ರಿಷಬ್ ಶೆಟ್ಟಿ ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕನ್ನಡ ಕರಾವಳಿ ಮಣ್ಣಿನ ಸಾಂಸ್ಕೃತಿಕ ಹಾಗೂ ಆಚರಣೆಗಳ ಸೊಗಡಿನ ಹಿನ್ನೆಲೆಯುಳ್ಳ ಕಾಂತಾರ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ದೇಶದಾದ್ಯಂತ ಹಾಗೂ ವಿಶ್ವಾದ್ಯಂತ ಸಿನಿಮಾ ಪ್ರೇಕ್ಷಕರನ್ನು ಸೆಳೆದಿದ್ದು ದಾಖಲೆಯ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎನ್ನುವುದನ್ನು ನಾವೆಲ್ಲರೂ ನಿಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ.
ಎಷ್ಟೇ ಜನಪ್ರಿಯವಾಗಿದ್ದರೂ ಕೂಡ ಸಿನಿಮಾ ದಿನ ಕಳೆದಂತೆ ಕಲೆಕ್ಷನ್ ಕಡಿಮೆಯಾಗುತ್ತದೆ ಆದರೆ ಕಾಂತಾರ ವಿಚಾರದಲ್ಲಿ ಮಾತ್ರ ಸಂಪೂರ್ಣ ತದ್ವಿರುದ್ಧವಾಗಿ ನಡೆದಿದೆ ಎಂದು ಹೇಳಬಹುದಾಗಿದೆ. ಸಿನಿಮಾ ಬಿಡುಗಡೆಯಾಗಿ 50 ದಿನಗಳನ್ನು 200 ಕ್ಕೂ ಅಧಿಕ ಸೆಂಟರ್ ಗಳಲ್ಲಿ ಆಚರಿಸುತ್ತಿದ್ದು ಕಲೆಕ್ಷನ್ ವಿಚಾರದಲ್ಲಿ ಕೂಡ ದೊಡ್ಡ ಮಟ್ಟದ ದಾಖಲೆಯನ್ನು ನಿರ್ಮಿಸಿದೆ ಎಂಬುದಾಗಿ ಹೇಳಲಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಸಿನಿಮಾಗಳಲ್ಲಿ ಕಾಂತಾರ ಸಿನಿಮಾ ವನ್ನೇ ಅತ್ಯಂತ ಹೆಚ್ಚು ಜನರು ನೋಡಿದ್ದಾರೆ ಎಂಬುದಾಗಿ ಇತ್ತೀಚಿಗಷ್ಟೇ ಅಧಿಕೃತವಾಗಿ ವರದಿಗಳು ಹೊರಬಂದಿದ್ದವು.
ಕೆಜಿಎಫ್ ಚಾಪ್ಟರ್ 2 ನಂತಹ ಚಿತ್ರವನ್ನೇ ಹಿಂದಕ್ಕೆ ಜನರು ಕಾಂತಾರ ಸಿನಿಮಾಗೆ ತಮ್ಮ ಮೊದಲ ಆದ್ಯತೆಯನ್ನು ನೀಡಿದ್ದಾರೆ ಎಂದರೆ ನಿಜಕ್ಕೂ ಕೂಡ ಕಾಂತಾರ ಸಿನಿಮಾದ ಮಹಿಮೆಯನ್ನು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಲೇ ಬೇಕಾಗಿದೆ. ಈಗಾಗಲೇ ಕಾಂತಾರ ಸಿನಿಮಾ ಭರ್ಜರಿ 400 ಕೋಟಿ ಕಲೆಕ್ಷನ್ ಅನ್ನು ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಮಾಡಿದೆ ಎಂಬುದಾಗಿ ಹೊಸ ದಾಖಲೆ ನಿರ್ಮಾಣವಾಗಿದೆ.
ಕೇವಲ 16 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿ ಬಂದಂತಹ ಈ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವ್ಯಾಪಕವಾಗಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂಬುದಾಗಿ ಯಾರು ಕೂಡ ಭಾವಿಸಿರಲು ಸಾಧ್ಯವೇ ಇಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.