Karnataka Yuva Nidhi Scheme 2023: ರಾಜ್ಯದ ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್, ಯುವನಿಧಿ ಯೋಜನೆಯಡಿ ಸಿಗಲಿದೆ ತಿಂಗಳಿಗೆ 3 ಸಾವಿರರಾಜ್ಯದಲ್ಲಿ ನೂತನ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಯುವನಿಧಿ ಯೋಜನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ರಾಜ್ಯದಲ್ಲಿನ ಡಿಪ್ಲೋಮಾ ಪದವೀಧರರಿಗೆ 1,500 ಹಾಗೂ ಇತರ ಪದವೀಧರರಿಗೆ 3000 ರೂ ಗಳನ್ನ ಪ್ರತಿ ತಿಂಗಳು ನೀಡುವುದಾಗಿ ಹೊಸ ಸರ್ಕಾರ ಘೋಷಣೆ ಮಾಡಿದ್ದು ಈ ಘೋಷಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.

ಕರ್ನಾಟಕದ ಯುವನಿಧಿ ಯೋಜನೆ ರಾಜ್ಯದ ಯುವಜನರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಯೋಜನೆಯಾಗಿದೆ ಪದವಿಯನ್ನು ಮುಗಿಸಿ ಯಾವುದೇ ಕೆಲಸ ಇಲ್ಲದ ನಿರುದ್ಯೋಗಿಗಳಿಗೆ ಈ ಯೋಜನೆಯು ಸಹಾಯಕವಾಗಲಿದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಗೆದ್ದ ತಕ್ಷಣವೇ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು ಆ ಮೂಲಕ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ ಮತ್ತು ಇದರ ಪ್ರಯೋಜನಗಳನ್ನ ನಿರುದ್ಯೋಗಿಗಳು ಹೇಗೆ ಪಡೆಯಬೇಕು ಎಂಬ ಮಾಹಿತಿಯ ಬಗ್ಗೆಯೂ ಸ್ಪಷ್ಟನೆ ನೀಡಿತ್ತು. ರಾಜ್ಯದ ಯುವ ಜನತೆಗೆ ಆರ್ಥಿಕ ಭದ್ರತೆಯನ್ನು ನೀಡಲು ಈ ಯೋಜನೆಯನ್ನು ಆರಂಭ ಮಾಡಿದ್ದು ಎಲ್ಲಾ ವಿದ್ಯಾವಂತ ನಿರುದ್ಯೋಗಿ ಯುವಕರು ತಮ್ಮ ಕುಟುಂಬವನ್ನು ನಿಭಾಯಿಸಿಕೊಂಡು ಹೋಗಲು ಸಹಾಯಧನವಾಗಿ ಇದು ದೊರಕುತ್ತಿದೆ ಎಂದು ಹೇಳಲಾಗಿದೆ.

ಕರ್ನಾಟಕ ಯುವ ನಿಧಿ ಯೋಜನೆಯ ಪ್ರಯೋಜನಗಳನ್ನ ನೋಡುವುದಾದರೆ ಈ ಕಾರ್ಯಕ್ರಮದ ಮೂಲಕ ರಾಜ್ಯದ ಪದವೀಧರರು ಮತ್ತು ಡಿಪ್ಲೋಮೋ ಪಡೆದವರು ಪ್ರತಿ ತಿಂಗಳು ನಿರುದ್ಯೋಗ ಬಗ್ಗೆಯನ್ನು ಪಡೆಯುತ್ತಾರೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ರೂ 3000 ಮತ್ತು ಡಿಪ್ಲೋಮಾ ಪಡೆದವರಿಗೆ ತಿಂಗಳಿಗೆ 1500 ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಫಲಾನುಭವಿಗಳು ಈ ಹಣಕಾಸಿನ ನೆರವನ್ನ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು. ರಾಜ್ಯದ ಯುವಕರಿಗೆ ಉದ್ಯೋಗ ಸಿಗುವವರೆಗೆ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ರಾಜ್ಯದ ಯುವಜನತೆಗೆ ಈ ಯೋಜನೆಯ ಲಾಭ ದೊರಕಿಸುವ ಮೂಲಕ ಅವರು ಆರ್ಥಿಕ ಸ್ಥಿರತೆಯನ್ನು ಪಡೆಯುತ್ತಾರೆ.

ಈ ಯೋಜನೆಯ ಲಾಭವನ್ನು ಪಡೆಯಲು ಕೆಲವೊಂದು ಅರ್ಹತಮಾನದಂಡಗಳನ್ನ ಯುವಕರು ಹೊಂದಿರಬೇಕಾಗುತ್ತದೆ ಅದು ಏನೆಂದರೆ ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು ಯಾವುದೇ ವಿದ್ಯಾಲಯಗಳಲ್ಲಿ ಪದವಿ ಅಥವಾ ಡಿಪ್ಲೋಮಾ ಪಾಸ್ ಆಗಿರಬೇಕು ಇದರ ಜೊತೆಗೆ ಅಭ್ಯರ್ಥಿಯ ಬ್ಯಾಂಕ್ ಖಾತೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಇವಿಷ್ಟು ಕರ್ನಾಟಕ ಸರ್ಕಾರ ರಾಜ್ಯದ ಯುವ ಅಭ್ಯರ್ಥಿಗಳಿಗೆ ವಿಶೇಷವಾಗಿ ಪದವಿ ಹೊಂದಿರುವ ನಿರುದ್ಯೋಗಿ ಯುವಕರಿಗೆ ನೀಡಿರುವ ಹೊಸ ಯುವನಿಧಿ ಯೋಜನೆ ವಿವರಣೆಯಾಗಿದ್ದು ಈ ಯೋಜನೆಯು ಆರ್ಥಿಕ ಸಂಕಷ್ಟ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ರೀತಿಯಲ್ಲಿ ಸಹಕಾರಿಯಾಗಲಿದೆ. ಇದನ್ನೂ ಓದಿ: Rs 1000 ರೂಪಾಯಿಯ ಹಳೆ ನೋಟ್ ಮತ್ತೆ ಚಲಾವಣೆಗೆ ಬರುತ್ತಾ? RBI ಹೇಳಿದ್ದೇನು ನೋಡಿ

By

Leave a Reply

Your email address will not be published. Required fields are marked *