ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಆತನ ಸಾಕಷ್ಟು ವಿಚಾರಗಳನ್ನು ತಿಳಿಸುತ್ತೆ. ಒಬ್ಬ ವ್ಯಕ್ತಿಯ ಕೈಯ್ಯಲ್ಲಿ ಸಾಕಷ್ಟು ರೇಖೆಗಳು ಇರತ್ತೆ ಅದರಲ್ಲಿ ಕೊನೆಯ ಬೆರಳು ನಮ್ಮ ಜೀವನದ ರಹಸ್ಯವನ್ನು ಹೇಳುತ್ತೆ ಅಂತ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತೆ. ನಮ್ಮ ಕಿರುಬೆರಳು ತಿಳಿಸುವ ನಮ್ಮ ಜೀವನದ ರಹಸ್ಯ ಏನು ಅನ್ನೋದನ್ನ ತಿಳಿದುಕೊಳ್ಳೋಣ.

ನಮ್ಮ ಕಿರುಬೆರಳು ಉಂಗುರ ಬೆರಳಿಗಿಂತ ಚಿಕ್ಕದಾಗಿ ಇದ್ದರೆ ನೀವು ಜನರ ಮಧ್ಯೇ ಬಹಳ ನಾಚಿಕೆಯ ಸ್ವಭಾವದ ವ್ಯಕ್ತಿ ಎಂದು ಅರ್ಥ ಹಾಗೂ ನಿಮಗೆ ದೊಡ್ಡ ದೊಡ್ಡ ಕನಸುಗಳು ಇರತ್ತೆ ಎಂದು ಹೇಳಲಾಗುತ್ತದೆ. ಬಹಳಷ್ಟು ಅಂಜಿಕೆಯ ಸ್ವಭಾವದಿಂದ ಹಲವಾರು ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದರೆ ಅಂದುಕೊಂಡಿದ್ದನ್ನು ಸಾಧಿಸುವ ಛಲ ಇರತ್ತೆ.

ಕಿರು ಬೆರಳು ಉಂಗುರ ಬೆರಳಿನ ಸುಪಿರಿಯರ್ ಗಂಟಿನಷ್ಟು ಎತ್ತರ ಇದ್ದರೆ ಸಮತೋಲನದ ವ್ಯಕ್ತಿತ್ವ ಎಂದು ಹೇಳುತ್ತಾರೆ. ಬೇರೆಯವರು ನಿಮ್ಮನ್ನು ಹೆಚ್ಚು ಕಿರಿ ಕಿರಿ ಮಾಡಿ ತೊಂದರೆ ಕೊಡಬೇಕು ಅಂತಿದ್ದರೆ ಅವರು ಬಹಳವೇ ಶ್ರಮ ಪಡಬೇಕಾಗುತ್ತೆ. ಇದರಿಂದ ನೀವು ಬೇಗ ಒತ್ತಡಕ್ಕೆ ಬೀಳುವ ಅವಶ್ಯಕತೆ ಇರಲ್ಲ ನಿಮ್ಮ ಈ ನಡವಳಿಕೆಯಿಂದ ಜನರು ನಿಮ್ಮನ್ನ ಬಹಳ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ ಜನರು ಅಂದುಕೊಳ್ಳುವುದಕ್ಕಿಂತ ಹೆಚ್ಚಿನ ಉತ್ಸಾಹ ನಿಮ್ಮಲ್ಲಿ ಇದ್ದಿರುತ್ತೆ.

ಉದ್ದ ಕಿರುಬೆರಳು ಕಿರುಬೆರಳು ಉಂಗುರ ಬೆರಳಿನ ಸುಪಿರಿಯರ್ ಗಂಟಿಗಿಂತ ಎತ್ತರ ಇದ್ದರೆ ನೀವು ಬಹಳ ಉತ್ಸಾಹದಿಂದ ಇರುತ್ತೀರ. ಸಾಮಾಜಿಕವಾಗಿ ಹೆಚ್ಚಿನ ಗೌರವ ಸಿಗತ್ತೆ ಎಲ್ಲರ ಜೊತೆಗೆ ಬೆರೆತು ಇರಲು ಇಷ್ಟ ಪಡುತ್ತೀರ ಆದರೆ ಜನರು ನಿಮ್ಮನ್ನು ನಂಬಲು ಬಹಳ ಕಷ್ಟ ಪಡಬೇಕಾಗುತ್ತದೆ.

ನಿಮ್ಮ ಕಿರುಬೆರಳು ಒಂದೇ ಎತ್ತರ ಹೊಂದಿದ್ದು ಉಂಗುರ ಬೆರಳಿಗಿಂತ ಚಿಕ್ಕದಾಗಿದ್ದರೆ ಜನರು ನಿಮ್ಮನ್ನು ನಂಬಲು ಬಹಳ ಕಷ್ಟ ಪಡಬೇಕಾಗುವುದು. ಇನ್ನು ಕಿರುಬೆರಳು ಮತ್ತು ಉಂಗುರದ ಬೆರಳು ಒಂದೇ ಎತ್ತರವನ್ನು ಹೊಂದಿದ್ದರೆ ತುಂಬಾ ಅಪರೂಪದ ವ್ಯಕ್ತಿತ್ವ ಹೊಂದಿರುತ್ತೀರ. ಇಂತಹ ವ್ಯಕ್ತಿಗಳು ಸ್ವಲ್ಪ ಶ್ರಮದ ಮೂಲಕ ಅತ್ಯುನ್ನತ ಹುದ್ದೆಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೇ ಯಶಸ್ಸು ಕೂಡಾ ಹೊಂದುತ್ತಾರೆ.

ಯಾರ ಕೈಯ್ಯ ಕೊನೆಯ ಬೆರಳು ಉಂಗುರ ಬೆರಳಿನ ಉಗುರಿನ ವರೆಗೂ ಇರುವುದೋ ಅಂತವರು ಭಾಗ್ಯಶಾಲಿಗಳು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತೆ. ಎಲ್ಲಾ ಬೆರಳುಗಳು ಸಾಮಾನ್ಯಕ್ಕಿಂತ ಚಿಕ್ಕದಾಗಿದ್ದರೆ ಅಂತವರು ಆತುರದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲದೆ ವ್ಯವಹಾರದಲ್ಲಿ ಸಹ ತಾಳ್ಮೆ ತೋರದೆ ಆತುರದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಬೆರಳಿನ ಉದ್ದ ಸಾಮಾನ್ಯವಾಗಿದೆ ಅಂದ್ರೇ ಅವರು ಮನೆಯಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ ಸಮಾಜದಲ್ಲಿ ಉನ್ನತ ಕೆಲಸಗಳನ್ನು ಮಾಡುತ್ತಾರೆ. ಈ ವಿಡಿಯೋ ನೋಡಿ..

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!