ಸಿಟಿ ಆಗಿರಲಿ ಅಥವಾ ಹಳ್ಳಿಯಾಗಿರಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಬಿಸ್ನೆಸ್ ಅಂದ್ರೆ ಅದು ಕಿರಾಣಿ ಸ್ಟೋರ್ ಬಿಸ್ನೆಸ್. ಈಗ ಕಿರಾಣಿ ಸ್ಟೋರ್ ಗಳಿಗೆ ಬಹಳಷ್ಟು ಬೇಡಿಕೆಯಿದೆ. ಯಾವುದೇ ಒಬ್ಬ ವ್ಯಕ್ತಿ ತನ್ನ ಮನೆಗೆ ಆತ ತನಗೆ ಸಂಬಂಧಪಟ್ಟ ವಸ್ತು ಏನಾದರೂ ಬೇಕು ಅಂತ ಅನಿಸಿದರೆ ಅವುಗಳನ್ನು ಕೊಳ್ಳುವುದಕ್ಕೆ ಮೊದಲು ಹೋಗುವುದೇ ಕಿರಾಣಿ ಸ್ಟೋರ್ ಗೆ. ಇಷ್ಟು ಬೇಡಿಕೆ ಇರುವಂತಹ ಕಿರಾಣಿ ಸ್ಟೋರ್ ಬಿಸ್ನೆಸ್ ಮಾಡೊದು ಹೇಗೆ ಇದಕ್ಕೆ ಬಂಡವಾಳ ಎಷ್ಟು ಬೇಕು? ಇದರಿಂದ ನಮಗೆ ಬರುವಂತಹ ಲಾಭವೆಷ್ಟು ಅನ್ನುವುದರ ಬಗ್ಗೆ ವಿವರವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಯಾವುದೇ ಕೆಲಸ ಮಾಡುವುದಕ್ಕೂ ಮೊದಲು ಒಂದು ಸರಿಯಾದ ಯೋಜನೆ ಇರಬೇಕು. ಹಾಗೆ ಕಿರಾಣಿ ಸ್ಟೋರ್ ಬಿಸ್ನೆಸ್ ಮಾಡುವುದಕ್ಕೂ ಕೂಡ ಕೆಲವೊಂದಿಷ್ಟು ಯೋಜನೆಗಳು ಇವೆ. ಕಿರಾಣಿ ಸ್ಟೋರ್ ಅನ್ನು ಜನರು ಹೆಚ್ಚಾಗಿ ಓಡಾಡುವಂತಹ ಜಾಗದಲ್ಲಿ ಇಟ್ಟು ಕಿರಾಣಿ ಸ್ಟೋರ್ ಗಳನ್ನು ಸರಿಯಾಗಿ ಜೋಡಿಸಿ ಇಡಬೇಕು. ಕಿರಾಣಿ ಸ್ಟೋರ್ ಇಡುವುದಕ್ಕೂ ಮೊದಲು ಆ ಜಾಗದಲ್ಲಿ ಯಾವ ಯಾವ ಸಾಮಗ್ರಿಗಳಿಗೆ ಬೇಡಿಕೆ ಜಾಸ್ತಿ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಹಾಗೂ ಜನರಿಗೆ ಅಗತ್ಯವಾಗಿ ಬೇಕಾಗಿರುವ ಅಂತಹ ವಸ್ತುಗಳನ್ನು ಮೊದಲೇ ನಿಮ್ಮ ಕಿರಾಣಿ ಅಂಗಡಿಗಳಲ್ಲಿ ಶೇಖರಿಸಿಟ್ಟು ಕೊಳ್ಳಬೇಕು. ಜನರಿಗೆ ಬೇಕಾಗಿರುವಂತಹ ದಿನನಿತ್ಯದ ಅತ್ಯಗತ್ಯ ಸಾಮಗ್ರಿಗಳನ್ನು ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳಲು ದಿನನಿತ್ಯದ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲು ನೀವು ಹೋಲ್ಸೇಲರ್ ಮತ್ತು ಸಪ್ಲೇಯರ್ ಗಳನ್ನು ಕಾಂಟ್ಯಾಕ್ಟ್ ಮಾಡಬೇಕು. ಹತ್ತಿರದಲ್ಲಿಯೇ ಹೋಲ್ಸೇಲರ್ ಮತ್ತು ಸಪ್ಲೈಯರ್ ಗಳು ಇದ್ದರೆ ಒಳ್ಳೆಯದು ಯಾಕೆಂದರೆ ಸಾಮಗ್ರಿಗಳನ್ನು ಸಪ್ಲೈಯರ್ ಗಳು ಬೇಗನೆ ಬಂದು ಸಪ್ಲೈ ಮಾಡುತ್ತಾರೆ ಇದರಿಂದ ನಿಮ್ಮ ಸಮಯ ಉಳಿಯುವುದರ ಜೊತೆಗೆ ಸಾಗಾಟದ ಖರ್ಚು ಕೂಡ ಉಳಿಯುತ್ತದೆ.

ಕಿರಾಣಿ ಸ್ಟೋರ್ ಇಡುವವರಿಗೆ ಜಾಗ ತುಂಬಾನೇ ಮುಖ್ಯವಾಗಿರುತ್ತದೆ ಹಾಗಾಗಿ ನೀವು ಕಿರಾಣಿ ಸ್ಟೋರ್ ಇಡುವುದಕ್ಕಿಂತ ಮೊದಲೇ ಆ ಜಾಗದಲ್ಲಿ ಬೇರೆ ಯಾವುದಾದರೂ ಕಿರಾಣಿ ಸ್ಟೋರ್ ಇದೆಯಾ ಇಲ್ಲವೋ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಒಂದು ವೇಳೆ ಬೇರೆ ಯಾವುದೇ ಕಿರಾಣಿ ಸ್ಟೋರ್ ಇದ್ದರೆ ಅದು ನಿಮ್ಮ ಬಿಸ್ನೆಸ್ಸಿಗೆ ಪರಿಣಾಮನ್ನುಂಟು ಮಾಡಬಹುದು. ಜನರು ಹೆಚ್ಚಾಗಿ ಓಡಾಡುವಂತಹ ಜಾಗ ಹಾಗೂ ಜನಸಂಖ್ಯೆ ಜಾಸ್ತಿ ಇರುವ ಅಂತಹ ಜಾಗದಲ್ಲಿ ಕಿರಾಣಿ ಅಂಗಡಿ ಗಳನ್ನು ತೆರೆಯಬಹುದು. ಕಿರಾಣಿ ಸ್ಟೋರ್ ಗೆ ಲೈಸೆನ್ಸ್ ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಎಷ್ಟಬ್ಲಿಷ್ ಲೈಸೆನ್ಸ್ ಇರಬಹುದು ಅಥವಾ ಜಿಎಸ್ಟಿ ಲೈಸೆನ್ಸ್ ಹೀಗೆ ಹಲವಾರು ಪ್ರೀತಿಯ ಲೈಸೆನ್ಸ್ ಗಳು ಇರುತ್ತವೆ. ಲೈಸೆನ್ಸ್ ಆತರೇಟಿ ಗಳಲ್ಲಿ ಕೇಳಿದರೆ ಕಿರಾಣಿ ಸ್ಟೋರ ಗೆ ಸಂಬಂಧಪಟ್ಟಂತೆ ಎಲ್ಲ ಲೈಸೆನ್ಸ್ ಗಳ ಮಾಹಿತಿಯನ್ನು ನೀಡುತ್ತಾರೆ. ಒಬ್ಬರೇ ಕಿರಾಣಿ ಸ್ಟೋರ್ ನಡೆಸುವುದು ಬಹಳ ಕಷ್ಟ ಹಾಗಾಗಿ ಕೆಲಸಗಾರರನ್ನು ನಿಯೋಜಿಸಿಕೊಳ್ಳಲೇಬೇಕು ಅಂಗಡಿಯ ಗಾತ್ರದ ಮೇಲೆ ಕೆಲಸಗಾರರನ್ನು ನಿಯೋಜಿಸಿಕೊಳ್ಳಬೇಕು .

ಕಿರಾಣಿ ಸ್ಟೋರ್ ಇನ್ವೆಸ್ಟ್ಮೆಂಟ್ ಬಗ್ಗೆ ನೋಡುವುದಾದರೆ ಇನ್ವೆಸ್ಟ್ಮೆಂಟ್ ನಿಮ್ಮ ಮೇಲೆಯೇ ಅವಲಂಭಿತವಾಗಿರುತ್ತೆ. ಸ್ವಂತ ಜಾಗ ಇದ್ದಾಗ ಬಾಡಿಗೆ ಕಟ್ಟುವ ಖರ್ಚು ಉಳಿಯತ್ತೆ. ಆರಂಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಎಂದೇ ಒಂದರಿಂದ ಎರಡು ಲಕ್ಷ ರೂಪಾಯಿ ಬೇಕಾಗುತ್ತೆ. ಹಾಗೂ ಮಿನಿಮಮ್ ಅಂದರೂ 1 ಲಕ್ಷ ರೂಪಾಯಿ ಡೆಪಾಸಿಟ್ ಇರಲೇ ಬೇಕು. ಹಾಗಾಗಿ ಒಟ್ಟಾಗಿ 34 ಲಕ್ಷದವರೆಗೂ ಇನ್ವೆಸ್ಟ್ಮೆಂಟ್ ಆಗಬಹುದು. ದೊಡ್ಡ ಮಟ್ಟದಲ್ಲಿ ಶಾಪ್ ಇಡುವುದಾದರೆ ಖರ್ಚು 10 ಲಕ್ಷದವರೆಗೂ ಆಗಬಹುದು. ಒಳ್ಳೆಯ ಪ್ರಾಫಿಟ್ ಇರುವಂತಹ ವಸ್ತುಗಳನ್ನ ಮಾರಾಟ ಮಾಡಿದಾಗ ನಿಮಗೂ ಹೆಚ್ಚೆಚ್ಚು ಪ್ರಾಫಿಟ್, ಅಂದರೆ ಆರಂಭದಲ್ಲಿ 20 ರಿಂದ 30 ಸಾವಿರದವರೆಗೂ ಪ್ರಾಫಿಟ್ ಸಿಗತ್ತೆ. ನಂತರ ಗ್ರಾಹಕರು ಹೆಚ್ಚಾಗಿ ಆದಾಯ ಕೂಡಾ ಹೆಚ್ಚಾಗತ್ತೆ. ಇನ್ನು ಯಾವುದೇ ಬ್ಯುಸ್ನೆಸ್ ಆದರೂ ಕೂಡಾ ಅದಕ್ಕೆ ಮಾರ್ಕೆಟಿಂಗ್ ಮುಖ್ಯ ಆಗಿರತ್ತೆ. ಜನರಿಗೆ ನಿಮ್ಮ ಅಂಗಡಿಯ ಬಗ್ಗೆ ಗೊತ್ತಿಲ್ಲ ಅಂದರೆ ಗ್ರಾಹಕರೆ ಆಗುವುದಿಲ್ಲ. ಹಾಗಾಗಿ ನಿಮ್ಮ ಕಿರಾಣಿ ಸ್ಟೋರ್ ಬಗ್ಗೆ ಜನರಿಗೆ ತಿಳಿಯಲು ಮಾರ್ಕೆಟಿಂಗ್ ಅಗತ್ಯ. ಆರಂಭದಲ್ಲಿ ವಸ್ತುಗಳನ್ನ ಸ್ವಲ್ಪ ಕಡಿಮೆ ಬೇಲೆಯಲ್ಲಿ ಮಾರಾಟ ಮಾಡಬೇಕು. ಇದರಿಂದ ಗ್ರಾಹಕರು ಆಕರ್ಷಿತರಾಗ್ತಾರೆ ಹಾಗೂ ಇತರರಿಗೂ ನಿಮ್ಮ ಅಂಗಡಿಯ ಬಗ್ಗೆ ತಿಳಿಸುತ್ತಾರೆ. ಈ ರೀತಿ ಅನೇಕ ಉಪಾಯಗಳನ್ನು ಪಾಲಿಸಿದರೆ ನಿಮ್ಮ ಅಂಗಡಿ ಉತ್ತಮ ಲಾಭವನ್ನು ಕಾಣಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!