ಆ ದಿನ ಕಿಚ್ಚ ಸುದೀಪ್ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದೇಕೆ? ಸಾಧನೆ ಹಿಂದ ಕಥೆ

0 0

ಅನೇಕ ಏಳು ಬೀಳುಗಳನ್ನು ಕಂಡು ಸುದೀಪ್‌ ಇಂದು ಈ ಸ್ಥಾನದಲ್ಲಿ ಇದ್ದಾರೆ. ಹಲವು ಕಷ್ಟಗಳನ್ನು ಅವರು ಅನುಭವಿಸಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅವರು ಅನುಭವ ಪಡೆದುಕೊಂಡಿದ್ದಾರೆ. ಅದರಲ್ಲಿ ಮೈ ಆಟೋಗ್ರಾಫ್‌ ಸಿನಿಮಾ ಅವರ ಜೀವನದಲ್ಲಿ ಒಂದು ಮೈಲಿಗಲ್ಲು. ಆ ಚಿತ್ರದ ಮೂಲಕ ಅವರು ನಿರ್ದೇಶಕರಾದರು. ದೊಡ್ಡ ಮಟ್ಟದ ಯಶಸ್ಸು ಕಂಡರು. ಆದರೆ ಆ ಯಶಸ್ಸಿನ ಹಿಂದೆ ಸುದೀಪ್‌ ಹಾಕಿದ್ದ ಶ್ರಮ ಬಹುದೊಡ್ಡದು. ನಟ ಕಿಚ್ಚ ಸುದೀಪ್‌ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದೆ. ಈ ಪ್ರಯುಕ್ತ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಅವರ ಕಟೌಟ್‌ ಹಾಗೂ ವಿಕ್ರಾಂತ್‌ ರೋಣ ಸಿನಿಮಾದ ಟೈಟಲ್‌ ಲೋಗೋ ರಾರಾಜಿಸಿದೆ. ಜನವರಿ 31ರಂದು ಈ ಕಾರ್ಯಕ್ರಮ ಜರುಗಿದ್ದು ದುಬೈಗೆ ತೆರಳಿದ್ದ ಸುದೀಪ್ ಅಲ್ಲಿಂದಲೇ ನೇರವಾಗಿ ಸುದ್ದಿಗೋಷ್ಠಿ ನಡೆಸಿ ತಮ್ಮ ವೃತ್ತಿ ಜೀವನವನ್ನು ಮೆಲುಕು ಹಾಕಿದ್ದಾರೆ. ಸುದೀಪ್ ತಮ್ಮ ವೃತ್ತಿ ಜೀವನವನ್ನು ನೆನೆದು ಆಡಿದ ಕೆಲವು ಮಾತುಗಳನ್ನು ನಾವಿಲ್ಲಿ ನೋಡಬಹುದು.

ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ಸುದೀಪ್‌ ಅವರು ಒಂದು ಕಾಲದಲ್ಲಿ ಮನೆ ಪತ್ರವನ್ನು ಅಡವಿಟ್ಟು ಸಿನಿಮಾ ಮಾಡಿದ್ದರು! ಆ ಕಷ್ಟದ ದಿನಗಳನ್ನು ಈಗ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಮೈ ಆಟೋಗ್ರಾಫ್‌ ಸಿನಿಮಾ ಸುದೀಪ್‌ ವೃತ್ತಿಜೀವನದಲ್ಲಿ ಬಹುಮುಖ್ಯ ಘಟ್ಟ. ಆ ಚಿತ್ರಕ್ಕೆ ಅವರೇ ನಿರ್ದೇಶನ ಮಾಡಿದ್ದರು. ಆ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ಮೈ ಆಟೋಗ್ರಾಫ್‌ಗಿಂತ ಎರಡು ವರ್ಷಗಳ ಹಿಂದೆ ನನ್ನ ಕರಿಯರ್‌ ಎಲ್ಲೂ ಹೋಗುತ್ತಿರಲಿಲ್ಲ. ಎವರೇಜ್‌ ಅಥವಾ ಫ್ಲಾಪ್‌ ಸಿನಿಮಾ ಮಾಡುವುದೇ ಹೌದಾದರೆ ನಾನೇ ಮಾಡುತ್ತೇನೆ. ಹೆಂಗೂ ನನ್ನ ದುಡ್ಡು ಎಂದು ನಿರ್ಧರಿಸಿದೆ. ಇದೆಲ್ಲ ಆಗುವುದು ಒಳ್ಳೆಯದಕ್ಕೆ ಎನಿಸುತ್ತದೆ ನನ್ನ ಬದುಕಿನಲ್ಲಿ ಆ ಘಟನೆ ನಡೆದಿದ್ದಕ್ಕೆ ನನಗೆ ಖುಷಿ ಇದೆ. ಹೊಸತು ಮಾಡಲು ನಮಗೆ ಒಂದು ಸ್ಫೂರ್ತಿ ಬೇಕು. ಆಟೋಗ್ರಾಫ್‌ ಬಳಿಕ ನನಗೆ ತುಂಬ ಕಾನ್ಫಿಡೆನ್ಸ್‌ ಬಂತು. ಅಲ್ಲಿಂದ ನನ್ನ ಬದುಕು ಬದಲಾಯಿತು ಎಂದಿದ್ದಾರೆ ಕಿಚ್ಚ ಸುದೀಪ್‌.

ಅವತ್ತು ತನ್ನ ಸಿನಿಮಾಗಳು ಅಷ್ಟು ಚೆನ್ನಾಗಿ ಓಡುತ್ತಿರಲಿಲ್ಲ. ಅಪ್ಪಿ ತಪ್ಪಿ ಮೈ ಆಟೋಗ್ರಾಫ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಓಡಿರಲಿಲ್ಲ ಎಂದಿದ್ದರೆ ಮುಂದಿನ ಸಿನಿಮಾ ಬಗ್ಗೆ ಕಲ್ಪನೆ ಮಾಡಿಕೊಳ್ಳಿ ಮುಂದಿನ ಸಿನಿಮಾದ ನಿರ್ದೇಶಕರ ಬಳಿ ನಾನು ಹೋಗಿ ಏನಾದರೂ ಸಲಹೆ ಕೊಟ್ಟರೆ ನಿನ್ನ ಪಿಕ್ಚರ್‌ ನೋಡಿದೀವಿ ಬಾರಪ್ಪ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದರು. ಇದೆಲ್ಲದಕ್ಕೂ ರೆಡಿಯಾಗಿದ್ದೆ ನಾನು. ಅದೃಷ್ಟವಶಾತ್‌ ಆ ಸಿನಿಮಾ ಯಶಸ್ಸು ಕಂಡಿತು. ಎಲ್ಲರೂ ಒಪ್ಪಿಕೊಂಡರು. ಅದು ಇಷ್ಟು ವಾರಗಳ ಕಾಲ ಓಡುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಅದೊಂದು ಗಿಫ್ಟ್‌ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ. ಮೈ ಆಟೋಗ್ರಾಫ್‌ ರಿಲೀಸ್‌ ಆದ ದಿನ ಮನೆಯಿಂದ ಹೊರಡುವಾಗ ಸುದೀಪ್ ಅವರು ತಮ್ಮ ಪತ್ನಿ ಪ್ರಿಯಾಗೆ ಒಂದು ವೇಳೆ ಈ ಸಿನಿಮಾ ಓಡದೇ ಇದ್ದರೆ ಸ್ಯೂಟ್‌ಕೇಸ್‌ ಹಿಡಿದುಕೊಂಡು ರೆಡಿಯಾಗಿರು ಎಂದು ಹೇಳಿದ್ದರಂತೆ. ಏಕೆಂದರೆ ಆ ಸಿನಿಮಾ ಮಾಡಲು ಸುದೀಪ್ ಅವರು ತಮ್ಮ ಮನೆ ಪತ್ರವನ್ನು ಅಡ ಇಟ್ಟಿದ್ದರಂತೆ.

ಆವತ್ತು ತುಂಬ ಸಾಲ ಮಾಡಿ ಏನಾದರೂ ಅಪ್ಪಿ-ತಪ್ಪಿ ಆ ಸಿನಿಮಾ ಸೋತಿದ್ದರೆ ಕಷ್ಟ ಇತ್ತು. ಸ್ಯೂಟ್‌ಕೇಸ್‌ ಪ್ಯಾಕ್‌ ಮಾಡಲ್ಲ ರೆಡಿ ಆಗಿರಲ್ಲ, ಯಾವುದನ್ನೂ ನಾವು ಬಿಟ್ಟುಹೋಗಬೇಕಾಗಿಲ್ಲ ಎಂದು ಪ್ರಿಯಾ ಹೇಳಿದ್ದರು ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ಮಹಾನ್‌ ಸಿನಿಮಾ ಅಲ್ಲದೇ ಇರಬಹುದು. ಒಳ್ಳೆಯ ಸಿನಿಮಾ ಮಾಡಿದ್ದೀರಿ ಅಂತ ಪ್ರಿಯಾ ಧೈರ್ಯ ತುಂಬಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ ಸುದೀಪ್‌. ಸಂತೋಷ್‌ ಚಿತ್ರಮಂದಿರದಲ್ಲಿ ಮೊದಲ ಶೋ ಕಲೆಕ್ಷನ್‌ ರಿಪೋರ್ಟ್‌ ಬಂದಾಗ ಸುದೀಪ್ ಅಲ್ಲಿ ಒಂದು ಮೂಲೆಯಲ್ಲಿ ಹೋಗಿ ಮಗುವಿನ ರೀತಿ ಅತ್ತಿದ್ದರಂತೆ ಏಕೆಂದರೆ ಸಾಕಷ್ಟು ಪರಿಶ್ರಮಪಟ್ಟಿದ್ದ ಇವರಿಗೆ ಆ ಕ್ಷಣಕ್ಕೆ ಜ್ಞಾಪಕ ಇರುವುದು ಏನೆಂದರೆ ಅಡವಿಟ್ಟ ಆ ಮನೆ ಅವರದ್ದು ಆಗಿರಲಿಲ್ಲ ಎಂದು ಮತ್ತು ಆ ಮನೇ ಸುದೀಪ್ ಅವರ ತಂದೆಯವರ ಮನೇ ಆಗಿತ್ತು. ವಿಧಿ ಇಲ್ಲದೆ ಅದನ್ನೂ ಬರೆದುಕೊಟ್ಟುಬಿಟ್ಟಿದ್ದರು. ಮೈ ಆಟೋಗ್ರಾಫ್‌ ಗೆಲುವಿಗೆ ತಾನೊಬ್ಬನೇ ಕಾರಣಕರ್ತ ಎಂದರೆ ತಪ್ಪಾಗಿಬಿಡುತ್ತದೆ. ನನ್ನ ಕುಟುಂಬದವರು ಅದಕ್ಕೆ ಜವಾಬ್ದಾರರು. ಮೈ ಆಟೋಗ್ರಾಫ್‌ ಶೂಟಿಂಗ್‌ ನಡೆದ ಕೇರಳದ ಮನೆಗೆ 15 ವರ್ಷಗಳ ಬಳಿಕ ಹೋಗಿದ್ದ ಸುದೀಪ್ ಅವರಿಗೆ ಅಲ್ಲಿಗೆ ಹೋದಮೇಲೆ ಗೊತ್ತಾಗಿದ್ದು ಏನೆಂದರೆ 15 ವರ್ಷ ಎಂಬುದು ಚಿಟಕೆ ಹೊಡೆದಂತೆ ಮುಗಿದುಹೋಯ್ತು ಎನ್ನುವುದು.

Leave A Reply

Your email address will not be published.