Kannada News ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social media) ಎನ್ನುವುದು ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಕೆಲವೊಂದು ನಡೆಯುತ್ತಿರುವ ಘಟನೆಗಳೇ ಜೀವಂತ ಉದಾಹರಣೆ ಎಂದರೆ ತಪ್ಪಾಗಲಾರದು. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಹುಡುಗ ಹುಡುಗಿ ಇಬ್ಬರು ಕೂಡ ಚಾಟಿಂಗ್ ಮೂಲಕ ತಮ್ಮ ಸ್ನೇಹವನ್ನು ಬೆಳೆಸಿಕೊಂಡು ನಂತರ ಪ್ರೀತಿಸಿ, ಧರ್ಮಗಳು ಬೇರೆ ಆಗಿದ್ದರೂ ಕೂಡ ಮನೆಯವರ ವಿರೋಧದ ನಡುವೆಯೂ ಕೂಡ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ನಂತರ ಈಗ ಪತಿಗೆ ತನ್ನ ಹೆಂಡತಿಯ ನಿಜಮುಖ ತಿಳಿದು ಬಂದಿದೆ.
ಈ ವಿಚಾರ ಆತನಿಗೆ ತಿಳಿದು ಬಂದಿದ್ದು ಕೂಡ ಅವಳ ಮೊಬೈಲ್ ನಿಂದ. ಹೌದು ಮಿತ್ರರೇ ಒಮ್ಮೆ ಗಂಡನ ಮೊಬೈಲ್ ನೀರಿಗೆ ಬಿದ್ದು ಹಾಳಾಗಿದ್ದ ಹಿನ್ನೆಲೆಯಲ್ಲಿ ಅವಳ ಮೊಬೈಲ್ ಅನ್ನು ಆತ ಬಳಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ಅವಳಿಗೆ ಐವತ್ತಕ್ಕೂ ಅಧಿಕ ಬಾಯ್ ಫ್ರೆಂಡ್ ಗಳಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಆತ ಪೊಲೀಸರಿಗೆ ದೂರನ್ನು ನೀಡಿದ್ದಾನೆ. ಈ ಘಟನೆ ನಡೆದಿರುವುದು (Kanyakumari of Tamil Nadu)ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ. ಮುತ್ತುರಾಂ ಎನ್ನುವ ವ್ಯಕ್ತಿ ರಾಮನಾಥಂಪುರಂ ಜಿಲ್ಲೆಯ ಅರಣ್ಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದನು. (Facebook)ಫೇಸ್ಬುಕ್ ನಲ್ಲಿ ಈತನಿಗೆ ನಜಿನ ಪರ್ವೀನಾ ಎನ್ನುವ ಮಹಿಳೆಯ ಜೊತೆಗೆ ಪರಿಚಯವಾಗಿತ್ತು.
ಇದನ್ನೂ ಓದಿ..ಹೆಣ್ಣು ತನ್ನ ಗಂಡನಿಂದ ಜಾಸ್ತಿ ಬಯಸೋದು ಏನು ಗೊತ್ತಾ? ನಿಮಗಿದು ಗೊತ್ತಿರಲಿ
ನಂತರ ಪರಸ್ಪರ ಪ್ರೇಮ ನಿವೇದನೆಯನ್ನು ಕೂಡ ಮಾಡಿಕೊಳ್ಳುತ್ತಾರೆ. ಇಬ್ಬರು ಬೇರೆ ಧರ್ಮದವರಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿರೋಧ ಮಾಡಿದ್ದರೂ ಕೂಡ ಇಬ್ಬರು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುತ್ತಾರೆ. ಇನ್ನು ಪರ್ವೀನ ಕೂಡ ನಾನು ದಂತ ವೈದ್ಯ ಆಗಿರುವ ಕಾರಣ ಹೊಸ ಕ್ಲಿನಿಕ್ ಓಪನ್ ಮಾಡಿ ನೆಮ್ಮದಿಯಾಗಿ ಜೀವನವನ್ನು ಸಾಗಿಸಬಹುದು ಎಂಬುದಾಗಿ ಮುತ್ತು ರಾಮ್ ಗೆ ಧೈರ್ಯ ತುಂಬುತ್ತಾಳೆ. ಆದರೆ ನಿಜವಾದ ಕಹಾನಿ ಇನ್ನೂ ಆರಂಭವಾಗುವುದರಲ್ಲಿತ್ತು.
ನಜಿನ ಮಾತನ್ನು ನಂಬಿ ಇಬ್ಬರೂ ಕೂಡ ಮದುವೆಯಾಗಿ ರಾಮನಾಥಂಪುರಂನಲ್ಲಿ ಬಾಡಿಗೆ ಮನೆಯನ್ನು ತೆಗೆದುಕೊಳ್ಳುತ್ತಾರೆ. ನಜಿನಾಳ ಒತ್ತಾಯದ ಮೇರೆಗೆ ಮುತ್ತುರಾಂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಜವಾಹರ್ ಎನ್ನುವುದಾಗಿ ನಾಮ ಪರಿವರ್ತನೆಯನ್ನು ಕೂಡ ಮಾಡಿಕೊಳ್ಳುತ್ತಾನೆ. ಮುಸ್ಲಿಂ ಧರ್ಮದಲ್ಲಿ ಹುಡುಗಿಗೆ ಹುಡುಗ ವರದಕ್ಷಿಣೆಯನ್ನು ನೀಡಬೇಕು ಎಂಬುದಾಗಿ ಹೇಳಿ ಆತನಿಂದ ಹುಂಡೈ ಕಾರು 40 ಗ್ರಾಂ ಚಿನ್ನಾಭರಣ ಹಾಗೂ ಮೂರು, ನಗದು ಹಣ ಸೇರಿದಂತೆ ಹಲವಾರು ಮೌಲ್ಯಯುತ ವಸ್ತುಗಳನ್ನು ಪಡೆದುಕೊಳ್ಳುತ್ತಾಳೆ.
ಇದನ್ನೂ ಓದಿ..Actor Sithara: ನಟಿ ಸಿತಾರಾ ವಯಸ್ಸು 49 ಆದ್ರೂ ಇನ್ನು ಮದುವೆಯಾಗದೆ ಇರೋದ್ಯಾಕೆ? ಇನ್ನು ಆ ನಟನ ನೆನಪಲ್ಲೇ ಇದ್ದಾರಾ..
ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು ಆದರೆ ಹೆಂಡತಿಯ ನಿಜ ಬಣ್ಣ ಬಯಲಾದ ನಂತರ ಈಗ ಪೊಲೀಸ್ ಠಾಣೆಯಲ್ಲಿ ನನಗೆ ನ್ಯಾಯ ಕೊಡಿಸಿ ನಾನು ನನ್ನದು ಎಂದು ಇರುವಂತಹ ಎಲ್ಲಾ ವಸ್ತುಗಳನ್ನು ಆಕೆಗೆ ನೀಡಿದ್ದೇನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂಬುದಾಗಿ ಅಂಗಲಾಚುತಿದ್ದಾನೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.