ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದೀರಾ? ರೇಷನ್ ಕಾರ್ಡ್ ಪಡೆಯೋದು ಹೇಗೆ ಸಂಪೂರ್ಣ ಮಾಹಿತಿ

0 11

ನಾವಿಂದು ನಿಮಗೆ ತಿಳಿಸುತ್ತಿರುವ ಮಾಹಿತಿ ಯಾವುದು ಎಂದರೆ ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಬಂದಿದ್ದು ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಅದೇನೆಂದರೆ ಈಗ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವಂತಹ ಪ್ರಕ್ರಿಯೆ ಪ್ರಾರಂಭವಾಗಿದೆ ಈಗಾಗಲೇ ಬಹಳಷ್ಟು ಜನರು ಪಡಿತರ ಚೀಟಿಯನ್ನು ಪಡೆಯುವುದಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು ಆದರೆ ಅವರಿಗೆ ಪಡಿತರ ಚೀಟಿ ಸಿಕ್ಕಿರಲಿಲ್ಲ. ಆ ಸಂಬಂಧವಾಗಿ ಆಹಾರ ಇಲಾಖೆ ಯಾರು ಯಾರು ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು ಅದರಲ್ಲಿ ಯಾವ ಅರ್ಜಿಗಳು ಅನುಮೋದನೆಗೆ ಒಳಗಾಗಿದ್ದವು ಅಂತವರಿಗೆ ಅವರ ಪಡಿತರ ಚೀಟಿಯನ್ನು ಒಪ್ಪಿಸುವ ಅಂತಹ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಅಂದರೆ ಎರಡು ವರ್ಷ ಮೂರು ವರ್ಷದ ಹಿಂದೆ ಯಾರುಯಾರು ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು ಅಂಥವರು ಈಗ ತಮ್ಮ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಯಾರು ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು ಅವರ ಅರ್ಜಿ ಅನುಮೋದನೆ ಆಗಿದೆಯೇ ಇಲ್ಲವೇ ಎಂಬುವುದನ್ನು ಯಾವ ರೀತಿಯಾಗಿ ಪರಿಶೀಲನೆ ಮಾಡಬಹುದು ಮತ್ತು ಪಡಿತರ ಚೀಟಿಯನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಿರುವವರು ಪಡಿತರ ಚೀಟಿಗೆ ಸಂಬಂಧಪಟ್ಟ ಆಫೀಸಿಯಲ್ ವೆಬ್ಸೈಟನ್ನು ತೆರೆಯಬೇಕು. ಮೊದಲಿಗೆ ನೀವು ಸಲ್ಲಿಸಿರುವ ಅರ್ಜಿ ಅನುಮೋದನೆ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು.

ನೀವು ಅಧಿಕೃತ ವೆಬ್ಸೈಟ್ ಅನ್ನು ತೆರೆದಾಗ ಅಲ್ಲಿ ನಿಮ್ಮ ಮುಂದೆ ಒಂದು ಪುಟ ಕಾಣಿಸಿಕೊಳ್ಳುತ್ತದೆ ಅಲ್ಲಿ ಇ ಸೇವೆಗಳು ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಎಡಭಾಗದಲ್ಲಿ ಒಂದು ಪಟ್ಟಿ ಕಾಣಿಸುತ್ತದೆ ಅದರಲ್ಲಿ ಪಡಿತರಚೀಟಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಹಾಗೆ ಕೆಳಗೆ ಸ್ಕ್ರೋಲ್ ಮಾಡಿದಾಗ ವಿತರಣೆ ಆಗದ ಹೊಸ ಪಡಿತರಚೀಟಿ ಎಂಬುದು ಕಂಡುಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ನಿಮ್ಮ ಅರ್ಜಿ ಅನುಮೋದನೆ ಆಗಿದೆಯೇ ಇಲ್ಲವೇ ಎಂಬುದನ್ನು ನೋಡಬಹುದು ಅಲ್ಲಿ ಮೊದಲು ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರ ನಿಮ್ಮ ತಾಲೂಕು ಯಾವುದು ಎನ್ನುವುದನ್ನು ಆಯ್ಕೆಮಾಡಿಕೊಳ್ಳಬೇಕು ನಂತರ ಮುಂದೆ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮುಂದೆ ಯಾರು ಅರ್ಜಿಯನ್ನು ಸಲ್ಲಿಸಿದ್ದಾರೆ ಯಾರ ಪಡಿತರ ಚೀಟಿ ತಯಾರಾಗಿದೆ ಇದರ ಪಟ್ಟಿ ಕಾಣಿಸುತ್ತದೆ.

ನಿಮ್ಮ ಪಡಿತರ ಚೀಟಿಯ ಅರ್ಜಿಯ ಅಕ್ನಾಲೆಜ್ ಮೆಂಟ್ ಸಂಖ್ಯೆಯನ್ನು ಹುಡುಕಿ ಅದರಲ್ಲಿ ನಿಮ್ಮ ಪಡಿತರ ಚೀಟಿಯ ಅರ್ಜಿ ಸಂಖ್ಯೆ ಇದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಅದರ ಪ್ರಿಂಟ್ ತೆಗೆದುಕೊಂಡು ನೀವು ನಿಮ್ಮ ತಾಲೂಕ ಆಫೀಸಿಗೆ ಭೇಟಿ ನೀಡಿ ಅಲ್ಲಿ ನಾವು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ನಮ್ಮ ಪಡಿತರ ಚೀಟಿ ತಯಾರಾಗಿದೆ ಅದರ ಪ್ರತಿಯನ್ನು ತೆಗೆದುಕೊಡುವಂತೆ ಕೇಳಬೇಕು. ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.

ಈಗಾಗಲೇ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ನೀವು ಕೂಡ ಅರ್ಜಿಯನ್ನು ಸಲ್ಲಿಸಿದ್ದರೆ ಕೂಡಲೇ ನಿಮ್ಮ ಪಡಿತರ ಚೀಟಿ ತಯಾರಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಅದರ ಪ್ರತಿಯನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿರಿ.

Leave A Reply

Your email address will not be published.