ಬಹಳ ವರ್ಷಗಳ ಹಿಂದೆಯೇ ‘ಓಂ’ ನಂತಹ ಎವರ್ ಗ್ರೀನ್ ಚಿತ್ರ ನಿರ್ದೇಶನ ಮಾಡಿ ಪರಭಾಷಿಕರು ಸ್ಯಾಂಡಲ್ವುಡ್ ಕಡೆ ತಿರುಗಿನೋಡುವಂತೆ ಮಾಡಿದ್ದರು ನಿರ್ದೇಶಕ ನಟ ಆಗಿರುವ ಉಪೇಂದ್ರ ಅವರು. ತಮ್ಮ ವಿಭಿನ್ನ ನಿರ್ದೇಶನ ಹಾಗೂ ನಟನೆಯಿಂದ, ಅಭಿಮಾನಿಗಳನ್ನ ರಂಜಿಸಿ ರಿಯಲ್ ಸ್ಟಾರ್ ಎಂಬ ಬಿರುದನ್ನ ಪಡೆದುಕೊಂಡವರು. ನಟ, ನಿರ್ದೇಶಕ ಮಾತ್ರವಲ್ಲದೆ ವಿಭಿನ್ನ ರಾಜಕಾರಣಿಯೂ ಹೌದು ನಮ್ಮ ಉಪ್ಪಿ. ಇನ್ನು ನಟ ಉಪೇಂದ್ರ ಅವರು ತಮ್ಮ ಕುಟುಂಬದದೊಂದಿಗೆ ರೆಸಾರ್ಟ್ ನಲ್ಲಿ ವಾಸವಾಗಿದ್ದು ಹೊಸ ಮನೆ ಕೂಡ ಕಟ್ಟಿಸಿದ್ದಾರಂತೆ. ಹಾಗಾದ್ರೆ ಉಪ್ಪಿ ಕಟ್ಟಿಸಿರುವ ಆ ಹೊಸ ಮನೆ ಎಲ್ಲಿದೆ, ಗೃಹಪ್ರವೇಶ ಹೇಗಾಯ್ತು ಎನ್ನುವುದರ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ರಿಯಲ್ ಸ್ಟಾರ್ ಉಪೇಂದ್ರ ಅವರನ್ನ ತೆರೆ ಮೇಲೆ ನೋಡಲು ಇನ್ನು ಸಾಕಷ್ಟು ದಿನಗಳು ಕಾಯಬೇಕು. ರಾಜಕೀಯ ಪ್ರವೇಶ ಮಾಡಿರುವ ಉಪ್ಪಿಯನ್ನ ರಿಯಲ್ ಆಗಿ ನೋಡುವ ಅವಕಾಶವಂತು ಎಲ್ಲರಿಗೂ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಉಪ್ಪಿ ಅಭಿಮಾನಿಗಳ ಮನೆ ಬಳಿಗೆ ಬಂದು ತಮ್ಮ ಪಕ್ಷದ ಪ್ರಚಾರ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ನಮಗೆಲ್ಲಾ ಗೊತ್ತಿರುವ ಹಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯ ಶುರುಮಾಡಿದ್ದೆ ರೆಸಾರ್ಟ್ ನಿಂದಲೇ. ಈಗ ಕುಟುಂಬದದೊಂದಿಗೆ ರೆಸಾರ್ಟ್ ನಲ್ಲೆ ವಾಸ್ತವ್ಯ ಹೂಡಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರು ನಗರದಿಂದ ದೂರ ಇರುವ, ಹಳ್ಳಿಗಳ ಮಧ್ಯ ಇರುವ ತಾವರೆಕೆರೆಯ ಚುಂಚನಕುಪ್ಪೆ ಬಳಿ ಇರುವ ರೆಸಾರ್ಟ್ ನ ಹಿಂಭಾಗದಲ್ಲಿ ನವ ನವೀನವಾದ ಮನೆಯನ್ನ ಕಟ್ಟಿದ್ದಾರೆ ಉಪ್ಪಿ. ಇನ್ನು ಇತ್ತೀಚೆಗಷ್ಟೇ ಸಾಂಪ್ರದಾಯಿಕವಾಗಿ ಗೃಹ ಪ್ರವೇಶ ಸಮಾರಂಭವನ್ನ ಮಾಡಿ ಮುಗಿಸಿದ್ದು ಇನ್ನುಮುಂದೆ ಉಪ್ಪಿಯ ಕುಟುಂಬ ಆ ಮನೆಯಲ್ಲಿ ವಾಸ ಮಾಡಲಿದ್ದಾರೆ.
ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಮನೆಗಳಿಗೆ ತೆರಳಿ ತಮ್ಮ ಪಕ್ಷದ ಪ್ರಚಾರವನ್ನ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡಿರುವ ಉಪ್ಪಿಗೆ ತಮ್ಮ ರಾಜಕೀಯ ರಂಗದಲ್ಲಿ ಉನ್ನತಿ ಸಾಧಿಸಲಿದ್ದಾರ ಎಂಬುದನ್ನ ಕಾದು ನೋಡಬೇಕಾಗಿದೆ. ಇನ್ನು ಒಂದು ಕಡೆ ಉಪೇಂದ್ರ ಅವರು ನಟಿಸಿರುವ ಕಬ್ಜ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದೆ. ಇನ್ನು ಈಗಾಗಲೇ ತಮ್ಮ ಹೊಸ ಐಡಿಯಾಗಳೊಂದಿಗೆ ರಾಜಕಾರಣಕ್ಕೆ ಧುಮಿಕಿರುವ ಉಪ್ಪಿ ರಾಜಕೀಯ ರಂಗದಲ್ಲಿ ಬದಲಾವಣೆ ತರಲಿದ್ದಾರೆ ಎಂಬ ಕುತೂಹಲವಂತೂ ಎಲ್ಲರಲ್ಲೂ ಇದೆ.

ರುಪ್ಪಿಸ್ ರೆಸಾರ್ಟ್ ನ ಹಿಂಭಾಗದಲ್ಲಿ ಹೊಸ ಮನೆಯನ್ನ ಕಟ್ಟಲಾಗಿದೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ ಸೇವ್ ಮಿ ಸಿನಿಮಾದ ಚಿತ್ರೀಕರಣಕ್ಕಾಗಿ ಅದೇ ಸ್ಥಳದಲ್ಲಿ ಬಂಗಲೆಯ ಸೆಟ್ ಹಾಕಲಾಗಿತ್ತು. ಆ ಜಾಗದಲ್ಲಿ ದೊಡ್ಡ ಮನೆ ನಿರ್ಮಾಣ ಆಗಿದೆ. ಇಷ್ಟು ವರ್ಷಗಳ ಕಾಲ ಬನಶಂಕರಿಯಲ್ಲಿ ವಾಸವಾಗಿದ್ದ ಉಪ್ಪಿ ಇನ್ನು ಮುಂದೆ ರುಪ್ಪಿಸ್ ರೆಸಾರ್ಟ್ ನಲ್ಲಿ ಇರಲಿದೆ. ಹಾಗಂತ ಬನಶಂಕರಿಯ ಮನೆಯನ್ನೂ ಖಾಲಿ ಮಾಡುತ್ತಿಲ್ಲ. ರಾಜಕೀಯ ಪಕ್ಷದ ಕೆಲಸ ಹಾಗೂ ಸಿನಿಮಾ ಕೆಲಸಗಳೆಲ್ಲವೂ ಈ ಮನೆಯಲ್ಲೇ ನಡೆಯಲಿದೆ.