ಸಾಮಾನ್ಯವಾಗಿ ಕಣ್ಣು, ಕಿವಿ, ಹೃದಯ ಇಂತಹ ಅಂಗಗಳ ಬಗ್ಗೆ ಮಾತ್ರ ಕಾಳಜಿಯನ್ನು ವಹಿಸುತ್ತೇವೆ ಆದರೆ ಕಿಡ್ನಿಗಳು ಸಹ ದೇಹದಲ್ಲಿ ಮುಖ್ಯವಾಗಿದೆ. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ದೇಹದಲ್ಲಿ ಕೆಲವು ಲಕ್ಷಣಗಳು ಕಂಡು ಬರುತ್ತದೆ. ಕಿಡ್ನಿ ಸರಿಯಾಗಿಲ್ಲದಿದ್ದರೆ ದೇಹದಲ್ಲಿ ಕಂಡುಬರುವ ಲಕ್ಷಣಗಳು ಯಾವುವು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕಿಡ್ನಿಗಳು ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಿಡ್ನಿಗಳು ರಕ್ತವನ್ನು ಶುದ್ಧೀಕರಿಸುತ್ತದೆ ಅದರಲ್ಲಿರುವ ಮಲಿನಗಳನ್ನು ಸ್ವಚ್ಛಗೊಳಿಸುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ವ್ಯರ್ಥಗಳನ್ನು ಹೊರಗೆ ಹಾಕುತ್ತದೆ. ಮೂತ್ರದ ರೂಪದಲ್ಲಿ ವ್ಯರ್ಥಗಳನ್ನು ತೊಲಗಿಸುತ್ತದೆ. ಒಂದು ವೇಳೆ ಕಿಡ್ನಿ ಕೆಲಸ ಮಾಡಲಿಲ್ಲ ಎಂದರೆ ಅನಾರೋಗ್ಯವನ್ನು ಅನುಭವಿಸಬೇಕಾಗುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ದೇಹ ಅನೇಕ ಸೂಚನೆ, ಲಕ್ಷಣಗಳನ್ನು ತೋರಿಸುತ್ತದೆ. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ದೇಹದಲ್ಲಿ ಸಂಗ್ರಹವಾಗಿರುವ ವ್ಯರ್ಥಗಳು ಹೊರ ಹಾಕದೆ ನಂಜು ದೇಹದಲ್ಲಿ ಉಳಿಯುತ್ತದೆ ಇದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ ನಿದ್ರಾ ಸಮಸ್ಯೆ ಪ್ರಾರಂಭವಾಗುತ್ತದೆ.
ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೆ ವಿಟಮಿನ್ ಡಿಯನ್ನು ಅದು ಮೊಳೆಗಳಂತೆ ಬಳಸುತ್ತದೆ ಒಂದು ವೇಳೆ ಕಿಡ್ನಿ ಈ ಕೆಲಸ ಮಾಡದೆ ಇದ್ದರೆ ಇಪಿಒ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ ಇದರಿಂದ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಸಮಸ್ಯೆಗಳು ಎದುರಾಗುತ್ತವೆ ತಲೆನೋವು, ಸುಸ್ತು ಆಗುತ್ತದೆ.
ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ದೇಹದಲ್ಲಿ ವ್ಯರ್ಥ ದ್ರವಗಳು ಹಾಗೆಯೇ ಉಳಿದು ಚರ್ಮದ ಕೆಳಗೆ ಸೇರಿ ತುರಿಕೆಯನ್ನು ಉಂಟು ಮಾಡುತ್ತದೆ ಇದರ ಜೊತೆಗೆ ಚರ್ಮ ಒಣಗಿದಂತೆ ಕಾಣುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಬಾಯಿಯು ದೂರ್ವಾಸನೆ ಬರುತ್ತದೆ ಹಾಗೂ ನಾಲಿಗೆಯು ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಉಸಿರಾಟ ಸರಿಯಾಗಿ ಮಾಡಲು ಆಗದೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಹಿಮ್ಮಡಿ ಕಾಲು, ಕೈಗಳಲ್ಲಿ ನೀರು ಸಂಗ್ರಹವಾಗಿ ಅವು ಊತಕ್ಕೆ, ನೋವಿಗೆ ಕಾರಣವಾಗುತ್ತದೆ. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಬ್ಯಾಕ್ ಪೇನ್ ಬರುತ್ತದೆ, ಕಿಡ್ನಿ ಇರುವ ಜಾಗವು ಅಪಾರ ಪ್ರಮಾಣದಲ್ಲಿ ನೋವನ್ನು ಕೊಡುತ್ತವೆ ಇದರಿಂದ ಕುಳಿತುಕೊಳ್ಳಲು, ನಿಂತುಕೊಳ್ಳಲು, ನಡೆದಾಡಲು ಕಷ್ಟವಾಗುತ್ತದೆ.
ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೆ ಇದ್ದಾಗ ಮೂತ್ರದ ಮೂಲಕ ಪ್ರೊಟೀನ್ ಹೊರಹೋಗುತ್ತದೆ ಅಲ್ಲದೆ ಕಣ್ಣು ಕೆಂಪಗಾಗಿ, ಉರಿ, ಉಬ್ಬುಗಳು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಕೆಲಸ ಮಾಡದೆ ಇದ್ದಾಗ ಅಧಿಕ ರಕ್ತದೊತ್ತಡ ಉಂಟಾಗುತ್ತದೆ ಹಾಗೂ ಬಾಯಿ ದೂರ್ವಾಸನೆಯಿಂದ ಕೂಡಿರುತ್ತದೆ. ಈ ಎಲ್ಲಾ ಲಕ್ಷಣಗಳು ಕಂಡುಬಂದರೆ ಕಿಡ್ನಿಯು ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಅರ್ಥ ತಕ್ಷಣ ವೈದ್ಯರ ಬಳಿ ಹೋಗಿ ಸಲಹೆ ಪಡೆದುಕೊಳ್ಳಬೇಕು. ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ