ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆಯಾಗಿದೆ.ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಈ ದಿನದಂದು ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ. ಮತ್ತು ದೇಶದಲ್ಲೆಡೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ನವದೆಹಲಿಯಲ್ಲಿ ರೈತರು ಈ ವರ್ಷದ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸುತ್ತಾರೆ. ಆದ್ದರಿಂದ ನಾವು ಇದರ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇದೇ ಕಾರಣಕ್ಕಾಗಿ ಗಣರಾಜ್ಯೋತ್ಸವದ ದಿನದಂದು ಟ್ರ್ಯಾಕ್ಟರ್ ರ್ಯಾಲಿಯನ್ನು ಮಾಡಲು ರೈತರು ತೀರ್ಮಾನಿಸುತ್ತಾರೆ. ಈ ರ್ಯಾಲಿಯ ಪ್ರಯುಕ್ತ ಒಬ್ಬ ರೈತ ತನ್ನ ಟ್ರ್ಯಾಕ್ಟರ್ ಅನ್ನು ಲಕ್ಷಾಂತರ ರೂಗಳನ್ನು ಹಾಕಿ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಪ್ರತಿಭಟನಾಕಾರರಲ್ಲಿ ಒಬ್ಬರಾದ ಸುನಿಲ್ ಗುಲಿಯಾ ಅವರು ತಮ್ಮ ಟ್ಯಾಕ್ಟರ್ ಅನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸುವ ಸಲುವಾಗಿಯೇ 35 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಸುನಿಲ್ ಗುಲಿಯಾ ಅವರು ಹರಿಯಾಣ ಮೂಲದ 84ರ ಕಾಪು ಪಂಚಾಯತದ ಅಧ್ಯಕ್ಷರಾಗಿದ್ದಾರೆ.

ಮಹೇಂದ್ರ ಕಂಪನಿ ಟ್ಯಾಕ್ಟರ್ ಅನ್ನು ತೆಗೆದುಕೊಂಡು ಅದಕ್ಕೆ ರೋಡ್ ರೋಲರ್ ಗಳಲ್ಲಿ ಬಳಕೆಯಾಗುವಂತಹ ಟಾಯರ್ ಗಳನ್ನು ಅಳವಡಿಸಿದ್ದಾರೆ. ಜೊತೆಗೆ ಈ ಟ್ಯಾಕ್ಟರ್ ನಲ್ಲಿ ಜನರಿಗೆ ಕೂರಲು ವಿಶೇಷವಾದ ಆಸನ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಇದಕ್ಕೆ ಮ್ಯೂಸಿಕ್ ಸಿಸ್ಟಮ್ ಅನ್ನು ಕೂಡ ಅಳವಡಿಸಿದ್ದಾರೆ. ಟ್ರ್ಯಾಕ್ಟರ್ ನ ಟ್ರಾಲಿಯನ್ನು ಡಿಸೈನ್ ಮಾಡಿಸುವ ಸಲುವಾಗಿಯೇ 5.5 ಲಕ್ಷ ರೂ ಹಣವನ್ನು ಖರ್ಚು ಮಾಡಿದ್ದಾರೆ. ಈ ಟ್ರ್ಯಾಕ್ಟರ್ ನ ವಿಶೇಷತೆಯೆಂದರೆ ಮಳೆ ಬರಲಿ ಅಥವಾ ಜಲಫಿರಂಗಿಯನ್ನೇ ಇದರ ಮೇಲೆ ಪ್ರಯೋಗ ಮಾಡಿದರು ಅದನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು ಏಳು ತಿಂಗಳುಗಳಿಂದ ಈ ಟ್ಯಾಕ್ಟರ್ ನವೀಕರಣ ಕಾರ್ಯ ನಡೆದಿದೆ.

ಜಲಂಧರ್ ನ ಮೂಲ ಮಹಲ್ ನಲ್ಲಿ ಈ ಟ್ಯಾಕ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಟ್ರ್ಯಾಕ್ಟರ್ ನ ಬಿಡಿಭಾಗಗಳನ್ನು ವಿದೇಶಗಳಿಂದಲೂ ತರಿಸಿ ವಿನ್ಯಾಸಗೊಳಿಸಲಾಗಿದೆ. ಹಿಂದಿನ ಕಾಲದಲ್ಲಿ ಕಾಪು ಪಂಚಾಯತ್ ನ ಸದಸ್ಯರು ಆನೆಯ ಮೇಲೇರಿ ಸಭೆಗಳಿಗೆ ಹೋಗುತ್ತಿದ್ದರು. ಈ ಟ್ಯಾಕ್ಟರ್ ಆನೆಗೆ ಸಮಯ ಎಂದು ಸುನಿಲ್ ಕೂಲಿಯ ಅವರು ಹೇಳುತ್ತಾರೆ. ಇವರ ಪ್ರಕಾರ ಟ್ರ್ಯಾಕ್ಟರ್ ಎನ್ನುವುದು ರೈತರ ಕುಟುಂಬದ ಮುಖ್ಯ ಭಾಗವಾಗಿದೆ. ಈ ಟ್ರ್ಯಾಕ್ಟರ್ ಅನ್ನು 2020 ಫೆಬ್ರುವರಿಯಲ್ಲಿ ಖರೀದಿ ಮಾಡಿ ನವೆಂಬರ್ನಲ್ಲಿ ವಿಶೇಷವಾಗಿ ವಿನ್ಯಾಸ ಗೊಳಿಸಿದ್ದಾರೆ. ಹಾಗೆ ಸುನಿಲ್ ಗುಲಿಯ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಈ ಟ್ರ್ಯಾಕ್ಟರ್ ನೊಂದಿಗೆ ಭಾಗಿಯಾಗಿದ್ದಾರೆ. ಜನವರಿ 26ರಂದು ನಡೆದಿರುವ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಸುನಿಲ್ ಗುಲಿಯ ರವರ ಈ ಟ್ರ್ಯಾಕ್ಟರ್ ಎಲ್ಲರ ಗಮನವನ್ನು ಸೆಳೆದಿದೆ.

Leave a Reply

Your email address will not be published. Required fields are marked *