ಒಂದು ಸಿನಿಮಾ ಎಂದರೆ ಹೀರೋ ಎಷ್ಟು ಮುಖ್ಯವೋ ವಿಲನ್ ಕೂಡ ಅಷ್ಟೇ ಮುಖ್ಯ. ವಿಲನ್ ಇದ್ದರೆ ಮಾತ್ರವೇ ಹೀರೊಗೆ ಬೆಲೆ ಎಂದು ಹಲವಾರು ಜನ ಹೇಳುವುದನ್ನು ಕೂಡ ನಾವು ಕೇಳಿರುತ್ತೇವೆ. ಹಲವಾರು ಬಾರಿ ವಿಲನ್ ಎಂಬುವರು ತೆರೆಮೇಲೆ ಕಾಣುವ ಒಂದು ಪಾತ್ರ ಮಾತ್ರ ಎಂದು ಭಾವಿಸದೆ ವಿಲನ್ ಪಾತ್ರ ನಿರ್ವಹಿಸಿದ ಕಲಾವಿದರಿಗೆ ಹೀರೋ ಅಭಿಮಾನಿಗಳು ತೊಂದರೆ ನೀಡಿರುವ ಉದಾಹರಣೆಗಳನ್ನು ಕೂಡ ನಾವು ಕೇಳಿರುತ್ತೇವೆ, ನೋಡಿರುತ್ತೇವೆ. ಇಂತಹ ಹಲವಾರು ಸಮಸ್ಯೆಗಳನ್ನು ವಿಲನ್ ಪಾತ್ರ ನಿರ್ವಹಿಸುವವರು ಅನುಭವಿಸಬೇಕಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಅಥವಾ ದಕ್ಷಿಣ ಭಾರತ ಚಿತ್ರರಂಗದ ಎಷ್ಟೋ ಕಲಾವಿದರು ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಇಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಿ ಖ್ಯಾತರಾಗಿರುವ ಕೆಲವು ವಿಲನ್ ಗಳ ನಿಜ ಜೀವನದಲ್ಲಿ ಇವರ ಪತ್ನಿ ಯಾರು ಎಂಬುದನ್ನು ನೋಡೋಣ.

ಮೊದಲನೆಯದಾಗಿ ರಘುವರನ್. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೈಲೆಂಟ್ ವಿಲನ್ ಬ್ರಾಂಡ್ ಆಗಿದ್ದ ರಘುವರನ್ ರವರ ಪತ್ನಿ ರೋಹಿಣಿ ಕೂಡ ನಟಿಯಾಗಿ 90 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಮಿಂಚಿದ್ದಾರೆ. ಇನ್ನು ಖ್ಯಾತ ನಟ ಅವಿನಾಶ್. ಅವಿನಾಶ್ ಎಂತಹ ಪವರ್ ಫುಲ್ ಪಾತ್ರಗಳೆಕೂಡ ಮಾಡಬಲ್ಲಂತಹ ನಟ. ಅವರ ಪತ್ನಿ ಮಾಳವಿಕಾ ಕೂಡ ಅವರಿಗೆ ಕಮ್ಮಿಯಿಲ್ಲದಂತೆ ಚಿತ್ರರಂಗದಲ್ಲಿ ಖ್ಯಾತರಾಗಿದ್ದಾರೆ.

ಅತುಲ್ ಕುಲಕರ್ಣಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಆತುಲ್ ರವರು ಸಹಜ ನಟನೆಯಿಂದ ಖ್ಯಾತರಾಗಿದ್ದಾರೆ. ಅವರ ಪತ್ನಿ ಗೀತಾಂಜಲಿ ಕೂಡ ನಟಿಯಾಗಿ ಹಲವಾರು ಭಾಷೆಗಳಲ್ಲಿ ಫೇಮಸ್ ಆದವರು. ಇನ್ನು ಆಶಿಶ್ ವಿದ್ಯಾರ್ಥಿ. ಪಂಚ ಭಾಷೆಗಳಲ್ಲಿ ಕೂಡ ತಮ್ಮ ವಿಭಿನ್ನ ಮ್ಯಾನರಿಸಂ ನಟನೆಯ ಮೂಲಕ ಖಡಕ್ ವಿಲನ್ ಆಗಿ ಹೆಸರು ಪಡೆದಿರುವ ಆಶಿಶ್ ವಿದ್ಯಾರ್ಥಿಯವರ ಮಡದಿ ರಾಜೋಶಿ ವಿದ್ಯಾರ್ಥಿ ಕೂಡ ಬಾಲಿವುಡ್ ನ ಸಿನಿಮಾ ಹಾಗೂ ಕಿರುತೆರೆಯಲ್ಲಿ ಖ್ಯಾತಿ ಪಡೆದ ನಟಿ.

ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆಯ ವಿಲನ್ ಮುರಳಿ ಶರ್ಮ. ಇವರ ಪತ್ನಿಯ ಹೆಸರು ಅಶ್ವಿನಿ. ಇವರು ಹಿಂದಿ ಚಿತ್ರರಂಗದಲ್ಲಿ ಬಹಳ ಹೆಸರು ಗಳಿಸಿದ್ದಾರೆ. ಇವರು ಸಾಕಷ್ಟು ಧಾರಾವಾಹಿಗಳಲ್ಲಿ ಹಾಗು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಕೆ. ಜಿ. ಎಫ್ ಖ್ಯಾತಿಯ ರಾಮಚಂದ್ರ ರಾಜು ಅಲಿಯಾಸ್ ಗರುಡ ರಾಮ್ ಅವರಿಗೆ ಬಹಳ ಚಂದದ ಫ್ಯಾಮಿಲಿ ಇದೆ. ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಬಹಳ ಸುಂದರ ಜೀವನ ನಡೆಸುತ್ತಿದ್ದಾರೆ. ಇವರ ಪತ್ನಿಯ ಹೆಸರು ಸುಮ. ಮತ್ತು ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಕನ್ನಡ ಚಿತ್ರರಂಗದ ಇನ್ನೊಬ್ಬ ಖಡಕ್ ವಿಲನ್ ಪೀ. ರವಿಶಂಕರ್ ಅವರ ಪತ್ನಿ ಸುಚಿಲ್. ಇವರು ವರದನಾಯಕ, ರಾಂಬೊ 2, ಅಧ್ಯಕ್ಷ, ಮಾಸ್ಟರ್ ಪೀಸ್, ವಿಕ್ಟರಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮತ್ತೊಬ್ಬ ನಟ ಸೋನು ಸೂದ್ ಇವರು ತಮ್ಮದೇ ನಟನಾ ಚಾತುರ್ಯದಿಂದ ವಿಷ್ಣುವರ್ಧನ, ಕುರುಕ್ಷೇತ್ರ ಇನ್ನೂ ಅನೇಕ ಚಿತ್ರಗಳಲ್ಲಿ ವಿಲನ್ ಆಗಿ ಪಾತ್ರ ಮಾಡುವುದರ ಜೊತೆಗೆ ಕೇವಲ ಆಕ್ಟಿಂಗ್ ಮಾತ್ರವಲ್ಲದೆ ಕೋರೋನ ಅವಧಿಯಲ್ಲಿ ಜನ ಸೇವೆಯ ಮೂಲಕ ಪ್ರಸಿದ್ಧರಾದ ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್.

ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಂಡುಬರುವ ಅಚುತ್ ಕುಮಾರ್ ಇವರ ಪತ್ನಿ ನಂದಿನಿ ಪಟವರ್ಧನ್. ಕಿರಿಕ್ ಪಾರ್ಟಿ, ರಿಕ್ಕಿ, ಉಳಿದವರು ಕಂಡಂತೆ, ಅವನೇ ಶ್ರೀಮನ್ನಾರಾಯಣ, ಹೀರೋ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಪ್ರಮೋದ್ ಶೆಟ್ಟಿ ಹಾಗೂ ಅವರ ಪತ್ನಿ ಸುಪ್ರೀತಾ ಶೆಟ್ಟಿ. ಕನ್ನಡ ಚಿತ್ರರಂಗದ ಇನ್ನೊಬ್ಬ ಖಡಕ್ ವಿಲನ್ ಕಿಶೋರ್ ಇವರ ಪತ್ನಿ ವಿಶಾಲಾಕ್ಷಿ.

Leave a Reply

Your email address will not be published. Required fields are marked *