ನಿಮಿಷಗಳಲ್ಲಿ ಕಪ್ಪಾಗಿರುವ ಕುತ್ತಿಗೆ ಭಾಗವನ್ನು ಬೆಳ್ಳಗೆ ಮಾಡುವ ಮನೆಮದ್ದು

ಬಹಳಷ್ಟು ಜನರ ಕುತ್ತಿಗೆ ಭಾಗ ಕಪ್ಪಾಗಿರುತ್ತದೆ. ಆದರೆ ಅದನ್ನು ಹೋಗಲಾಡಿಸುವುದು ಹೇಗೆ ಎಂಬ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಮನೆಯಲ್ಲಿ ದಿನಬಳಕೆಗೆ ಬಳಸುವ ಕೆಲವು ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಕುತ್ತಿಗೆಯ ಕಪ್ಪಾದ ಭಾಗವನ್ನು 5ನಿಮಿಷದಲ್ಲಿ ಸರಿ ಮಾಡಿಕೊಳ್ಳಬಹುದಾಗಿದೆ. ಕುತ್ತಿಗೆಯ ಕಪ್ಪಾದ ಭಾಗವನ್ನು ಸರಿಮಾಡಿಕೊಳ್ಳುವ ಹೋಮ್ ರೆಮಿಡಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು ವೈಟ್ ಟೂತ್ ಪೇಸ್ಟ್ ನಿಂಬೆ ಹಣ್ಣು, ಆಲೋವೆರಾ ಜಲ್. ಒಂದು ಬೌಲಗೆ ವೈಟ್ ಟೂತ್ ಪೇಸ್ಟ್ ಅಂದರೆ ಕೋಲ್ಗೇಟ್ ಅನ್ನು ಬಳಸಬಹುದು ಇದನ್ನು ಸ್ವಲ್ಪ ಹಾಕಿಕೊಳ್ಳಬೇಕು ಇದರಲ್ಲಿ ಬ್ಲೀಚಿಂಗ್ ಎಜೆಂಟ್ ಇದೆ , ಇದು ಸ್ಕಿನ್ ಡಾರ್ಕ್ ಆಗಲು ಕಾರಣವಾಗಿರುವ ಡೆಡ್ ಸ್ಕಿನ್ ಅನ್ನು ಹೋಗಲಾಡಿಸುತ್ತದೆ. ನಂತರ ಅದಕ್ಕೆ ಆಲೋವೆರಾ ಜೆಲ್ ಹಾಕಬೇಕು ಗಿಡವಿದ್ದರೆ ಅದನ್ನೇ ಬಳಸುವುದು ಉತ್ತಮ ಇದು ಉತ್ತಮ ಮೊಯಶ್ಚರೈಸ್ ಎಜೆಂಟ್ ಆಗಿದೆ. ಅದಕ್ಕೆ 3-4 ಹನಿ ನಿಂಬೆಹಣ್ಣಿನ ರಸವನ್ನು ಹಾಕಬೇಕು.

ನಿಂಬೆರಸ ನ್ಯಾಚುರಲ್ ಬ್ಲೀಚಿಂಗ್ ಎಜೆಂಟ್ ಆಗಿದ್ದು ಸ್ಕಿನ್ ವೈಟ್ ಆಗಲು ಕಾರಣವಾಗುತ್ತದೆ. ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಒಂದು ಟವೆಲ್ ನ್ನು ಬಿಸಿನೀರಿನಲ್ಲಿ ಅದ್ದಿ ಹಿಂಡಿ ಅದರಿಂದ ಕುತ್ತಿಗೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು ಈ ರೀತಿ ಮಾಡುವುದರಿಂದ ನಾವು ಬಳಸಿದ ರೆಮಿಡಿ ಉತ್ತಮವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ. ನಂತರ ತಯಾರಿಸಿದ ರೆಮಿಡಿಯನ್ನು ಕುತ್ತಿಗೆಯ ಮೇಲೆ ಕಪ್ಪಾಗಿರುವ ಜಾಗಗಳ ಮೇಲೆ ಅಪ್ಲೈ ಮಾಡಬೇಕು ಅರ್ಧ ನಿಂಬು ಭಾಗವನ್ನು ತೆಗೆದುಕೊಂಡು ಅದರ ಮೇಲೆ ನಿಧಾನವಾಗಿ ಸ್ಕ್ರಬ್ ಮಾಡಬೇಕು ಕುತ್ತಿಗೆಯ ಭಾಗ ಕಪ್ಪಾಗಲು ಕಾರಣ ಡೆಡ್ ಸ್ಕಿನ್ ಆದ್ದರಿಂದ ಈ ರೀತಿ ಮಾಡುವುದರಿಂದ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.

ನಂತರ 5 ನಿಮಿಷ ಬಿಡಬೇಕು ನಂತರ ಟವೆಲ್ ನಿಂದ ನೀಟಾಗಿ ಕ್ಲೀನ್ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಯಾವುದೇ ಕೆಮಿಕಲ್ ಹಾಕದೆ ಅಥವಾ ಹಣ ಖರ್ಚು ಮಾಡದೆ ಮನೆಯಲ್ಲಿ ಸುಲಭವಾಗಿ ಕುತ್ತಿಗೆಯ ಮೇಲೆ ಕಪ್ಪಾಗಿರುವುದನ್ನು ನಿವಾರಣೆ ಮಾಡಿಕೊಳ್ಳಬಹುದು. ಇದೊಂದು ಉತ್ತಮವಾದ ಹೋಮ್ ರೆಮಿಡಿಯಾಗಿದೆ ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಹಾಗೂ ಇದನ್ನು ಮೊಣಕಾಲುಗಳ, ಮೊಣಕೈಗಳ ಕಪ್ಪಾದ ಜಾಗದ ಮೇಲೆ ಅಪ್ಲೈ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave a Comment