ನಮ್ಮಲ್ಲಿನ ಕಷ್ಟ ಸುಖ ಸಮಸ್ಯೆಗಳನ್ನು ದೇವರಲ್ಲಿ ಕೇಳಿಕೊಳ್ಳುತ್ತೇವೆ ಅದೇ ನಿಟ್ಟಿನಲ್ಲಿ ಪ್ರತಿ ದೇವರುಗಳು ಹಾಗೂ ದೇವಾಲಯಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತದೆ ಈ ಕಾರ್ಯ ಸಿದ್ದಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಬಂದು ಒಂದು ತೆಂಗಿನಕಾಯಿಯನ್ನು ಹರಕೆಯಾಗಿ ಅರ್ಪಿಸಿದರೆ ಕಷ್ಟಗಳನ್ನು ನಿವಾರಿಸುತ್ತದೆ ಈ ಕಾರ್ಯ ಸಿದ್ದಿ ಆಂಜನೇಯ ಸ್ವಾಮಿ. ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಹಾಗೂ ಇದರ ಮಹತ್ವವೇನು ಅನ್ನೋದನ್ನ ನೋಡೋಣ.
ಹನುಮಾನ್ ಬಲಶಾಲಿ ಶಕ್ತಿಶಾಲಿ ಹಾಗೂ ಚಿರಂಜೀವಿ ಅನ್ನೋ ಪ್ರತೀತಿ ಇದೆ ಅಷ್ಟೇ ಅಲ್ಲದೆ ಹನುಮಾನ್ ಧ್ಯಾನಾಸಕ್ತನಾಗಿದ್ದಾನೆ ಅನ್ನೋದನ್ನ ಹೇಳಲಾಗುತ್ತದೆ ಆದ್ದರಿಂದ ಹನುಮಾನ್ ದೇವಾಲಯದಲ್ಲಿ ಗದ್ದಲ ಮಾಡಬಾರದು ಅಲ್ಲಿ ಕುಳಿತು ಧ್ಯಾನಮಾಡಬೇಕು ಹಾಗೂ ಹನುಮ ಜಪ ಮಾಡಬೇಕು ಅನ್ನೋದನ್ನ ಹೇಳಲಾಗುತ್ತದೆ. ಮನೆಯಲ್ಲಿ ಅಶಾಂತಿಯ ವಾತಾವರಣ ಹಾಗೂ ಅನಾರೋಗ್ಯದ ಸಮಸ್ಯೆ ಅಧೈರ್ಯವಂತರು, ಪ್ರೀತಿಗಾಗಿ ಹಾತೊರೆಯುವವರು ಈ ಹನುಮನ ದರ್ಶನ ಪಡೆದುಕೊಳ್ಳಬೇಕು.
ಪುರಾಣಗಳ ಪ್ರಕಾರ ರಾಮ ಸೀತೆಯರನ್ನು ಕೊಡಿಸಿದವನು ಹನುಮನ್ ಅತೀವ ಧೈರ್ಯ ಮತ್ತು ಬಲ ಹೊಂದಿದವನು ಹನುಮನೊಬ್ಬನೇ ಎಂಬುದು ಎಲ್ಲರಿಗೂ ಗೊತ್ತಿದ್ದೇ. ಹನುಮನ ದೇವಾಲಯದಲ್ಲಿ ಅನುಕೂಲವಿದ್ದರೆ ಅಥವಾ ಸಾಧ್ಯವಿದ್ದರೆ ಹನುಮನ ಪಾದಗಳಿಗೆ ಹಣೆ ಹಚ್ಚುವುದನ್ನು ಮರೆಯಬಾರದು. ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಅನ್ನೋದನ್ನ ಹೇಳುವುದಾದರೆ ಬೆಂಗಳೂರಿನ ಗಿರಿ ನಗರದಲ್ಲಿದೆ.
ಹೌದು ಈ ಕಾರ್ಯ ಸಿದ್ದಿ ಆಂಜನೇಯನ ಡೆಲವಲಯಕ್ಕೆ ಬಂದು ಕಷ್ಟ ಬಗೆಹರಿಯಬೇಕೆಂದು ಬೇಡಿಕೆ ಇಟ್ಟು ಹರಕೆ ಕಟ್ಟಿದರೆ ಅದು ಖಂಡಿತ ನೆರವೇರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಭಕ್ತಾದಿಗಳು ಒಂದು ತೆಂಗಿನಕಾಯಿಯನ್ನು ಹರಕೆ ರೂಪದಲ್ಲಿ ದೇವಾಲಯದ ಆವರಣದಲ್ಲಿ ಕಟ್ಟುತ್ತಾರೆ. ಈ ತೆಂಗಿನಕಾಯಿಯಿಂದ ಮಾಡಿದ ಪ್ರಸಾದವನ್ನು ಎಲ್ಲರಿಗೂ ಹಂಚಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.