ಪ್ರತಿಯೊಬ್ಬರಿಗೂ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎನ್ನುವ ಕನಸು, ತುಡಿತ ಇರುತ್ತದೆ. ಸ್ವಂತ ಉದ್ಯಮ ಪ್ರಾರಂಭಿಸುವುದು ಅಷ್ಟು ಸುಲಭ ಅಲ್ಲದಿದ್ದರೂ ಕಷ್ಟವಂತೂ ಅಲ್ಲ. ಇದಕ್ಕೆ ಹೆಚ್ಚಿನ ಸಮಯ, ಸಮರ್ಪಣೆ, ಹಾರ್ಡ್ ವರ್ಕ್ ಬೇಕು. ಉತ್ತಮ ಆರಂಭ ಮಾಡಿದರೆ ಅರ್ಧ ಕೆಲಸ ಮುಗಿದಂತೆ ಎನ್ನುವುದು ಸಾಹಸಿಗಳ ಹಾಗೂ ಸಾಧಕರ ಅನುಭವದ ಮಾತು. ಹೀಗಾಗಿ ಕನಸು ನಮ್ಮದು, ನನಸು ಮಾಡಿಕೊಳ್ಳುವ ಜವಾಬ್ಧಾರಿ ಕೂಡ ನಮ್ಮದು. ಹೀಗಿರಬೇಕಾದರೆ ನಮ್ಮ ಸ್ವಂತ ಊರು, ಸ್ವಂತ ಸ್ಥಳಗಳಲ್ಲಿ, ಸ್ವಂತ ಬಂಡವಾಳದೊಂದಿಗೆ ವ್ಯವಹಾರವನ್ನು ಪ್ರಾರಂಭಿಸುವ ಬಗೆಯನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.

ಅನಾದಿ ಕಾಲದಿಂದಲೂ ಹಿಂದೂಗಳು ಈ ಆಚರಣೆಗಳನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.ಮುಖ್ಯವಾಗಿ ದೇವರ ಪೂಜೆ ಮಾಡುವಾಗ ದೀಪ,ಅಗರ ಬತ್ತಿ ಬೆಳಗುವುದು ಕರ್ಪೂರ ಆರತಿ ಮಾಡುತ್ತೇವೆ.ಸಿನಮೋಮಮ್ ಕ್ಯಾಂಫೋರ ಎಂಬ ವೃಕ್ಷದಿಂದ ಕರ್ಪೂರವನ್ನು ತಯಾರಿಸುತ್ತಾರೆ.ಆದರೆ,ಇದನ್ನು ಹೆಚ್ಚಾಗಿ ಹಿಂದೂಗಳು ಪೂಜಾ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.ಪೂಜಾ ಸಮಯದಲ್ಲಿ ಕರ್ಪೂರವನ್ನು ಆರತಿಯ ರೂಪದಲ್ಲಿ ದೇವರಿಗೆ ಬೆಳಗುವ ಸಮಯದಲ್ಲಿ ಬರುವ ಹೊಗೆ ದೇಹದ ಆರೋಗ್ಯದ ಮೇಲೆ ಸತ್ಪರಿಣಾಮಗಳನ್ನು ಉಂಟುಮಾಡುತ್ತದೆ.

ಕಡಿಮೆ ಬಂಡವಾಳದಲ್ಲಿ ಲಾಭದಾಯಕ ಉದ್ಯಮ ಆರಂಭಿಸುವುದು ಉತ್ತಮ ರೀತಿಯ ಬೆಳವಣಿಗೆ ಆಗಿರುತ್ತದೆ. ಇದರಲ್ಲಿ ಕರ್ಪೂರ ತಯಾರಿಕೆ ಉದ್ಯಮ ಒಂದಾಗಿದೆ, ಹೇಗೆ ಕರ್ಪೂರ ತಯಾರಿಸುವುದು ಎಂಬುದನ್ನು ತಿಳಿಯೋಣ. ಸಾಮಾನ್ಯವಾಗಿ ೫-೬ ವರ್ಷಗಳ ವರೆಗೆ ಬೆಳೆದ ಕರ್ಪುರದ ಮರದ ಎಲೆ ಹಾಗೂ ಬೊಡ್ಡೆಗಳನ್ನು ಕಡಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದರ ಹುಡಿಯನ್ನು ತಯಾರಿಸುತ್ತಾರೆ.

ಹುಡಿರಾಶಿಯನ್ನು ದೊಡ್ಡ ಕೊಳಾಯಿಯಲ್ಲಿ ಹಾಕಿ ಕುಲುಮೆಯಲ್ಲಿ ಕಾಯಿಸುತ್ತಾರೆ. ಆಗ ಈ ಹುಡಿ ಬೇಗನೆ ಬಾಷ್ಪೀಭವನ ಹೊಂದುವಂಥ ವಸ್ತುವಾಗುತ್ತದೆ. ತರುವಾಯ ಇದನ್ನು ಹಬೆಯೊಂದಿಗೆ ಆಸವೀಕರಿಸುವುರು. ಹೀಗೆ ದೊರೆತ ದ್ರಾವಣಕ್ಕೆ ತಂಪು ತಗುಲಿಸಲು ಇಚ್ಛಿತ ಕರ್ಪುರ ಬಣ್ಣರಹಿತ ಸ್ಫಟಿಕದ ರೂಪದಲ್ಲಿ ದೊರೆಯುತ್ತದೆ. ಸ್ಫಟಿಕ ಹಾಗೂ ದ್ರಾವಣದ ಈ ಮಿಶ್ರಣವನ್ನು ಸೋಸುವುದರಿಂದ ಸ್ಫಟಿಕಗಳು ಬೇರ್ಪಟ್ಟು ಎಣ್ಣೆಯಂಥ ಪದಾರ್ಥ ಉಳಿಯುತ್ತದೆ.

ಇದರಲ್ಲಿ ಅಶುದ್ಧ ಕರ್ಪುರ ಹೆಚ್ಚಿನ ಮೊತ್ತದಲ್ಲಿ ಇರುವುದು. ಈ ಎಣ್ಣೆಯಂಥ ಪದಾರ್ಥವನ್ನು ಆಂಶಿಕ ಆಸವೀಕರಣಕ್ಕೊಳಪಡಿಸಿ ೧೮೦ಲಿ-೧೯೦ಲಿ ಸೆಂ. ಉಷ್ಣತಾಮಾನದ ವರೆಗೆ ದೊರೆಯುವ ದ್ರಾವಣವನ್ನು ತಂಪಾಗಿಸುವುದರಿಂದ ಕರ್ಪುರದ ಸ್ಫಟಿಕಗಳು ಪುನಃ ರೂಪುಗೊಳ್ಳುತ್ತವೆ. 

ಮಾರುಕಟ್ಟೆಯಲ್ಲಿ ಹೊಗೆ ರಹಿತ ಕರ್ಪೂರದ ಪುಡಿಯನ್ನು ಖರೀದಿಸಿ ಕರ್ಪೂರ ತಯಾರಿಸುವ ಯಂತ್ರಕ್ಕೆ ಹದವಾಗಿ ಹಾಕಿ ನಮಗೆ ಬೇಕಾದ ಆಕಾರದ ಡೈಸ್ಗಳನ್ನು ಜೋಡಿಸಿ ಕರ್ಪೂರ ಮಾಡಬಹುದು . ಕರ್ಪೂರವನ್ನು ಉರಿಸಿದರೆ ಹೇಗೆ ಸಂಪೂರ್ಣವಾಗಿ ಉರಿದು ಹೋಗುತ್ತದೆಯೋ ಅದೇ ರೀತಿ ಅದರ ಎದುರಿಗೆ ನಿಂತಿರುವವರ ಅಹಂಕಾರವೂ ಉರಿದು ಹೋಗಿ ಪರಿಶುದ್ಧರಾಗುತ್ತಾರಂತೆ. ಕರ್ಪೂರವನ್ನು ಉರಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ಆ ಶಕ್ತಿ ನಮ್ಮಲ್ಲಿ ಪ್ರವೇಶಿಸಿ ನಮಗೆ ಒಳ್ಳೆಯದನ್ನುಂಟುಮಾಡುತ್ತದಂತೆ

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *