ನಟನೆ ಬಿಟ್ಟು ತಮ್ಮ ಸ್ವಂತ ದುಡಿಮೆಯಲ್ಲಿ ಯಶಸ್ಸು ಕಂಡ ನಟಿಯರು, ಮಾಡ್ತಿರೋ ಕೆಲಸ ಏನು ಗೊತ್ತೇ.

0 1

ಕಲಾವಿದರು ಬರೀ ಕೇವಲ ನಟನೆಯನ್ನಷ್ಟೇ ಮಾಡಬೇಕು ಎನ್ನುವ ನಿಯಮ ಎಲ್ಲಿಯೂ ಇಲ್ಲ. ಅವರವರರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುಂದುವರಿಯಲೂಬಹುದು. ನಟನೆ ಮಾಡುತ್ತಿರುವ ಒಬ್ಬರಿಗೆ ಬೇರೆ ಇನ್ಯಾವುದೋ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿದೆ ಅವರಲ್ಲಿ ಸಾಮರ್ಥ್ಯ ಇದೆ ಎಂದರೆ ಅವರು ನಟನೆಯನ್ನು ಬಿಟ್ಟು ಬೇರೆ ಕೆಲಸವನ್ನು ಸಹ ಮಾಡಲೂ ಬಹುದು. ಹಾಗೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡಾ ಸಾಕಷ್ಟು ನಟ ನಟಿಯರು ನಟನೆಯನ್ನು ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸನ್ನು ಸಹ ಕಂಡಿದ್ದಾರೆ. ಅದೇ ರೀತಿ ಕನ್ನಡ ಧಾರಾವಾಹಿಯಲ್ಲಿ ನಟನೆ ಮಾಡಿದ ಕೆಲವು ನಟಿಯರೂ ಕೂಡಾ ಇದೆ ಸಾಲಿಗೆ ಸೇರುತ್ತಾರೆ. ನಟನೆಯಿಂದ ದೂರಸರಿದ ಕನ್ನಡ ಧಾರಾವಾಹಿಯ ನಟಿಯರಿಬ್ಬರು ಅವರ ಆಸಕ್ತಿಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆ ಇಬ್ಬರೂ ನಟಿಯರು ಯಾರು? ಅವರು ನಟನೆಯನ್ನು ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕಲಾವಿದರಿಗೆ ನಟನೆಯ ಜೊತೆಗೆ ಬೇರೆ ಕ್ಷೇತ್ರದ ಕಡೆಗೂ ಆಸಕ್ತಿ ಇರುತ್ತದೆ. ಕಲಾವಿದರಿಗೆ ಎಲ್ಲ ಸಮಯದಲ್ಲೂ ಒಳ್ಳೆಯ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗೆಯೇ ಕೆಲವೊಮ್ಮೆ ಕಷ್ಟಪಟ್ಟು ಹಗಲು ರಾತ್ರಿ ಎಂದು ದುಡಿದರೂ ಸಹ ಬೇಕಾದ ಸಮಯಕ್ಕೆ ಸರಿಯಾದ ಸಂಭಾವನೆಯೂ ಕೂಡಾ ದೊರೆಯುವುದಿಲ್ಲ. ಕಲಾವಿದರು ಅವರಿಗೆ ಬೇಕಾರಿವ ಅಥವಾ ಅವರು ಬಯಸುವಂತಹ ಅವಕಾಶಗಳೂ ಸಿಗುವುದಿಲ್ಲ ಹಾಗೆಯೇ ಅಥವಾ ಬೇರೆ ರೀತಿಯ ಸಮಸ್ಯೆಗಳು ಬರುಬಹುದು. ಹೀಗಾಗಿ ಕೆಲವರು ಚಿತ್ರರಂಗಕ್ಕೆ ಗುಡ್‌ ಬೈ ಹೇಳಿದ್ದರೆ, ಇನ್ನೂ ಕೆಲವರು ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದಾರೆ. ಇದರ ಆಚೆಗೂ ಜೀವನವಿದೆ ಎಂದುಕೊಂಡು ಬೇರೆ ರಂಗದಲ್ಲಿ ಬದುಕು ಕಟ್ಟಿಕೊಂಡ ನಟ ನಟಿಯರೂ ಕೂಡಾ ಸಾಕಷ್ಟು ಜನರು ಇದ್ದಾರೆ.

ಕೆಲವು ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಮಿಲನ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದು ಸಾಕಷ್ಟು ಜನಪ್ರಿಯತೆಯನ್ನು ಕೂಡಾ ಪಡೆದಿತ್ತು. ಈ ಧಾರಾವಾಹಿಯಲ್ಲಿ ಪ್ರಾರ್ಥನಾ ಪಾತ್ರದಲ್ಲಿ ನಟಿಸಿದ್ದ ನಟಿ ಸೌಮ್ಯಾ ಸದ್ಯ ಬಣ್ಣದ ಲೋಕದಿಂದ ದೂರವಿದ್ದಾರೆ. ಈ ನಡುವೆ ಅವರಿಗೆ ಮದುವೆ ಕೂಡ ಆಗಿದ್ದು , ಕೆಲವು ವೈಯಕ್ತಿಕ ಕಾರಣಗಳಿಂದ ಅವರು ಪ್ರಸ್ತುತ ನಟನೆ ಮಾಡುತ್ತಿಲ್ಲ. ನಟನೆ ಬಿಟ್ಟ ನಂತರದಲ್ಲಿ ಎಂಟು ತಿಂಗಳು ಅವರು ಮನೆಯಲ್ಲಿಯೇ ಕೂತಿದ್ದರು. ಕಾಮರ್ಸ್‌ನಲ್ಲಿ ಪದವಿ ಮಾಡಿದ್ದ ಸೌಮ್ಯಾ ಆಮೇಲೆ ಇಂಟಿರಿಯರ್ ಡಿಸೈನರ್ ಕೋರ್ಸ್ ಮಾಡಿದರು. ಒಂದು ಕಂಪನಿಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ ನಂತರದಲ್ಲಿ ಅಲ್ಲಿಯೇ ಮ್ಯಾನೇಜರ್ ಪೋಸ್ಟ್ ಕೂಡ ಸಿಕ್ಕಿತು. ಜನಕ್ಕೆ ಅವರ ಮುಖ ಸ್ವಲ್ಪ ಪರಿಚಿತವಿದ್ದಿದರಿಂದ ಕಂಪಯ ಕೆಲಸದಲ್ಲಿ ನಿರೂಪಣೆ ಮಾಡಲು ಕೂಡಾ ಸಹಾಯವಾಯಿತು. ಈಗ ಸೌಮ್ಯಾ ಅವರು ಅವರದ್ದೇ ಆದ ಸ್ವಂತ ಇಂಟಿರಿಯರ್ ಡಿಸೈನ್ ಕಂಪನಿಯನ್ನು ಆರಂಭಿಸಿದ್ದಾರೆ. ಪದವಿ ಶಿಕ್ಷಣ ಮುಗಿದ ನಂತರದಲ್ಲಿ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಸೌಮ್ಯಾ ಅವರಿಗೆ ಇರಲಿಲ್ಲ. ಅವರಿಗೆ ಇಮೇಲ್ ಕೂಡ ಕಳಿಸಲು ಬರುತ್ತಿರಲಿಲ್ಲವಂತೆ. ಹೀಗಾಗಿ ಎಲ್ಲವನ್ನು ಕಲಿತ ಸೌಮ್ಯಾ ಈಗ ಅವರ ಕಂಪನಿಯಲ್ಲಿಯೇ ಫುಲ್ ಬ್ಯುಸಿ. ಮುಂದಿನ ದಿನಗಳಲ್ಲಿ ಅವರು ಮತ್ತೆ ಚಿತ್ರರಂಗಕ್ಕೆ ಕಾಲಿಡಬಹುದಾದ ಸಾಧ್ಯತೆಯೂ ಕೂಡ ಇದೆ.

ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರವಾಹಿಯ ನಾಯಕಿ ಅರ್ಚನಾ ಲಕ್ಷ್ಮೀನರಸಿಂಹ ಸ್ವಾಮಿ. ಇವರು ಈಗ ವಿದೇಶದಲ್ಲಿ ಎಚ್ ಆರ್ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಭಾರತ ಬಿಟ್ಟು ನ್ಯೂಯಾರ್ಕ್‌ನಲ್ಲಿ ನೆಲೆಸಿದ ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಅಲ್ಲಿಯೇ 6 ತಿಂಗಳು ಕೆಲಸ ಹುಡುಕುತ್ತ ಸಮಯ ಕಳೆದರು. ನಟನೆಗೆ ಬರುವ ಮುನ್ನ ಖಾಸಗಿ ಕಂಪನಿಯಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ ಇವರು ಈಗ ವಿದೇಶದಲ್ಲಿ ಎಚ್‌ಆರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಇದೇ ರೀತಿಯಲ್ಲಿ ನಟನೆಯ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡ ಸಾಕಷ್ಟು ನಟ ನಟಿಯರು ನಮ್ಮ ನಾಡಿನಲ್ಲಿದ್ದಾರೆ. ಅನೇಕ ನಟಿಯರು ಬ್ಯೂಟಿ ಪಾರ್ಲರ್, ಬಟ್ಟೆ ಉದ್ಯಮ, ಬ್ಯೂಟಿಕ್ ಆರಂಭಿಸಿದ್ದಾರೆ. ಇನ್ನು ಕೆಲ ನಟರು ಖಾಸಗಿ ಕಂಪನಿಯಲ್ಲಿಯೋ ಅಥವಾ ಬೇರೆ ಬೇರೆ ಕ್ಲಾಸ್ ನಡೆಸಿಕೊಡುತ್ತಿದ್ದಾರೆ. ಈ ರೀತಿಯಾಗಿ ನಟನೆಯ ಹೊರತಾಗಿಯೂ ತಮಗೂ ಒಂದು ಜೀವನ ಇದೆ ಕೆಲಸ ಕಾರ್ಯ ಇದೆ ಎನ್ನುವುದನ್ನೂ ಸಾಕಷ್ಟು ಜನ ನಟ ನಟಿಯರು ನಿರೂಪಿಸಿದ್ದಾರೆ.

Leave A Reply

Your email address will not be published.