ರಾಜ್ಯದಲ್ಲಿ ಹಲವು ದೇವಾಲಯಗಳಿವೆ ಆದ್ರೆ ಪ್ರತಿ ದೇವಾಯಲಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ, ಅದೇ ನಿಟ್ಟಿನಲ್ಲಿ ಈ ದೇವಾಲಯವು ಕೂಡ ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ ಅಷ್ಟಕ್ಕೂ ಈ ದೇವಾಲಯ ಯಾವುದು ಅನ್ನೋದನ್ನ ಹೇಳುವುದಾರೆ ಹದ್ದಿನ ಕಲ್ಲು ಹನುಮಂತರಾಯನ ದೇವಾಲಯವಾಗಿದೆ ಇದು ಇರೋದಾದರೂ ಎಲ್ಲಿ ಅನ್ನೋದನ್ನ ತಿಳಿಯುವುದಾದರೆ ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿಯಲ್ಲಿ ಯಡಿಯೂರನ್ನು ದಾಟಿದಾಗ ಒಂದು ಸುಂದರವಾದ ಬೆಟ್ಟವಿದೆ ಆ ಬೆಟ್ಟದ ಮೇಲೆ ಹದ್ದಿನಕಲ್ಲು ಹನುಮಂತರಾಯನು ನೆಲೆಸಿದ್ದಾನೆ.

ಈ ಬೇಟದ ಮೇಲಿನ ಆಂಜನೇಯನ ಸ್ವಾಮಿಯನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಅಷ್ಟೊಂದು ಪವರ್ ಫುಲ್ ಎಂಬುದಾಗಿ ಹೇಳಲಾಗುತ್ತದೆ. ಮಹಿಮೆ ಹಾಗೂ ಪವಾಡವನ್ನು ಹೊಂದಿರುವಂತ ಮಹಿಮಾನ್ವಿತವಾದ ಹನುಮನತನ ದೇವಾಲಯವೆಂದರೆ ಅದು ಹದ್ದಿನಕಲ್ಲು ಹನುಮಂತರಾಯ ದೇವಾಲಯ ಅಥವಾ ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ, ಈ ದೇವಾಲಯವು ತೀರ್ಥಯಾತ್ರಾ ಸ್ಥಳವಾಗಿದೆ. ಮತ್ತೊಂದು ವಿಶೇಷತೆ ಏನು ಅಂದ್ರೆ ಈ ದೇವರಿಗೆ ಹದ್ದಿನಕಲ್ಲು ಆಂಜನೇಯ ಎಂಎಂಬುದಾಗಿ ಹೆಸರು ಬರಲು ಕಾರಣವೇನು ಅನ್ನೋದಾದರೆ, ಇಲ್ಲಿನ ಅಪೂರ್ವವಾದ ಕಲ್ಲಿಗೆ “ಹದ್ದಿನ ಕಲ್ಲು” ಎಂದು ಕರೆಯುತ್ತಾರೆ. ಹೀಗಾಗಿ ಈ ಬೆಟ್ಟದ ಮೇಲೆ ನೆಲೆಸಿರುವ ಹನುಮಂತನಿಗೆ ಹದ್ದಿನಕಲ್ಲು ಆಂಜನೇಯ ಸ್ವಾಮಿ ಎಂದು ಹೆಸರು ಬಂದಿತು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ

ಈ ದೇವಾಲಯದ ವಿಶೇಷತೆ ಹಾಗೂ ಮಹತ್ವವೇನು ಅನ್ನೋದನ್ನ ನೋಡುವುದಾದರೆ ಇಲ್ಲಿ ರಾವಣನ ಮಗ ಇಂದ್ರಜಿತ್‍ನ ಸಣ್ಣದಾದ ಪ್ರತಿಮೆಯನ್ನು ನೀವು ಈ ದೇವಾಲಯದ ಬಲ ಭಾಗದಲ್ಲಿ ಕಾಣಬಹುದಾಗಿದೆ. ಮೆಟ್ಟಿಲುಗಳನ್ನು ಹತ್ತುವಾಗ ಯಾವುದೇ ಕಾರಣಕ್ಕೂ ಪಾದರಕ್ಷೆಗಳನ್ನು ಧರಿಸುವಂತೆ ಇಲ್ಲ. ಇನ್ನು ಈ ದೇವಾಲಯಕ್ಕೆ ಬೆಳಗ್ಗಿನ ಜಾವಾ ಅಂದರೆ ಸೂರ್ಯೋದಯದ ವೇಳೆಯಲ್ಲಿ ಈ ದೇವರ ಬೆಟ್ಟವನ್ನು ಹತ್ತುವಾಗ ಯಾತ್ರಿಕರಿಗೆ ಅದ್ಭುತವಾದ ಅನುಭವ ನೀಡುತ್ತದೆ.

ಈ ದೇವಾಲಯದ ಮತ್ತೊಂದು ವಿಶೇಷತೆ ಏನು ಅನ್ನೋದಾದರೆ ಈ ಆಂಜನೇಯನ ಸನ್ನಿದಿಯಲ್ಲಿ ಅಂದರೆ ಆಂಜನೇಯ ಸ್ವಾಮಿ ನೆಲೆಸಿರುವ ಸ್ತಂಭದ ಕೆಳಗೆ ರಾವಣನ ಮಗ ಇಂದ್ರಜಿತ್ ಕೂಡ ನೆಲೆಸಿದ್ದಾನೆ. ಇದೊಂದು ವಿಭಿನ್ನವಾದ ದೇವಾಲಯ ಎಂದೇ ಹೇಳಬಹುದು, ನಿಮಗೆ ತಿಳಿದಿರುವಂತೆ ಶ್ರೀ ರಾಮನು ರಾವಣನನ್ನು ಸಂಹಾರ ಮಾಡುತ್ತಾನೆ. ಆ ರಾವಣನ ಮಗನೇ ಈ ಇಂದ್ರಜಿತ್. ಇದು ರಾವಣನ ಮಗ ಇಂದ್ರಜಿತ್‍ಗೆ ಮೀಸಲಾಗಿರುವ ದೇವಾಲಯದಲ್ಲಿ ಇದೊಂದೇ ಆಗಿರಬಹುದು. ಇನ್ನು ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಬಂದು ತಮ್ಮ ಇಷ್ಟಾರ್ಥವನ್ನು ಸಿದ್ಧಿಗೊಳಿಸುವಂತೆ ಬೇಡಿಕೊಳ್ಳುತ್ತಾರೆ, ಅಷ್ಟೇ ಅಲ್ಲದೆ ಕೆಲವರು ಇಲ್ಲಿ ಮಾಂಸಾಹಾರವನ್ನು ತಂದು ಅಡುಗೆ ಮಾಡಿ ಸೇವನೆ ಮಾಡುತ್ತಾರೆ. ದೆವ್ವ ಭೂತ ಪ್ರೇತ ಮೆತ್ತಿರುವಂತವರಿಗೆ ಇಲ್ಲಿ ಕರೆತಂದು ಬಿಡಿಸಲಾಗುತ್ತದೆ.

By

Leave a Reply

Your email address will not be published. Required fields are marked *