Ultimate magazine theme for WordPress.

Labor Card Holders: ಇನ್ನು ಮುಂದೆ ಕಾರ್ಮಿಕ ಕಾರ್ಡ್ ಇದ್ದವರು ಉಚಿತ ಪ್ರಯಾಣ ಮಾಡಲು ಸಾಧ್ಯವಿಲ್ಲ ಯಾಕೆಂದರೆ..

0 259

Labor Card Holders: ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೋಸ್ಕರ ಕಾರ್ಮಿಕರ ಕಾರ್ಡ್ ಯೋಜನೆ ಜಾರಿಗೆ ತಂದಿದ್ದು ಈ ಯೋಜನೆಗಲ್ಲಿ ಒಂದಾದ, ಕಾರ್ಮಿಕರಿಗೆ ಬಸ್ಗಳಲ್ಲಿ ಉಚಿತ ಪಾಸ್ ನೀಡುವ ಯೋಜನೆಯು ಇದೀಗ ನಿಷ್ಕ್ರಿಯಗೊಂಡಿದೆ. ಕಳೆದ ವರ್ಷ ಸುಮಾರು ಒಂದು ಲಕ್ಷ ಕಾರ್ಮಿಕರಿಗೆ ಈ ಯೋಜನೆ ಅಡಿ ಬಸ್ ಪಾಸ್ ವಿತರಣೆಯಾಗಿತ್ತು.

ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ನೋಂದಣಿಯನ್ನು ಮಾಡಿಕೊಂಡಿರುವಂತಹ ನಿರ್ಮಾಣ ಕಾರ್ಮಿಕ ಫಲಾನುಭವಿಗಳು ಈ ಪಾಸನ್ನ ಬಳಸಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 45 ಕಿ.ಮೀ ವರೆಗೆ ಉಚಿತ ಪ್ರಯಾಣವನ್ನು ಮಾಡುತ್ತಿದ್ದರು ಮೊದಮೊದಲು ಆರು ತಿಂಗಳವರೆಗೆ ಈ ವ್ಯವಸ್ಥೆಯನ್ನು ಮಾಡಿ ನಂತರ ಇನ್ನಷ್ಟು ಅವರಿಗೆ ಈ ಯೋಜನೆಯನ್ನು ಕರ್ನಾಟಕ ಸರ್ಕಾರ ವಿಸ್ತರಿಸಿತು ಆದರೆ ಇದೀಗ ಸರ್ಕಾರದ ಈ ಯೋಜನೆ ನಿಂತು ಹೋಗಿದೆ ಕಾರ್ಮಿಕರ ಕಾರ್ಡ್ ಇದ್ದವರಿಗೆ ಉಚಿತವಾಗಿ ಪ್ರಯಾಣಿಸಲು ಆಗುತ್ತಿಲ್ಲ.

ಕಟ್ಟಡ ಕಾರ್ಮಿಕರಿಗೆ ಬರುವ ದಿನಗೂಲಿಯೂ ತಮ್ಮ ಮನೆ ನಿಭಾಯಿಸಲು ಸಾಲುವುದಿಲ್ಲ ಅದರಲ್ಲಿಯೂ ತಮ್ಮ ಮನೆಯಿಂದ ತಾವು ಕೆಲಸ ಮಾಡುವ ಜಾಗಕ್ಕೆ ತಲುಪಲು ಬಸ್ ದರವನ್ನ ಕೊಡಲು ಕೂಡ ಅವರಿಗೆ ಹೊರೆ ಎನಿಸಿಬಿಡುತ್ತಿತ್ತು ಈ ಹೊರೆಯನ್ನ ತಪ್ಪಿಸಲು ಸರ್ಕಾರ ಈ ರೀತಿಯ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವುದರ ಮೂಲಕ ಅವರ ಹೊರೆಯನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತ್ತು ಹಾಗಾಗಿ ಸಾಕಷ್ಟು ಜನ ಬಡ ಕಾರ್ಮಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದರು.

ಮೊದಮೊದಲು ಈ ವ್ಯವಸ್ಥೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು ನಂತರ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾರ್ಮಿಕರ ನೆರವಿಗೆ ಈ ಯೋಜನೆ ಸಹಾಯಕವಾಯಿತು ಆದರೆ ಇದೀಗ ಮಾರ್ಚ್ 31ಕ್ಕೆ ಸಮಯ ಮೀರಿ ನವೀಕರಿಸಲು ಹೋದವರಿಗೆ ಶಾಕ್ ಉಂಟಾಗಿದೆ ಏಕೆಂದರೆ ಸರ್ಕಾರವು ಬಸ್ ಪಾಸ್ ನವೀಕರಣ ಮಾಡುವುದು ಹಾಗೂ ಹೊಸ ಬಸ್ ಪಾಸ್ಅನ್ನ ನೀಡುವುದನ್ನ ಸದ್ಯಕ್ಕೆ ನಿಷ್ಕ್ರಿಯಗೊಳಿಸಿದೆ

ಇದರಿಂದ ಕಟ್ಟಡ ಕಾರ್ಮಿಕರಲ್ಲಿ ಆಕ್ರೋಶ ಉಂಟಾಗಿದ್ದು ಮತ್ತೆ ಈ ವಿಷಯದ ಕುರಿತು ಸರ್ಕಾರದ ಮೊರೆ ಹೋಗಿದ್ದಾರೆ ಇದೇ ವಿಧಾನಸಭಾ ಚುನಾವಣೆಯಲ್ಲಿ ಬದಲಾಗಿರುವ ಕರ್ನಾಟಕದ ಮುಖ್ಯಮಂತ್ರಿಗಳು ಈ ಕುರಿತಾಗಿ ಯಾವುದಾದರೂ ಭರವತೆ ನೀಡಬಹುದೇನೋ ಎಂಬ ನಂಬಿಕೆಯಲ್ಲಿ ಕಾರ್ಮಿಕರು ಇದ್ದಾರೆ.

ಈ ಕುರಿತಂತೆ ಸರ್ಕಾರ ಯಾವ ರೀತಿಯಲ್ಲಿ ತೀರ್ಮಾನವನ್ನು ನೀರು ತೆಗೆದುಕೊಳ್ಳಲಿದೆ ಎಂಬ ಬಗ್ಗೆ ಎಲ್ಲರಲ್ಲಿ ಹುಟ್ಟಿತು ಹಲವು ಉಂಟಾಗಿದೆ ಈಗಾಗಲೇ ಕಾಂಗ್ರೆಸ್ ಸರ್ಕಾರ ತಾನು ನೀಡಿರುವಂತಹ ಐದು ಭರವಸೆಯನ್ನ ಜಾರಿಗೆ ತರುವಲ್ಲಿ ಹೆಚ್ಚಿನ ಗಮನಹರಿಸುತ್ತಿದ್ದು ಹಿಂದಿನ ಎಲ್ಲಾ ಯೋಜನೆಗಳಿಗೆ ತಿಲಾಂಜಲಿ ಹಾಡಲಿದೆಯಾ ಅಥವಾ ಆ ಯೋಜನೆಗಳನ್ನು ಮುನ್ನಡೆಸುವ ಮನಸ್ಸನ್ನು ಮಾಡುತ್ತದೆಯಾ ಎಂಬುದನ್ನ ಕಾದು ನೋಡಬೇಕಾಗಿದೆ. ಇದನ್ನೂ ಓದಿ: Free Bus Pass for Women: ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್, ಇವತ್ತಿನಿಂದಲೇ ಜಾರಿ ಟಿಕೆಟ್ ಕೊಳ್ಳಬೇಡಿ ಆದರೆ ಷರತ್ತು ಅನ್ವಯ

Leave A Reply

Your email address will not be published.