ಕಿರುತೆರೆ ಲೋಕದಲ್ಲಿ ಬಿಗ್ ಬಾಸ್ ಶೋಗೆ ಭಾರಿ ಜನಪ್ರಿಯತೆ ಇದೆ. ಹಿಂದಿ ಕನ್ನಡ ತೆಲುಗು ತಮಿಳು ಸೇರಿದಂತೆ ಅನೇಕ ಭಾಷೆಗಳಲ್ಲಿ ಈ ಶೋ ಭಾರಿ ಜನಪ್ರಿಯತೆಯೊಂದಿಗೆ ಪ್ರಸಾರವಾಗುತ್ತಿದೆ. ಈ ಬಾರಿ ಕೊರೊನಾ ಇರುವುದರಿಂದ ಶೋ ನಡೆಯಲಿದೆಯೇ ಇಲ್ಲವೇ? ಎಂಬ ಅನುಮಾನಗಳು ಇದ್ದಿದ್ದು ಸಹಜ. ಆದರೆ ತೆಲುಗು ವರ್ಷನ್‌ನ ಬಿಗ್ ಬಾಸ್ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಆರಂಭಗೊಂಡಿತು. ಅದಾದ ಮೇಲೆ ಸಲ್ಮಾನ್ ಖಾನ್ ಕೂಡ ಹಿಂದಿಯ ಬಿಗ್ ಬಾಸ್‌ನ 14ನೇ ಸೀಸನ್ ಅನ್ನು ಶುರು ಮಾಡಿದರು. ಕನ್ನಡದಲ್ಲಿ ಯಾವಾಗ ಶುರುವಾಗಲಿದೆ? ಎಂಬ ಪ್ರಶ್ನೆಗೆ ಈಗ ತೆರೆ ಬಿದ್ದಿದ್ದು ಇನ್ನೇನು ಕನ್ನಡದಲ್ಲಿ ಕೂಡಾ ಬಿಗ್ ಬಾಸ್ ಕಾರ್ಯಕ್ರಮ ಆರಂಭ ಆಗಲಿದೆ.
ಇನ್ನು ಇದೇ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಗಂಟೆಗೆ ಆರಂಭವಾಗಲಿದೆ. ಈಗಾಗಲೇ ಅದರ ಪ್ರೋಮೋ ಕೂಡ ರಿಲೀಸ್ ಆಗಿದೆ. ಈ ಬಾರಿ ಯಾರು ಯಾರು ಬಿಗ್ ಬಾಸ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಕೂಡ ಶುರುವಾಗಿದೆ. ಕಳೆದ ಏಳು ಸೀಸನ್‌ಗಳನ್ನು ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದರು. ಅಂತೆಯೇ ಈ ಬಾರಿ ಕೂಡ ಅವರು ಬಿಗ್ ಬಾಸ್ ನಿರ್ವಹಣೆ ಮಾಡಲಿದ್ದು ಅಭ್ಯರ್ಥಿಗಳು ಯಾರೆಲ್ಲ ಭಾಗವಹಿಸಬಹುದು? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಈಗಾಗಲೇ ಬಿಗ್ ಬಾಸ್ ಸೀಸನ್ ಎಂಟರ ಅಭ್ಯರ್ಥಿಗಳ ಹೆಸರು ಅಲ್ಲಲ್ಲಿ ಕೇಳಿ ಬರುತ್ತಿದ್ದು ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನೀವು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳನ್ನು ಗಮನಿಸಿರಬಹುದು ಅದರಲ್ಲಿ ಒಂದು ಸಾಧ್ಯವಾದಷ್ಟು ವಿವಿಧ ಕ್ಷೇತ್ರಗಳ ಜನರನ್ನು ಬಿಗ್ ಬಾಸ್ ಮನೆಗೆ ಒಟ್ಟಿಗೆ ಕಳುಹಿಸಲಾಗುತ್ತದೆ. ಅಲ್ಲಿ ಕಾಮಿಡಿಯನ್ ಇರುತ್ತಾರೆ ಹಾಡುಗಾರರು ಸುದ್ದಿ ವರದಿಗಾರರು ಸೇರಿದಂತೆ ಹೀಗೆ ವಿವಿಧ ರೀತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಜನರನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ಮೂಲಕ ಜನರಿಗೆ ಸಾಕಷ್ಟು ಮನರಂಜನೆ ನೀಡುವ ಕೆಲಸ ಮಾಡಲಾಗುತ್ತದೆ. ಅದೇ ಕಾರಣಕ್ಕಾಗಿ ಬಹುಶಹ ಬಿಗ್ ಬಾಸ್ ಇಲ್ಲಿಯವರೆಗೂ ನಡೆಸಿದ ಎಲ್ಲಾ ಸೀಸನ್ ಗಳಲ್ಲಿಯೂ ಕೂಡ ಅತ್ಯುತ್ತಮ ಜನಪ್ರಿಯತೆ ಪಡೆದುಕೊಂಡು ಉತ್ತಮ ಟಿಆರ್ಪಿ ಗಳಿಸಿದೆ ಎನ್ನಬಹುದು.
ಹೀಗೆ ವಿವಿಧ ಕ್ಷೇತ್ರಗಳಿಂದ ಪ್ರತಿಬಾರಿಯೂ ಜನರನ್ನು ಆರಿಸುವ ಬಿಗ್ ಬಾಸ್ ತಂಡ ಈ ಬಾರಿ ಮಾಧ್ಯಮದ ವತಿಯಿಂದ ಅಂದರೆ ನ್ಯೂಸ್ ರಿಪೋರ್ಟರ್ ಒಬ್ಬರನ್ನು ಈ ಬಾರಿಯೂ ಕೂಡ ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ. ಈ ನ್ಯೂಸ್ ರಿಪೋರ್ಟರ್ ಯಾರು? ಎಂಬುದನ್ನು ನಾವು ಗಮನಿಸುವುದಾದರೆ ಮೊದಲಿನಿಂದಲೂ ಹಾಗೂ ಇದೀಗ ಕೂಡ ಬಿಗ್ ಬಾಸ್ ಮನೆಗೆ ಹೋಗಿಯೇ ತೀರುತ್ತಾರೆ ಎಂದು ಹೆಸರು ಕೇಳಿ ಬರುತ್ತಿರುವುದು ಬೇರೆ ಯಾರದ್ದೂ ಅಲ್ಲ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡಿ ತದನಂತರ ಇದೀಗ ಬಿ ಟಿವಿಯಲ್ಲಿ ಕೆಲಸ ಮಾಡುತ್ತಿರುವ ರಾಧಾ ಹಿರೇಗೌಡರ್ ಅವರ ಹೆಸರು. ಇವರು ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎಂದು ಹಲವಾರು ತಿಂಗಳುಗಳಿಂದ ಸುದ್ದಿಗಳು ಕೇಳಿ ಬರುತ್ತಿದ್ದು ಈಗಲೂ ಕೂಡ ಕೊನೆಯ ಕ್ಷಣದಲ್ಲಿ ರಾಧಾ ಹಿರೇಗೌಡರ್ ಅವರು ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಎಂಬುದು ಖಚಿತವಾಗಿದೆ.