ಚಿಕ್ಕ ವಯಸ್ಸಿನಲ್ಲಿ ಇರುವಾಗ ನೀನು ಕೆಲಸಕ್ಕೆ ಬಾರದವನು ಕುರಿ ಮೇಯಿಸಲು ಹೋಗು ಎಂದು ಬೈಯ್ಯುತ್ತಿದ್ದರು ನೆನಪಿದೆಯೇ. ಎಷ್ಟೋ ಜನರು ಕುರಿ ಮೇಯಿಸಿಕೊಂಡೇ ಲಕ್ಷಲಕ್ಷ ಸಂಪಾದಿಸಿ ಶ್ರೀಮಂತರಾಗಿದ್ದಾರೆ ಅವರಲ್ಲಿ ಕೆಲವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೆಲವರು ಕುರಿಗಳನ್ನು ಮೇಯಿಸುತ್ತಾ ಅವುಗಳ ಪೋಷಣೆ ಮಾಡುತ್ತಾ ಬಹಳಷ್ಟು ಜನರಿಗೆ ಮಾದರಿಯಾಗಿದ್ದಾರೆ. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಶಿಕ್ಷಣವಿಲ್ಲದೆ, ಹಣವಿಲ್ಲದೆ ಬದುಕನ್ನು ಕಟ್ಟಿಕೊಂಡವರು ಬಹಳಷ್ಟು ಜನರಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ದೊಡ್ಡರಾಜು ಇವರು ಓದಿದ್ದು ಮೂರನೇ ಕ್ಲಾಸ್, ವರ್ಷಕ್ಕೆ 30 ರಿಂದ 40 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವರು ಯುನಿವರ್ಸಿಟಿಯಲ್ಲಿ ಗ್ರಾಜುಯೇಷನ್ ಮತ್ತು ಪೋಸ್ಟ್ ಗ್ರಾಜುಯೇಷನ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಪಾಠ ಮಾಡುತ್ತಾರೆ ಕುರಿಗಳನ್ನು ಸಾಕಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇನ್ನೊಬ್ಬರು ಕಿಶೋರ್ ಇವರು ಫ್ಯಾಶನ್ ಡಿಸೈನರ್ ಮಾಡಿಕೊಂಡಿದ್ದಾರೆ. ಇವರು ಕುರಿ, ಮೇಕೆ ಸಾಕುತ್ತಾ ವರ್ಷಕ್ಕೆ ಲಕ್ಷಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ. ಇನ್ನೊಬ್ಬರು ಲಕ್ಷ್ಮೀ ನಾರಾಯಣ್ ಇವರು ತಮ್ಮ ಶಿಕ್ಷಣವನ್ನು ಮುಗಿಸಿ ಉದ್ಯೋಗ ಸಿಗದೆ ನಿರುದ್ಯೋಗಿಯಾಗಿದ್ದರು. ಇವರು ಮನೆಯಲ್ಲಿಯೇ ಇದ್ದು ತೀವ್ರ ಸಂಕಷ್ಟಕ್ಕೆ ಒಳಗಾದರು. ಆಗ ಕುರಿಯನ್ನು ಸಾಕಲು ಪ್ರಾರಂಭಿಸಿ ಲಕ್ಷಲಕ್ಷ ಸಂಪಾದಿಸಿ ಇಂದು ಅವರ ಜೀವನವೇ ಬದಲಾಗಿದೆ. ಇವರು ಹೈಟೆಕ್ ಕುರಿ ಸಾಕಿದ್ದಾರೆ, ಲಕ್ಷಲಕ್ಷ ಸಂಪಾದಿಸಿ ಜೀವನದಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ಷ್ಮೆ ಗೌಡರು ಇವರು ತಮ್ಮ ಬಳಿ ಇರುವ ಕಡಿಮೆ ಭೂಮಿಯಲ್ಲಿ ಎಲ್ಲಾ ಜಾತಿಯ ಮಿಶ್ರ ಬೆಳೆಗಳನ್ನು ಬೆಳೆದು ಅದರ ಜೊತೆಗೆ ಕುರಿ ಸಾಕಾಣಿಕೆ ಮಾಡಿ ವರ್ಷಕ್ಕೆ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಇನ್ನೊಬ್ಬರು ರಿತೇಶ್ ಇವರು ಸ್ಟಾಕ್ ಬ್ರೋಕರ್ ಆಗಿದ್ದವರು ಕುರಿ ಸಾಕಾಣಿಕೆ ಮಾಡಿ ಸ್ಟಾಕ್ ಬ್ರೋಕಿಂಗ್ ಗಿಂತ ಕುರಿ ಸಾಕಾಣಿಕೆಯಿಂದ ಹೆಚ್ಚು ಲಾಭವಾಗುತ್ತದೆ ಎಂದು ತಿಳಿಸಿಕೊಟ್ಟಿದ್ದಾರೆ. ಕುರಿ ಸಾಕಾಣಿಕೆ ಮೂಲಕವೇ ಜೀವನ ಕಟ್ಟಿಕೊಂಡಿದ್ದಾರೆ ಇದರಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಾಂತರಾಜು ಎಂಬುವವರು ಕುರಿ ಸಾಕಾಣಿಕೆಯಲ್ಲಿ ಹೆಸರುಗಳಿಸಿದ್ದಾರೆ, ಬಹಳಷ್ಟು ಸಂಪಾದನೆ ಮಾಡಿದ್ದಾರೆ. ಹೈಟೆಕ್ ಕುರಿಗಳನ್ನು ಸಾಕುವ ಮೂಲಕ ವರ್ಷಕ್ಕೆ ಲಕ್ಷಲಕ್ಷ ಸಂಪಾದಿಸಿ ಜೀವನವನ್ನು ಬಿಂದಾಸಾಗಿ ಕಳೆಯುತ್ತಿದ್ದಾರೆ. ಹೀಗೆ ಕುರಿಸಾಕಾಣಿಕೆ ಮೂಲಕ ಮಾದರಿಯಾಗಿ ಜೀವನವನ್ನು ಕಟ್ಟಿಕೊಂಡವರು ಎಷ್ಟೋ ಜನರಿದ್ದಾರೆ ಇವರ ಸಾಲಿನಲ್ಲಿ ನೀವು ಸೇರಬೇಕು, ಅವರಿಂದ ಮಾಹಿತಿ ಪಡೆಯಬೇಕು ಎಂದಾದರೆ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿಕೊಳ್ಳಿ. ಆ ಮೂಲಕ ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದವರು ಕುರಿ-ಮೇಕೆ ಸಾಕಣಿಕೆ ಮಾಡುವ ಮೂಲಕ ಉತ್ತಮ ಜೀವನ ನಡೆಸಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲಾ ಯುವಕರಿಗೂ ತಿಳಿಸಿ.

Leave a Reply

Your email address will not be published. Required fields are marked *