ಆಲ್ಬಂ ಸಾಂಗ್ ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಬಿಗ್ ಬಾಸ್ ಸ್ಪರ್ಧಿ

0 1

ಸೂಜಿದಾರ ಎನ್ನುವ ಒಂದೇ ಒಂದು ಚಿತ್ರದ ಪಾತ್ರದಿಂದಲೇ ಪ್ರೇಕ್ಷಕರಿಗೆ ಆತ್ಮೀಯವಾದ ಅರಳು ಕಂಗಳ ಬೆಡಗಿ ಚೈತ್ರಾ ಕೋಟೂರ್. ಆದರೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ಮೇಲೆ ಅವರ ರೇಂಜ್ ಬದಲಾಗಿದೆ. ಅವರು, ಅವರ ಕಾರ್ಯಚಟುವಟಿಕೆ ಪ್ರೇಮದ ಬಗ್ಗೆ ಕೇಳುವ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ನಟನೆಗೆ ತುಂಬ ಅವಕಾಶಗಳು ಬರುತ್ತಿವೆ. ಆದರೆ ಆಗಲೇ ಹೇಳಿದಂತೆ ಡೈರೆಕ್ಷನ್ ನನ್ನ ಕನಸು. ನಟನೆಯ ವಿಚಾರಕ್ಕೆ ಬಂದರೆ ಈಗಾಗಲೇ ನಟಿಸಿರುವ ವಿರಾಟಪರ್ವ ಇನ್ನೇನು ತೆರೆಗೆ ಬರಲು ತಯಾರಾಗಿದೆ. ಇನ್ನೊಂದೆರಡು ಚಿತ್ರಗಳನ್ನು ಕೂಡ ಒಪ್ಪಿದ್ದೇನೆ. ಆದರೆ ನನಗೆ ನಿರ್ದೇಶಕಿಯಾಗಿ ಬೆಳೆಯುವ ಕನಸಿರುವ ಕಾರಣ ಒಳ್ಳೆಯ ನಿರ್ಮಾಣ ಸಂಸ್ಥೆಯೊಂದಿಗೆ ಕೈ ಜೋಡಿಸಬೇಕಿದೆ. ಎಲ್ಲವೂ ಕೈಗೂಡಿ ಬಂದರೆ ಸ್ಕ್ರಿಪ್ಟ್ ಕೆಲಸ ತನ್ನಷ್ಟಕ್ಕೇ ಪೂರ್ತಿಯಾಗುತ್ತದೆ. ಈಗಾಗಲೇ ಒಂದು ಜಾಹೀರಾತು ಡೈರೆಕ್ಟ್ ಮಾಡಿದ್ದೇನೆ. ಇನ್ನು ಸಿನಿಮಾ ನಿರ್ದೇಶಿಸುವುದೊಂದೇ ಬಾಕಿ ಇದೆ ಎಂದು ಹೇಳಿಕೆ ನೀಡಿದ್ದ ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟ್ಟೂರು ಈಗ ಒಂದು ಆಲ್ಬಂ ಹಾಡಿನಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಚೈತ್ರ ಕೊಟ್ಟೂರು ತಾವೇ ಸ್ವತಃ ಹಾಡು ಹೇಳಿ ಅಭಿನಯಿಸಿದ ಆ ಆಲ್ಬಂ ಸಾಂಗ್ ಯಾವುದು ? ಎನ್ನುವುದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಿಗ್ ಬಾಸ್​ ನ ಅಭ್ಯರ್ಥಿ ಚೈತ್ರಾ ಕೊಟ್ಟೂರು ಹುಡುಗರ ಒಳ್ಳೆತನದ ಬಗ್ಗೆ ಸಾಲು ಸಾಲು ಪಟ್ಟಿ ಮಾಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಹಾಡೊಂದನ್ನು ಹಾಡಿ ಈಗ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಹುಡುಗರು ತುಂಬಾ ಒಳ್ಳೆಯವರು ಎಂದು ಹಾಡಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದುಮಾಡಿದೆ.  ತಮ್ಮ ಸಾಹಿತ್ಯ, ನಟನೆ, ರಂಗ ಆಸಕ್ತಿಯಿಂದ ಈಗಾಗಲೇ ಗುರುತಿಸಿಕೊಂಡಿರುವ ಚೈತ್ರಾ ಈಗ ರ್ಯಾಪ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಹುಡುಗರು ತುಂಬಾ ಒಳ್ಳೆವ್ರು ಟೈಂ ಬೇಕು ಒಂಚೂರು ಎನ್ನುವ ಹಾಡನ್ನು ನಿರ್ಮಾಣ ಮಾಡಿ ಅದರಲ್ಲಿ ಸಖತ್​ ಸ್ಟೆಪ್​ ಹಾಕಿದ್ದಾರೆ. ಯೂಟ್ಯೂಬ್​ನಲ್ಲಿ ಈ ಹಾಡು  ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಶೇಷ ಎಂದರೇ ಈ ಹಾಡಿನ ಸಂಪೂರ್ಣ ಹೊಣೆಯನ್ನು ಚೈತ್ರಾ ಅವರೇ ನಿಭಾಯಿಸಿದ್ದಾರೆ. ಹಾಡಿನ ಸಾಹಿತ್ಯ, ನಿರ್ಮಾಣ ಮಾಡುವುದರ ಜೊತೆ ಈ ಹಾಡಿಗೆ ಅವರೇ ದನಿಯಾಗಿದ್ದಾರೆ. ಆನಂದ್​ ಆಡಿಯೋ ಈ ಹಾಡನ್ನು ಬಿಡುಗಡೆ ಮಾಡಿದೆ.

ಚೈತ್ರಾ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಡಿನಲ್ಲಿ ಹುಡುಗರನ್ನು ಗುಣಗಾನ ಮಾಡಿದ್ದು, ಯುವಕರ ಗಮನ ಸೆಳೆಯುತ್ತಿದೆ. ರ್ಯಾಪ್ ಶೈಲಿಯಲ್ಲಿರುವ ಈ ಹಾಡಿಗೆ ಚೈತ್ರಾ ಕೋಟೂರ್ ಅದ್ಭುತ ನೃತ್ಯ ಸಹ ಮಾಡಿದ್ದಾರೆ. ನಟನೆ, ರಂಗಭೂಮಿ, ಸಾಹಿತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದ ಚೈತ್ರಾ ಅವರ ಮತ್ತೊಂದು ಪ್ರತಿಭೆ ಈ ಹಾಡಿನ ಮೂಲಕ ಹೊರಬಂದಿದೆ. ಬಿಗ್​ ಬಾಸ್​ ಮೂಲಕ ಎಲ್ಲರ ಗಮನಸೆಳೆದಿದ್ದ ಚೈತ್ರಾ ಮತ್ತೆ ಕಿರುತೆರೆ ನಟನೆಗೆ ಮರಳಿದ್ದರು. ಈಗ ಹೊಸ ಪ್ರಯೋಗದ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.