ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ. ಸುದೀಪ್ ಅವರ ಹುಟ್ಟುಹಬ್ಬದ ದಿನವನ್ನು ಅವರ ಅಭಿಮಾನಿಗಳು ಹಬ್ಬದ ರೀತಿ ಆಚರಣೆಯನ್ನು ಮಾಡುತ್ತಾರೆ. ತಮ್ಮ ಉತ್ತಮ ಅಭಿನಯ ಮತ್ತು ಒಳ್ಳೆಯ ಗುಣಗಳಿಂದ ಕರ್ನಾಟಕದಲ್ಲಿ ಅಪಾರವಾದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕಿಚ್ಚ ಸುದೀಪ್ ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ದೊಡ್ಡ ಮಟ್ಟದಲ್ಲಿಯೇ ಗುರುತಿಸಿಕೊಂಡಿದ್ದಾರೆ.

ಹೀಗೆ ದೇಶದ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿಯನ್ನು ಪಡೆದಿರುವ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇತರೆ ಚಲನಚಿತ್ರರಂಗದ ಕಲಾವಿದರು ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದು ಸಾಮಾನ್ಯದ ವಿಷಯ. ಆದರೆ ಈ ಬಾರಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್ ತಂಡ ವಿಶೇಷವಾಗಿ ಉಡುಗೊರೆಯನ್ನು ಕಳುಹಿಸಿಕೊಡುವುದರ ಮೂಲಕ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿ ಕಿಚ್ಚ ಸುದೀಪ್ ಅವರಿಗೆ ಸರ್ಪ್ರೈಸ್ ನೀಡಿದೆ. ಇದರ ಜೊತೆಗೆ ತಂದೆಯ ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ಕಿಚ್ಚ ಸುದೀಪ್ ಅವರು ಅತ್ಯಂತ ಭಾವುಕರಾಗಿದ್ದರು. ಹಾಗಿದ್ದರೆ ಸುದೀಪ ಅವರ ಮಗಳು ಕೊಟ್ಟ ಭಾವನಾತ್ಮಕ ಉಡುಗೊರೆ ಏನಿರಬಹುದು?

ಇದೀಗ ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ಹಾಗೂ ಖ್ಯಾತ ನಟ ಕಿಚ್ಚ ಸುದೀಪ್ ರವರು ಐವತ್ತನೆಯ ವಸಂತಕ್ಕೆ ಕಾಲಿಟ್ಟಿದ್ದು ಪ್ರತಿ ವರುಷ ಕೂಡ ಕಿಚ್ಚನ ಹುಟ್ಟುಹಬ್ಬವನ್ನು ಅವರ ಪ್ರೀತಿಯ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದರು. ಆದರೆ ಕಳೆದ ವರ್ಷದಿಂದ ಕಿಚ್ಚನ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದ್ದು ಈ ವರುಷ ಕೂಡ ಅಭಿಮಾನಿಗಳು ಹಬ್ಬದಂತೆ ಕಿಚ್ಚನ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ.

ಕರೋನ ಕಾರಣದಿಂದಾಗಿ ಅಭಿಮಾನಿಗಳೆಲ್ಲರೂ ಕೂಡ ಕಿಚ್ಚನ ಮನೆಗೆ ಹೋಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಸಾಧ್ಯವಾಗದೆ ತಾವು ಇದ್ದ ಸ್ಥಳದಲ್ಲಿಯೇ ಮನ ತುಂಬಿ ಹುಟ್ಟುಹಬ್ಬದ ಹಾರೈಕೆ ಹಾಗೂ ಶುಭಾಶಯವನ್ನು ತಲುಪಿಸಿದ್ದಾರೆ. ಆದರೆ ಕಿಚ್ಚನ ಕೆಲವು ಪಟ್ಟ ಅಭಿಮಾನಿಗಳು ಯಾವುದಕ್ಕೂ ಕೂಡಾ ತಲೆ ಕೆಡಿಸಿಕೊಳ್ಳದೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಅವರ ಮನೆ ಮುಂದೆ ತೆರಳಿ ಕಿಚ್ಚನಿಗೆ ಜೈಕಾರ ಕೂಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇನ್ನೂ ಸಾಕಷ್ಟು ಜನ ಸೇರಿದ್ದ ಕಾರಣ ಪೊಲೀಸರು ಆಗಮಿಸಿ ಜನರ ಗುಂಪನ್ನು ಚದುರಿಸಿ ಮನೆಗೆ ಹಿಂತಿರುಗುವಂತೆ ತಿಳಿಸಿದರು.

ಹ್ಯಾಪಿಯೆಸ್ಟ್ ಬರ್ತ್ ಡೇ ಅಪ್ಪ ಇಂದು ನಾವು ಒಬ್ಬ ಮಗ ಒಬ್ಬ ತಮ್ಮ ಗಂಡ ಹಾಗೂ ಒಬ್ಬ ಅಪ್ಪ ಜೊತೆಗೆ ಒಬ್ಬ ಲೆಜೆಂಡ್ ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ನಿನ್ನಲ್ಲಿ ನಾಯಕತ್ವದ ಗುಣ ನಿನ್ನಲ್ಲಿ ಮುಗ್ಧತೆ ನಿನ್ನಲ್ಲಿ‌ ನಿಷ್ಠೆ ನಿನ್ನಲ್ಲಿ ಪ್ರತಿಪಾದನೆ ನಿನ್ನಲ್ಲಿ ಕರುಣೆ  ನಿನ್ನಲ್ಲಿ ಶಕ್ತಿ  ನಿನ್ನಲ್ಲಿ ಶ್ರದ್ಧೆ ನಿನ್ನ ಭಾವನಾತ್ಮಕ ಗುಣ ಅಪರಿಮಿತ ಪ್ರೀತಿ ನಿನ್ನಲ್ಲಿ ಪರಿಶ್ರಮ ಎಲ್ಲವನ್ನೂ ನಾನು ನೋಡಿದ್ದೇನೆ ಇಂದು ಆ ಎಲ್ಲದರ ಆಚರಣೆಯೂ ಕೂಡ ನಡೆಯುತ್ತಿದೆ ಲವ್ ಯು ಅಪ್ಪ ಎಂದು ಸದ್ಯ ಇದೆಲ್ಲದರ ನಡುವೆ ಕಿಚ್ಚ ಸುದೀಪ್ ರವರ ಪ್ರೀತಿಯ ಮಗಳು ಸಾನ್ವಿ ತನ್ನ ಪ್ರೀತಿಯ ತಂದೆಗೆ ಉಡುಗೊರೆಯೊಂದನ್ನು ನೀಡಿದ್ದು  ಸುದೀಪ್ ಅವರ ಹುಟ್ಟು ಹಬ್ಬವನ್ನು ಖಾಸಗಿ ಹೊಟೆಲ್ ಒಂದರಲ್ಲಿ ಆಚರಿಸಿ ಸರ್ಪ್ರೈಸ್ ನೀಡಿದ್ದಾರೆ.

ಈ ಸಂಭ್ರಮಾಚರಣೆಯಲ್ಲಿ  ಸುದೀಪ್ ಅವರ ಆಪ್ತರು ಹಾಗೂ ಕುಟುಂಬವರ್ಗದವರು ಪಾಲ್ಗೊಂಡಿದ್ದು ಸುದೀಪನಿಗೆ ಶುಭಾಶಯ ತಿಳಿಸಿದ್ದಾರೆ.ಹೌದು ಮಗಳು ಸಾನ್ವಿ ತನ್ನ ಪ್ರೀತಿಯ ಅಪ್ಪನಿಗೆ ಭಾವುಕರಾಗಿ ವಿಶೇಷ ಸಾಲುಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಪತ್ರ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

ಮಗಳಾಗಿ ಹುಟ್ಟಲು ಪುಣ್ಯ ಮಾಡಿದ್ದೆ ಎಂದು ಪ್ರತಿಯೊಂದು ಪದಕ್ಕೂ ಕೂಡ ಒಂದೊಂದು ಫೋಟೋ ಹಂಚಿಕೊಂಡು ಶುಭಾಶಯಗಳನ್ನು ತಿಳಿಸಿ ಭಾವುಕರಾಗಿದ್ದಾರೆ ಮಗಳು ಸಾನ್ವಿ. ಇನ್ನು  ಸುದೀಪ್ ರವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ದಾಸ್‌, ಶೈನ್‌ ಶೆಟ್ಟಿ, ಪ್ರಥಮ್‌, ಶಶಿ, ರಾಜೀವ್, ದಿವ್ಯಾ ಉರುಡುಗ , ವೈಷ್ಣವಿ, ಮಂಜು ಪಾವಗಡ ಸೇರಿದಂತೆ ಎಲ್ಲಾ ಬಿಗ್ ಬಾಸ್ ಸದಸಸ್ಯರು ಹಾಗೂ ಬಹುತೇಕ ಎಲ್ಲಾ  ಕಿರುತೆರೆ ಕಲಾವಿದರು ಆತ್ಮೀಯರು ಎಲ್ಲರೂ ಸಹ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಶುಭ ಕೋರಿದ್ದಾರೆ.

ಇನ್ನು ಅತ್ತ ತಮ್ಮ ಮುಂದಿನ ಸಿನಿಮಾ ವಿಕ್ರಾಂತ್ ರೋಣದ ಚಿತ್ರೀಕರಣದಲ್ಲಿ ನಿರತರಾಗಿದ್ದ ಕಿಚ್ಚ ಸುದೀಪ್ ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಜೆರ್ಸಿಯನ್ನು ಪಾರ್ಸೆಲ್ ಕಳುಹಿಸಿಕೊಡುವುದರ ಮೂಲಕ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಾಜಸ್ತಾನ್ ರಾಯಲ್ಸ್ ಸರ್ಪ್ರೈಸ್ ಉಡುಗೊರೆಯನ್ನು ನೀಡಿದೆ. ರಾಜಸ್ಥಾನ್ ರಾಯಲ್ಸ್ ತಂಡದಿಂದ ಸುದೀಪ್ ಅವರಿಗೆ ವಿಶೇಷ ಟಿ ಶರ್ಟ್ ಕಿಚ್ಚ ಎಂಬ ಹೆಸರು ಹಾಗೂ ಏಳನೇ ನಂಬರ್ ನ ಟೀಶರ್ಟ್ ಅನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದು ಸುದೀಪ್‌ ಅವರ ಕುರಿತ ಪುಸ್ತಕವೊಂದು ಬಿಡುಗಡೆಯಾಗಿದೆ. ಜೊತೆಗೆ ಈ ವರ್ಷದ ಸುದೀಪ್‌ ಅವರ ಹುಟ್ಟು ಹಬ್ಬದ ಸಿಡಿಪಿ ಯನ್ನು ಅನಿಲ್‌ ಕುಂಬ್ಳೆ ಅವರು ಬಿಡುಗಡೆ ಮಾಡಿ ಶುಭಾಶಯ ತಿಳಿಸಿದ್ದು ಮತ್ತಷ್ಟು ವಿಶೇಷ ಎನ್ನಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *