ಬಹಳಷ್ಟು ಜನರಿಗೆ ಅವರವರ ರಾಶಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಸೆ ಇರುತ್ತದೆ. ಹಾಗಾಗಿ ಕನ್ಯಾ ರಾಶಿಯ ಬಗ್ಗೆ ಹಾಗೂ ಕನ್ಯಾ ರಾಶಿಯವರ ಜೀವನದ ಬಗ್ಗೆ ತಿಳಿದುಕೊಳ್ಳೋಣ. ಕನ್ಯಾ ರಾಶಿಯ ಅಧಿಪತಿ ಬುಧ. ಬುಧ ಎಂದರೆ ಮಹಾವಿಷ್ಣುವಿನ ಒಂದು ಅಂಶ ಎಂದು ಹೇಳುತ್ತಾರೆ. ಬುಧ ಅಧಿಪತಿ ಆಗಿರುವ ಕನ್ಯಾ ರಾಶಿಯವರ ಭವಿಷ್ಯ ಹೇಗೆ ಇರುತ್ತದೆ, ಕನ್ಯಾ ರಾಶಿಯವರು ಉತ್ತಮ ಗುಣಗಳನ್ನು ಹೊಂದಿದ ವ್ಯಕ್ತಿಗಳಾಗಿದ್ದು ಶಾಂತ ಸ್ವಭಾವದವರಾಗಿರುತ್ತಾರೆ. ಬಹಳಷ್ಟು ಸಹನೆಯನ್ನು ಹೊಂದಿರುತ್ತಾರೆ. ಆದರೆ ಬಹಳಷ್ಟು ಆಡಂಭರದ ಜೀವನವನ್ನು ಇಷ್ಟ ಪಡುತ್ತಾರೆ. ಪರೋಪಕಾರರ್ಥಮ್ ಇದಂ ಶರೀರಮ್ ಎನ್ನುವ ಹಾಗೆಯೇ ಬೇರೆಯವರ ಉಪಕಾರಕ್ಕಾಗಿಯೇ ಜೀವನವನ್ನು ನಡೆಸುತ್ತಾ ಇರುತ್ತಾರೆ. ನಾಚಿಕೆಯ ಸ್ವಭಾವ ಜಾಸ್ತಿ ಇರುತ್ತದೆ. ಜ್ಞಾಪಕ ಶಕ್ತಿ ಹೆಚ್ಚಾಗಿ ಇದ್ದು ಸ್ವಂತ ಪರಿಶ್ರಮದಿಂದ ಕಷ್ಟ ಪಟ್ಟು ಮೇಲೆ ಬರುತ್ತಾರೆ. ದಯೆ ದಾಕ್ಷಿಣ್ಯ ಹೆಚ್ಚಾಗಿ ಇರುತ್ತದೆ. ಉತ್ತಮ ಭಾಷಣಗಾರರಾಗಿರುತ್ತಾರೆ. ಬೇರೆ ಬೇರೆ ಭಾಷೆಗಳಲ್ಲಿ ನೈಪುಣ್ಯತೆಯನ್ನು ಹೊಂದಿರುತ್ತಾರೆ ಸ್ಪಷ್ಟವಾಗಿ, ನಿರರ್ಗಳವಾಗಿ ಮಾತನಾಡಬಲ್ಲರು. ಅಹಂಕಾರ ಇರುವುದಿಲ್ಲ ಇನ್ನೊಬ್ಬರ ಮನಸ್ಸಿಗೆ ನೋವಾಗುವ ರೀತಿ ನಡೆದುಕೊಳ್ಳುವುದಿಲ್ಲ.

ಕನ್ಯಾ ರಾಶಿಯವರಿಗೆ ಕರುಳು ಸಂಬಂಧಿತ ವ್ಯಾಧಿ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಇರುವುದಿಲ್ಲ. ಕನ್ಯಾ ರಾಶಿಯವರ ಅದೃಷ್ಟ ರತ್ನ ಪಚ್ಚೆ ಇನ್ನೊಂದು ಅದೃಷ್ಟ ರತ್ನ ಅಂದರೆ ವಜ್ರ, ಅದೂ ಅರ್ಧ ಬಾಗದಷ್ಟು ಮಾತ್ರ. ಹಸಿರು ಮತ್ತು ಹಳದಿ ಬಣ್ಣಗಳು ಒಳ್ಳೆಯ ಬಣ್ಣಗಳಾಗಿರುತ್ತವೆ ಬುಧವಾರ ಹಾಗೂ ಶುಕ್ರವಾರ ಒಳ್ಳೆಯ ದಿನಗಳು. ವಿಶೇಷವಾಗಿ ಬುಧ ವಿಷ್ಣುವಿನ ಒಂದು ಅಂಶ ಆಗಿರುವುದರಿಂದ ಐದು, ಹದಿನಾಲ್ಕು ಮತ್ತು ಇಪ್ಪತ್ತಮುರನೇ ತಾರೀಕು ಈ ಮೂರು ದಿನಗಳಲ್ಲಿ ಯಾವುದೇ ಕೆಲಸವನ್ನ ಮಾಡಿದ್ರೂ ಸಹ ಜಯವನ್ನು ಪಡೆಯುತ್ತಾರೆ.

ಇನ್ನು ಕನ್ಯಾ ರಾಶಿಯ ಮಿತ್ರ ರಾಶಿ ಯಾವುದು ಅಂತ ನೋಡುವುದಾದರೆ ಮೇಷ ರಾಶಿ, ಮಿಥುನ ರಾಶಿ ಸಿಂಹ ರಾಶಿ ಇವು ಬಹಳಷ್ಟು ಮಿತ್ರತ್ವವನ್ನು ಹೊಂದಿದ ರಾಶಿಗಳಾಗಿವೆ. ಕರ್ಕಾಟಕ ರಾಶಿ ಇದಕ್ಕೆ ಶತ್ರು ರಾಶಿ ಆಗಿದೆ. ವಿಶೇಷ ಎಂದರೆ, ವ್ಯಹಾರ ಮಾಡುವವರಿಗೆ ಉತ್ತರ ದಿಕ್ಕು ಒಳ್ಳೆಯದಾಗುತ್ತದೆ. ಭಾಗ್ಯಶಾಲಿಗಳು ಆಗಿರುತ್ತಾರೆ. ಏಕಾಗ್ರತೆ ಹೆಚ್ಚಾಗಿ ಇರತ್ತೆ. ಮಂಗಳವಾರ ಅಶುಭವನ್ನು ನಡೆಸುವ ವಾರ ಆಗಿರುತ್ತದೆ. ಚಂಚಲ ಮನಸ್ಸನ್ನು ಹೊಂದಿರುತ್ತಾರೆ. ಧಾನ ಮಾಡುವ ಗುಣ ಇದ್ದರೂ ಸಹ ದುಂದು ವೆಚ್ಚ ಮಾಡುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲೂ ಸಹ ಜಯವನ್ನು ಪಡೆಯುತ್ತಾರೆ. ವಿವಾಹಕ್ಕೆ ಸಂಬಂಧಿಸಿದ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಆರೋಗ್ಯದ ವಿಷಯಕ್ಕೆ ಬಂದರೆ ತಲೆನೋವು , ತಲೆವಿಹಾರ ,ಮೈಗ್ರೇನ್ ಹಾಗೂ ತಲೆಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗೆ ಒಳಪಡುವ ಸಾಧ್ಯತೆಗಳು ಸಹ ಇರುತ್ತವೆ. ಕನ್ಯಾ ರಾಶಿಯು ಈ ರೀತಿಯ ಗುಣಗಳನ್ನು ಹೊಂದಿರುತ್ತದೆ.

Leave a Reply

Your email address will not be published. Required fields are marked *