Ultimate magazine theme for WordPress.

ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಮೂರು ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ, ಇಲ್ಲಿದೆ ಫುಲ್ ಡಿಟೇಲ್ಸ್

0 1

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮ ಕರ್ನಾಟಕದ ಪ್ರೇಕ್ಷಣೀಯ ವನ್ಯ ಸಂಪತ್ತನ್ನು ತಿರುಗಾಡಿ ನಿರ್ದೇಶಕ ಅಮೋಘ ವರ್ಷ ಅವರ ಜೊತೆಗೆ ಕ್ಯಾಮರ ಕಣ್ಣಿನಲ್ಲಿ ತೆರೆ ಹಿಡಿದ ರಮಣೀಯ ದೃಶ್ಯಗಳೆ ಗಂಧದಗುಡಿ ಸಿನಿಮಾ ಆಗಿದೆ. ಸಾಮಾನ್ಯವಾಗಿ ಒಬ್ಬ ನಟ ಕಮರ್ಷಿಯಲ್ ಸಿನಿಮಾ ಮಾಡಿ ಹಣ ಗಳಿಸುವುದಕ್ಕೆ ನೋಡುತ್ತಾನೆ. ತಮ್ಮ ವೃತ್ತಿಯ ಉತ್ತುಂಗದ ಸಮಯದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂತಹ ಪ್ರಯೋಗಾತ್ಮಕ ಕೆಲಸವನ್ನು ಮಾಡಿರುವುದು ನಿಜಕ್ಕೂ ಕೂಡ ಪ್ರಶಂಸನೀಯ.

ನಿಜಕ್ಕೂ ಕೂಡ ಇಂತಹ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟನಿಂದ ಬರುತ್ತದೆ ಎಂಬುದನ್ನು ನಂಬಲು ಕೂಡ ಸಾಧ್ಯವಿಲ್ಲ. ನಿಜಕ್ಕೂ ಇಂತಹ ಸಿನಿಮಾಗಳನ್ನು ಮಾಡಲು ಪ್ರತಿಯೊಬ್ಬರಿಗೂ ಕೂಡ ಧೈರ್ಯ ಬೇಕು. ಆದರೆ ನಮ್ಮೆಲ್ಲರ ನೆಚ್ಚಿನ ಅಪ್ಪು ಇಂತಹ ಧೈರ್ಯವನ್ನು ತೆಗೆದುಕೊಂಡು ಪ್ರಯೋಗವನ್ನು ಮಾಡಿ ಈಗ ಅವರು ಇಲ್ಲದಿದ್ದರೂ ಕೂಡ ಗೆದ್ದು ಬೀಗಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸಿರುವ ಅಥವಾ ಕಾಣಿಸಿಕೊಂಡಿರುವ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಎನ್ನುವುದು ಈಗಾಗಲೇ ರಾಜ್ಯಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಗಂಧದ ಗುಡಿ ಸಿನಿಮಾ ಮೂರು ದಿನಕ್ಕೆ ಗಳಿಸಿರುವ ಒಟ್ಟಾರೆ ಕಲೆಕ್ಷನ್ ಎಷ್ಟೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬಿಡುಗಡೆಯಾಗಿ ಮೂರು ದಿನಕ್ಕೆ ಗಂಧದ ಗುಡಿ ಸಿನಿಮಾ ಒಟ್ಟಾರೆಯಾಗಿ 25 ಕೋಟಿಗೂ ಹೆಚ್ಚಿನ ಗಳಿಕೆಯನ್ನು ಕಂಡಿದೆ ಎಂಬುದಾಗಿ ಬಾಕ್ಸ್ ಆಫೀಸ್ ರಿಪೋರ್ಟ್ ಮೂಲಗಳಿಂದ ತಿಳಿದುಬಂದಿದೆ. ಅಪ್ಪು ಅವರನ್ನು ಜನರು ಇಂದಿಗೂ ಕೂಡ ಇಷ್ಟಪಡುತ್ತಾರೆ ಎಂಬುದಕ್ಕೆ ಈ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಒಂದು ಜೀವಂತ ಸಾಕ್ಷಿ ಎಂದು ಹೇಳಬಹುದಾಗಿದೆ. ಗಂಧದಗುಡಿ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.