Ultimate magazine theme for WordPress.

ಶಶಿಕುಮಾರ್ ಮೊಮ್ಮಗಳು ಎಷ್ಟು ಮುದ್ದಾಗಿದ್ದಾಳೆ ನೋಡಿ ಮೊದಲಬಾರಿಗೆ

0 0

ಕನ್ನಡ ಚಿತ್ರರಂಗದಲ್ಲಿ ನಗು ಮುಖದಿಂದ ನಟನೆ ಮಾಡುತ್ತಾ ಎಲ್ಲರ ಮನಸನ್ನು ಗೆದ್ದಿರುವ ಶಶಿಕುಮಾರ್ ಅವರು ಮೊಮ್ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅವರ ಕುಟುಂಬದವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಅವರ ಬಗ್ಗೆ ಹಾಗೂ ಅವರ ಮೊಮ್ಮಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದಲ್ಲಿ ಶಶಿ ಕುಮಾರ್ ಅವರು ಯಶಸ್ವಿ ನಟರಾಗಿದ್ದಾರೆ. ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದಿದ್ದಾರೆ. ರಜನಿಕಾಂತ್ ಅವರ ಭಾಷಾ ಚಿತ್ರದಲ್ಲಿ ಸಹ ನಟಿಸಿ ಯಶಸ್ವಿಯಾಗಿದ್ದಾರೆ. ಸುಪ್ರೀಮ್ ಹೀರೊ ಎಂದು ಹೆಸರು ಪಡೆದ ಶಶಿಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಫೇಮಸ್ ನಟರಾಗಿದ್ದರು. ಶಶಿಕುಮಾರ್ ಅವರ ಪತ್ನಿಯ ಹೆಸರು ಸರಸ್ವತಿ. 1993 ರಲ್ಲಿ ಶಶಿಕುಮಾರ್ ಅವರು ಸರಸ್ವತಿ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಶಶಿಕುಮಾರ್ ಅವರ ಮಗನು ಸಿನಿಮಾಗಳಲ್ಲಿ ನಟಿಸುತ್ತಾರೆ ಅವರು ತೆಲುಗಿನಲ್ಲಿ ಹೆಚ್ಚು ನಟಿಸಿದ್ದಾರೆ. ಶಶಿಕುಮಾರ್ ಅವರಿಗೆ ಈಗ 55 ವರ್ಷ ವಯಸ್ಸು ಇವರಿಗೆ ಮುದ್ದಾದ ಮೊಮ್ಮಗಳಿದ್ದಾಳೆ ಅವಳೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಚಿರಂಜೀವಿ ಸುಧಾಕರ್ ಎಂಬ ಚಿತ್ರದಲ್ಲಿ ಶಶಿಕುಮಾರ್ ಅವರು ಅದ್ಭುತವಾಗಿ ನಟಿಸಿ ಜನಪ್ರಿಯರಾದರು. ನಂತರ ಯುದ್ದಕಾಂಡ, ಇಂದ್ರಜಿತ್, ಸಿಬಿಐ ಶಂಕರ್, ಬಾರೆ ನನ್ನ ಮುದ್ದಿನ ರಾಣಿ, ಯಜಮಾನ, ಹಬ್ಬ, ಕನಸುಗಾರ, ಸ್ನೇಹಲೋಕ, ಯಾರಿಗೆ ಸಾಲುತ್ತೆ ಸಂಬಳ ಹೀಗೆ ಕನ್ನಡದ ಹಲವು ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನಪ್ರಿಯರಾಗಿದ್ದಾರೆ. ಇವರು ಸುಮಾರು 100 ಚಿತ್ರಗಳಲ್ಲಿ ನಟಿಸಿ ಮಿಂಚಿ ಮೆರೆದಿದ್ದಾರೆ.

ಇವರು ಪೌರಾಣಿಕ ಸಿನಿಮಾ ಆದ 2019ರಲ್ಲಿ ತೆರೆಕಂಡ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇವರು ನಟನೆಯಲ್ಲಿ ಮಾತ್ರವಲ್ಲದೆ ಡ್ಯಾನ್ಸ್ ಮಾಡುವುದರಲ್ಲೂ ಬಹಳ ಪ್ರವೀಣರು ಎಂದು ಹೇಳಬಹುದು. ಅತ್ಯುತ್ತಮ ಡ್ಯಾನ್ಸರ್ ಎಂದು ಎನಿಸಿಕೊಂಡಿದ್ದಾರೆ. ಅಲ್ಲದೆ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ರಾಜಕೀಯದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಸದ್ಯ ತಮ್ಮ ಸಮಯವನ್ನು ತಮ್ಮ ಮೊಮ್ಮಗಳೊಂದಿಗೆ ಕಳೆಯುತ್ತಿದ್ದಾರೆ. ಅವರ ಸಿನಿಮಾಗಳನ್ನು ಇಂದಿಗೂ ಅವರ ಅಭಿಮಾನಿಗಳು ಮರೆತಿಲ್ಲ. ಒಟ್ಟಿನಲ್ಲಿ ಶಶಿಕುಮಾರ್ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಶಶಿಕುಮಾರ್ ಅವರು ಅವರ ಕುಟುಂಬದವರೊಂದಿಗೆ ಸಂತೋಷವಾಗಿ ಇರಲಿ ಎಂದು ಆಶಿಸೋಣ.

Leave A Reply

Your email address will not be published.