ಶರೀರದಲ್ಲಿ ರಕ್ತ ವೃದ್ಧಿಸಿಕೊಳ್ಳಲು ಮಾಡಿ ಈ ಸುಲಭ ಮನೆಮದ್ದು

0 2

ರಕ್ತ ಎಂದರೆ ನಮ್ಮ ಕಣ್ಣಿಗೆ ಕಟ್ಟುವುದು ಕೆಂಪು ಬಣ್ಣ. ಈ ಬಣ್ಣಕ್ಕೆ ಕಾರಣ ರಕ್ತದಲ್ಲಿರುವ ಹೀಮೋಗ್ಲೋಬಿನ್ ಎಂಬ ಕಬ್ಬಿಣ ಆಧಾರಿತ ಪ್ರೋಟೀನು. ರಕ್ತದ ಮುಖ್ಯ ಕೆಲಸವೆಂದರೆ ಶ್ವಾಸಕೋಶಗಳಿಂದ ಹೀರಲ್ಪಟ್ಟ ಆಮ್ಲಜನಕವನ್ನು ಕೊಂಡು ಹೃದಯದ ಒತ್ತಡದಿಂದ ನರಮಂಡಲದ ಮೂಲಕ ದೇಹದ ಪ್ರತಿ ಜೀವಕೋಶದ ಬಳಿ ಸಾಗಿ ಆಮ್ಲಜನಕ ನೀಡಿ ಅಲ್ಲಿಂದ ಇಂಗಾಲದ ಡೈ ಆಕ್ಸೈಡ್ ಅನ್ನು ಹಿಂದೆ ತಂದು ಶ್ವಾಸಕೋಶಕ್ಕೆ ಮರಳಿಸಿ ದೇಹದಿಂದ ಹೊರಹೋಗುವಂತೆ ಮಾಡುವುದು.

ಆದ್ದರಿಂದ ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ಆರೋಗ್ಯಕರ ಮಟ್ಟದಲ್ಲಿರುವುದು ಅತ್ಯಂತ ಅವಶ್ಯವಾಗಿದೆ.ಈ ರೀತಿಯ ಹೀಮೋಗ್ಲೋಬಿನ್ ಪ್ರಮಾಣ ಕಡಿಮೆ ಆದ ಸಂದರ್ಭದಲ್ಲಿ ದೇಹದಲ್ಲಿ ರಕ್ತ ಹೀನತೆ ಕಂಡು ಬರುತ್ತದೆ. ರಕ್ತ ಹೀನತೆ ತಿನ್ನು ದೂರ ಮಾಡಲು ಇರುವಂತಹ ಮಾರ್ಗಗಳನ್ನು ಈ ಲೇಖನದಲ್ಲಿ ನೋಡೋಣ.

 ರಕ್ತಹೀನತೆ ಸಮಸ್ಯೆ ಬೀಟ್ರೂಟ್ ನಿಂದ ದೂರ ಮಾಡಬಹುದಾಗಿದೆ. ಈ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿದಾಗ ಅವರು ಕಬ್ಬಿಣಾಂಶ ಯುಕ್ತ ಮಾತ್ರೆಗಳನ್ನು ಕೊಡುತ್ತಾರೆ, ಆದರೆ ಅವೆಲ್ಲವೂ ತಾತ್ಕಾಲಿಕ ಪರಿಹಾರ ಮಾರ್ಗವಾಗಿರುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದರೆ ಹೀಗಿವೆ. ರಕ್ತಹೀನತೆಗೆ ಹಸಿರು ಸೊಪ್ಪುಗಳು ಹೇಳಿ ಮಾಡಿಸಿದ ಆಹಾರವಾಗಿದೆ. ಅದರಲ್ಲೂ ಬಸಲೆ ಸೊಪ್ಪು ಅತ್ಯಂತ ಸೂಕ್ತವಾದ ಆಹಾರ.

ಇನ್ನುಳಿದಂತೆ ಪಾಲಕ್, ಹರಿವೆ ಸೊಪ್ಪು, ಬೀನ್ಸ್, ಕೆಂಪು ಮಾಂಸ, ಒಣದ್ರಾಕ್ಷಿ, ಒಣ ಪೀಚ್ ಹಣ್ಣು, ಮೊಟ್ಟೆಯ ಹಳದಿ ಭಾಗ ಇತ್ಯಾದಿಗಳು ರಕ್ತಹೀನತೆಯನ್ನು ಸಾಕಷ್ಟು ಕಡಿಮೆಗೊಳಿಸುತ್ತವೆ. ವಿಟಮಿನ್ ಬಿ೯ ಅಥವ ಫೋಲಿಕ್ ಆಮ್ಲ ಕೆಂಪುರಕ್ತಕಣಗಳನ್ನು ಉತ್ಪಾದಿಸಲು ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಈ ಆಮ್ಲ ಹೆಚ್ಚಿರುವ ಆಹಾರಗಳೆಂದರೆ ಬಸಲೆ ಸೊಪ್ಪು, ಪಾಲಕ್ ಸೊಪ್ಪು, ಕೇಲ್ ಎಲೆಗಳು, ಒಣಫಲಗಳು, ಬಟಾಣಿಗಳು ಮತ್ತು ವಿವಿಧ ದ್ವಿದಳಧಾನ್ಯಗಳು.

ರಕ್ತ ಹೀನತೆಯನ್ನು ತಿಳಿದುಕೊಳ್ಳುವುದು ಹೇಗೆಂದರೆ ಪ್ರಯೋಗಾಲಯಗಳಲ್ಲಿ ರಕ್ತ ಪರೀಕ್ಷೆ ಮಾಡಿದಾಗ ಕಂಡುಬರುತ್ತದೆ. ಸಾಮಾನ್ಯವಾಗಿ ಹೆಚ್ಚಾಗಿ ರಕ್ತ ಹೀನತೆ ಕಂಡುಬರುವುದು ಮಹಿಳೆಯರಲ್ಲಿ, ಮುಟ್ಟಾದ ಸಮಯದಲ್ಲಿ ಅಧಿಕವಾಗಿ ರಕ್ತ ಹೋಗುವುದು, ಪ್ರಸವದ ನಂತರ ರಕ್ತ ಹೀನತೆ ಹಾಗೂ ಅನೇಕ ಕಾಯಿಲೆಗಳಿಂದ, ಶಸ್ತ್ರ ಚಿಕಿತ್ಸೆಗಳಿಂದ, ಜಂತು ಹುಳಗಳಿಂದ ರಕ್ತ ಹೀನತೆ ಕಂಡುಬರುವುದು ಸಹಜವಾಗಿದೆ. ಇದರಿಂದ ತಲೆ ಸುತ್ತು ಬರುವುದು, ಕಣ್ಣಿನ ಸುತ್ತ ಕಪ್ಪು ವರ್ತುಲ ಬರುವುದು, ಬೆರಳುಗಳ ಗಿಣ್ಣುಗಳು ಕಪ್ಪಾಗುವುದು, ಇದರ ಗುಣ ಲಕ್ಷಣಗಳು.

Leave A Reply

Your email address will not be published.