ಕೈ ತುಂಬಾ ಸಂಬಳ ಇರೋ ಸರ್ಕಾರೀ ಕೆಲಸ ಬಿಟ್ಟು ಕೃಷಿಯಲ್ಲಿ ನೆಮ್ಮದಿ ಜೀವನ ಜೊತೆಗೆ ಲಕ್ಷಾಂತರ ರೂಪಾಯಿ ಆಧಾಯ ಕಂಡ ಈ ವ್ಯಕ್ತಿ ಯಾರು ಗೊತ್ತೇ?

0 0

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸ ಸಿಕ್ರೆ ಸಾಕು ನೆಮ್ಮದಿಯ ಜೀವನ ಇರುತ್ತೆ ಅನ್ನೋದು ಬಹಳಷ್ಟು ಜನರ ಬಯಕೆ, ಆದ್ರೆ ಇಲ್ಲೊಬ್ಬ ವ್ಯಕ್ತಿ ಸರ್ಕಾರಿ ಕೆಲಸ ಬಿಟ್ಟು ಕೃಷಿಯಲ್ಲಿ ನೆಮ್ಮದಿಯ ಜೀವನ ಕಾಣಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ, ಅಷ್ಟಕ್ಕೂ ಈ ವ್ಯಕ್ತಿಯ ಸಾಧನೆಯ ಹಾದಿ ಹೇಗಿದೆ ಅನ್ನೋದನ್ನ ಸಂಪೂರ್ಣವಾಗಿ ಮುಂದೆ ತಿಳಿಯೋಣ ಬನ್ನಿ.

ಕೋಲಾರ ಮೂಲದ ನಿವಾಸಿ ರಾಜಶೇಖರ್ ವಿದ್ಯಾಭ್ಯಾಸದಲ್ಲಿ ಉತ್ತಮರು ಇವರು ಎಂಜಿನಿಯರ್ ಪದವಿಯಲ್ಲಿ ರ‍್ಯಾಂಕ್ ಪಡೆದವರು. ಆದ್ರೆ ಇವರಿಗೆ ಅನಾರೋಗ್ಯ ಕೈ ಕೊಟ್ಟ ಕಾರಣಕ್ಕೆ ಜೀವನ ಬೇಡ ಅನ್ನುವಷ್ಟು ಬೇಸರ ಮೂಡಿದಂತೂ ನಿಜ ಆದ್ರೆ ಸ್ನೇಹಿತರ ಮಾತಿನ ಮೇರೆಗೆ ಕೃಷಿ ಮಾಡು ಇದರಲ್ಲಿ ಅರೋಗ್ಯ ನೆಮ್ಮದಿ ಜೀವನ ನಡೆಸಬಹುದು ಎಂಬುದನ್ನು ತಿಳಿದು ಕೃಷಿ ಮಾಡಲು ಮುಂದಾದರು. ರಾಜಶೇಕರ್ ಅವರದ್ದು ಕೋಲಾರದ ಚಾಮರಹಳ್ಳಿ ಇಲ್ಲಿ ತಮ್ಮ ಜಾಮೀನು 40 ಎಕರೆ ಇದ್ದು ಇದರಲ್ಲಿ ಇದೀಗ ಹಲವು ಬಗೆ ಬಗೆಯ ಮರ ಗಿಡಗಳನ್ನು ಬೆಳೆಸಿದ್ದಾರೆ, ಅಷ್ಟೇ ಅಲ್ಲದೆ ಇವರ ಜಮೀನಿನಲ್ಲಿ ಹಲವು ಬಗೆಯ ಔಷಧಿ ಗುಣಗಳನ್ನು ಹೊಂದಿರುವಂತ ಮರ ಗಿಡಗಳನ್ನು ಬೆಳೆಸಿದ್ದಾರೆ. ರಾಜ್ ಶೇಖರ್ ಅವರು ಸಾರಿಗೆ ಇಲಾಖೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದರು. ಹಲವು ಬಗೆಯ ಕಾಯಿಲೆಗಳು ಇವರನ್ನು ಕಾಡುತ್ತಿತ್ತು. ಇದೀಗ ಆರೋಗ್ಯದ ಜೀವನವನ್ನು ಪ್ರಕೃತಿಯ ಮಡಿಲಿನಿಂದ ಪಡೆಯುತ್ತಿದ್ದಾರೆ.

ಇವರ ಜಮೀನಿನಲ್ಲಿ ಮಾವು, ಬೇವು, ಹಲಸು, ಸೀತಾಫಲ, ಸಪೋಟ, ಸೀಬೆ, ನೇರಳೆ, ನೆಲ್ಲಿಕಾಯಿ ಸೇರಿದಂತೆ ಅರಳಿ ಹೀಗೆ ಹತ್ತಾರು ಬಗೆಯ ಔಷಧೀಯ ಹಾಗೂ ಅಪರೂಪದ ಸುಮಾರು 4,500ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಒಳ್ಳೆಯ ಗಾಳಿ, ನೀರು, ಸೇರಿದಂತೆ ಔಷಧೀಯ ಗಿಡಗಳಿಂದ ಆರೋಗ್ಯದ ಜೊತೆಗೆ ಲಕ್ಷಾಂತರ ರೂಪಾಯಿ ಲಾಭವನ್ನೂ ಪಡೆಯುತ್ತಿದ್ದಾರೆ. ಅದೇನೇ ಇರಲಿ ಇವರ ಈ ಛಲದಿಂದ ಇಂದು ಯಶಸ್ಸನ್ನು ಪಡೆದಿರುವಂತೂ ನಿಜ , ಹಾಗಾಗಿ ನಿಮಗೂ ಏನಾದರು ಸಾಧಿಸಬೇಕು ಅನ್ನೋ ಛಲ ಹಮ್ಬಳ ಇದ್ರೆ ಖಂಡಿತ ನಿಮ್ಮ ಗುರಿಮುಟ್ಟುತ್ತಿರ.

Leave A Reply

Your email address will not be published.