Ultimate magazine theme for WordPress.

ಆಷಾಡ ಮಾಸದಲ್ಲಿ ಈ ಚಿಕ್ಕ ಕೆಲಸ ಮಾಡಿ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಿ

0 0

ಲಕ್ಷ್ಮಿ ಕೃಪೆಗೆ ಪಾತ್ರರಾದವರ ಮನೆಯಲ್ಲಿ ಸಂಪತ್ತಿನ ಜೊತೆಗೆ ಇಂದಿಗೂ ಸುಖ ಸಂತೋಷಕ್ಕೆ ಕೊರತೆ ಎನ್ನುವುದು ಉಂಟಾಗುವುದಿಲ್ಲ. ಹಾಗಾಗಿ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಾರೆ. ಪುರಾಣ ಗ್ರಂಥಗಳಲ್ಲಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹಲವಾರು ಸಾಕಷ್ಟು ಉಪಾಯಗಳನ್ನು ಹೇಳಲಾಗಿದೆ. ಅದರ ಜೊತೆಗೆ ಯಾವ ಯಾವ ರೀತಿಯ ಕೆಲಸಗಳಳನ್ನು ಮಾಡಿದರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ಮಾತ್ತು ಯಾವ ರೀತಿಯ ಕೆಲಸಗಳಳನ್ನು ಮಾಡಿದರೆ ಲಕ್ಷ್ಮಿ ದೇವಿ ಮುನಿಯುತ್ತಾಳೆ ಎಂಬುದರ ಬಗ್ಗೆಯೂ ಸಹ ವಿವರವಾಗಿ ತಿಳಿಸಲಾಗಿದೆ.

ಕೆಲವೊಂದು ಕೆಲಸಗಳನ್ನು ಮಾಡುವ ವ್ಯಕ್ತಿ ಎಷ್ಟೇ ಕಷ್ಟ ಪಟ್ಟರೂ ಸಹ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹರಸಾಹಸ ಪಟ್ಟರೂ ಸಹ ಆಗುವುದಿಲ್ಲ. ಯಾವ ಯಾವ ಕೆಲಸಗಳನ್ನು ಮಾಡಿದರೆ ಲಕ್ಷ್ಮಿ ದೇವಿಯು ಮುನಿಸಿಕೊಳ್ಳುವಳು ಎಂಬುದರ ಕುರಿತಾಗಿ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಆರೋಗ್ಯ ವೃದ್ಧಿಗಾಗಿ ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಾವು ಪ್ರತೀ ದಿನವೂ ಸ್ನಾನ ಮಾಡುತ್ತೇವೆ. ಹಾಗೆಯೇ ಪ್ರತೀ ದಿನ ನಮ್ಮ ಬಾಯಿಯನ್ನು ಸ್ವಚ್ಚಗೊಳಿಸಿಕೊಳ್ಳಬೇಕು. ಇದರಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ನಾವು ಲಕ್ಷ್ಮಿ ದೇವಿಯನ್ನು ಸಹ ಒಳಿಸಿಕೊಳ್ಳಬಹುದು. ಸೂರ್ಯೋದಯಕ್ಕಿಂತ ಮೊದಲು ಎದ್ದು ನಕ್ಷತ್ರಗಳ ಎದುರು ನಿಂತು ಸ್ನಾನ ಮಾಡುವುದರಿಂದ ಆಲಸ್ಯ ದೂರವಾಗುತ್ತದೆ. ಕಷ್ಟ ಹಾಗೂ ದುಷ್ಟ ಶಕ್ತಿಗಳ ಕಾಟವೂ ಸಹ ನಿವಾರಣೆ ಆಗುತ್ತದೆ. ಸ್ನಾನ ಮಾಡುವಾಗ ದೇವರ ಸ್ಮರಣೆಯನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ಉತ್ತಮ ಅರಿಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆಧುನಿಕ ಜೀವನ ಶೈಲಿಯ್ಲಲಿ ಕೆಲಸಕ್ಕೆ ಹೆಚ್ಚು ಮಹತ್ವ ಕೊಡುವ ಜನರು ತಮ್ಮ ನಿದ್ರೆಯನ್ನು ಮರೆಯುತ್ತಿದ್ದಾರೆ. ಪ್ರತೀ ದಿನ ಒಬ್ಬ ವ್ಯಕ್ತಿಗೆ ಏಳರಿಂದ ಒಂಭತ್ತು ಗಂಟೆಗಳ ಕಾಲ ನಿದ್ರೆಯ ಅವಶ್ಯಕತೆ ಇರುತ್ತದೆ. ಕಡಿಮೆ ನಿದ್ರೆ ಮಾಡುವ ವ್ಯಕ್ತಿಗಳಿಗೆ ಅನಾರೋಗ್ಯದ ಸಮಸ್ಯೆಗಳು ಕಾಡುತ್ತ ಇರುತ್ತವೆ. ಶಾಸ್ತ್ರಗಳ ಪ್ರಕಾರ ಬೇಗ ಮಲಗಿ ಬೇಗ ಏಳಬೇಕು. ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳು ಮಾತ್ರ ಹಗಲಿನಲ್ಲಿ ನಿದ್ರೆ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಸತ್ಯವನ್ನು ಹೇಳುವುದು ಬಹಳ ಮುಖ್ಯ ಆದರೆ ಸತ್ಯ ಯಾವಾಗಲೂ ಕಹಿಯಾಗಿ ಇರುತ್ತದೆ. ಆದರೆ ಅದರಿಂದ ಸಿಗುವ ಫಲ ಸಿಹಿಯಾಗಿ ಇರುತ್ತದೆ. ಮಾತಿನ ಬಗ್ಗೆ ಗಮನ ಇರಬೇಕು. ಸದಾ ಸತ್ಯವನ್ನ ನುಡಿಯಬೇಕು. ನಾವು ಸೂರ್ಯೋದಯಕ್ಕಿಂತ ಮೊದಲು ಏಳುವುದು ಉತ್ತಮ. ಇದರಿಂದ ಆರೋಗ್ಯ ಹಾಗೂ ನಮ್ಮ ಮನೆಯ ಐಶ್ವರ್ಯ ಕೂಡಾ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Leave A Reply

Your email address will not be published.