ ಪೂಜಾರ್ತಿ ಎನ್ನುವವರ ಮನೆಯಲ್ಲಿ ಒಂದು ಅಜ್ಜ-ಅಜ್ಜಿ ಇಂತಹ ಕಳ್ಳತನವನ್ನು ನಡೆಸಿದ್ದಾರೆ. ಇಂತಹ ಜನರನ್ನು ಅಮಾಯಕರೆಂದು ಒಳಗೆ ಬಿಟ್ಟುಕೊಂಡರೆ ಆಪತ್ತು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಪಟ್ಟಣಗಳಲ್ಲಿ ಒಂದೇ ಅಲ್ಲದೆ ಹಳ್ಳಿಗಳಲ್ಲಿಯೂ ಇಂತಹ ಅನೇಕ ಕಳ್ಳತನಗಳು ಸಾಮಾನ್ಯವಾಗತೊಡಗಿದೆ.ಈಗಿನ ಕಾಲದಲ್ಲಿ ಕಷ್ಟಪಟ್ಟು ದುಡಿಯುವ ಪ್ರವೃತ್ತಿ ಕಡಿಮೆಯಾಗುತ್ತಾ ಬಂದಿದೆ. ಆದಕಾರಣ ಇಂತಹ ಕಳ್ಳತನಗಳು ಹೆಚ್ಚಾಗುತ್ತಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!