ಕಾಂತಾರ ಸಿನಿಮಾ ಇಂದು ಕನ್ನಡ ಚಿತ್ರರಂಗದ ಒಂದು ಭರವಸೆಯ ಬೆಳಕಾಗಿ ಇಂದು ಭಾರತೀಯ ಚಿತ್ರರಂಗದಲ್ಲಿ ಆಯಾಯ ಭಾಷೆಗಳಲ್ಲಿ ಬಿಡುಗಡೆಯಾಗಿ ದೊಡ್ಡಮಟ್ಟದ ಸಕ್ಸಸ್ ಅನ್ನು ಕಂಡಿದೆ ಅಂದರೆ ನಿಜಕ್ಕೂ ಕೂಡ ಪ್ರತಿಯೊಬ್ಬ ಕನ್ನಡಿಗನು ಕೂಡ ಕಾಲರ್ ಎತ್ತಿಕೊಂಡು ಹೆಮ್ಮೆಪಡಬೇಕಾದಂತಹ ಸಂಗತಿ ಎಂದರೆ ತಪ್ಪಾಗಲಾರದು. ಹೌದು ಮಿತ್ರರೇ ಕಾಂತಾರ ಈಗಾಗಲೇ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಬಜೆಟ್ ಗೆ ಹೋಲಿಸಿದರೆ ಅದರ ಲಾಭ ದಾಖಲೆ ಮಾಡುವಂತಹ ಲಾಭ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಕಾಂತಾರ ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಪಂಚ ಭಾಷೆಗಳಲ್ಲಿ ಬರೋಬ್ಬರಿ 300 ಕೋಟಿ ಅಧಿಕ ಕಲೆಕ್ಷನ್ ಅನ್ನು ಗಳಿಸಿದೆ ಎಂಬುದಾಗಿ ಅಧಿಕೃತ ಬಾಕ್ಸ್ ಆಫೀಸ್ ಮೂಲಗಳಿಂದ ತಿಳಿದು ಬಂದಿದೆ. 18 ಕೋಟಿಗಿಂತಲೂ ಕಡಿಮೆ ಬಜೆಟ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ನೂರು ಪಟ್ಟು ಹೆಚ್ಚಿನ ಲಾಭವನ್ನು ಗಳಿಸಿದೆ ಎಂದರೆ ಕನ್ನಡ ಚಿತ್ರರಂಗದ ಸಿನಿಮಾಗಳ ಕಂಟೆಂಟ್ ಯಾವ ಮಟ್ಟಿಗೆ ಬಲವಾಗಿದೆ ಎಂಬುದರ ಜೀವಂತ ಉದಾಹರಣೆಯಾಗಿದೆ ಎನ್ನಬಹುದು. ಹಲವಾರು ವಿಶೇಷಗಳಿಗೆ ಕಾಂತಾರ ಇಂದು ಪ್ರತ್ಯಕ್ಷ ದರ್ಶಿ ಯಾಗಿದೆ ಎನ್ನಬಹುದಾಗಿದೆ.

ಇನ್ನು ಕಾಂತಾರ ಎನ್ನುವ ಅದ್ಭುತ ಪ್ರಪಂಚವನ್ನು ಸೃಷ್ಟಿ ಮಾಡಿರುವ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಅವರ ದಯೆಯಿಂದಾಗಿ ಇಂದು ಕನ್ನಡ ಚಿತ್ರರಂಗದ ಕಾಂತಾರ ಸಿನಿಮಾದ ಚರ್ಚೆ ಪ್ರತಿಯೊಂದು ಪ್ರತಿಷ್ಠಿತ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನಾಶೈಲಿಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕೆಂಬ ಆಲೋಚನೆ ಕೂಡ ನಡೆಯುತ್ತಿದೆ. ಇದರ ನಡುವಲ್ಲಿಯೇ ಕಾಂತಾರ ಸಿನಿಮಾದಲ್ಲಿ ಯಾರೂ ಕೂಡ ಗುರುತಿಸಲಾಗದಂತಹ ಒಂದು ವಿಚಾರವನ್ನು ಅವರ ಪತ್ನಿ ಆಗಿರುವ ಪ್ರಗತಿಶೆಟ್ಟಿ ಅವರು ಬಹಿರಂಗಪಡಿಸಿದ್ದಾರೆ.

ಹೌದು ಮಿತ್ರರೇ ಕಾಂತಾರ ಸಿನಿಮಾದಲ್ಲಿ ಪ್ರಗತಿಶೆಟ್ಟಿ ಅವರು ಕೂಡ ರಾಣಿಯಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾದಲ್ಲಿ ಅವರ ಇಬ್ಬರು ಮಕ್ಕಳು ಕೂಡ ನಟಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ‌. ಹೌದು ಮಿತ್ರರೇ ಆರಂಭದಲ್ಲಿ ಕಾಣಿಸಿಕೊಳ್ಳುವ ರಾಜ ರಾಣಿ ಪಾತ್ರಗಳ ಮಕ್ಕಳ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರ ಮಗ ಮತ್ತು ಮಗಳು ಇಬ್ಬರು ಕೂಡ ನಟಿಸಿದ್ದಾರೆ ಎಂಬುದಾಗಿ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ಇದು ಹಲವಾರು ಜನರಿಗೆ ಗೊತ್ತಿಲ್ಲದೇ ಇರಬಹುದು ಎಂಬುದು ಕೂಡ ಮತ್ತೊಂದು ಕುತೂಹಲಕಾರಿ ವಿಚಾರ.

Leave a Reply

Your email address will not be published. Required fields are marked *