ಕನ್ನಡ ಚಿತ್ರರಂಗದ ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾ ಅವರ ಮಗ ಸುನೀಲ್ ರಾವ್ ಅವರು ಕನ್ನಡ ಚಿತ್ರರಂಗದ ಗಾಯಕ ಹಾಗೂ ನಟರಾಗಿದ್ದು ಅವರ ಸಿನಿಮಾ ಪ್ರಯಾಣ, ಅವರ ಮದುವೆಯ ಬಗ್ಗೆ ಹಾಗೂ ಅವರ ಮಗುವಿನ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಕನ್ನಡದ ಎಕ್ಸ್ ಕ್ಯೂಸಮಿ ಚಿತ್ರದಲ್ಲಿ ನಟಿಸಿ ಕೆಲವು ದಿನಗಳ ನಂತರ ವೆಬ್ ಸಿರೀಸ್ ನಲ್ಲಿ ನಟಿಸಿ ಚಿತ್ರರಂಗದಲ್ಲಿ ಮತ್ತೆ ಕಾಣಿಸಿಕೊಂಡರು. ಕನ್ನಡ ಚಿತ್ರರಂಗದ ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾ ಅವರ ಮಗ ಸುನೀಲ್ ರಾವ್ ಅವರು ಗಾಯಕ ಹಾಗೂ ನಟನಾಗಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು, ಅವರ ಆಸಕ್ತಿಯನ್ನು ತಂದೆ, ತಾಯಿ ಪ್ರೋತ್ಸಾಹಿಸಿದರು. ಅವರು ಸಿನಿಮಾದಲ್ಲಿ ತೂಕ ಇರುವ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ. ಎಕ್ಸ್ ಕ್ಯೂಸಮಿ ಅವರ ಮೊದಲ ಚಿತ್ರವಾಗಿದ್ದು ಅದರಲ್ಲಿ ನೆಗೆಟಿವ್ ಪಾತ್ರ ಮಾಡಿದ್ದರೂ ಆ ಸಿನಿಮಾ ಹಿಟ್ ಆಯಿತು. ಕೆಲವು ಬಾರಿ ಅವಮಾನವನ್ನು ಎದುರಿಸಿದ್ದಾರೆ. ಅವರ ಪ್ರಕಾರ ಹಣ, ಹೆಸರು, ಯಶಸ್ಸು ಇವುಗಳಿಗೆ ಬೆಲೆ ಇದೆ ಆದರೆ ಅದೇ ಸರ್ವಸ್ವ ಅಥವಾ ಶಾಶ್ವತ ಅಲ್ಲ. ಅವರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಅವಕಾಶ ಬರಲಿಲ್ಲ ಹಾಗಾಗಿ ಸಿನಿಮಾದಿಂದ ದೂರ ಉಳಿದರು

ವೆಬ್ ಸಿರೀಸ್ ನಲ್ಲಿ ಕೆಲಸ ಮಾಡುವಾಗ ಸುನೀಲ್ ಹಾಗೂ ಶ್ರೇಯಾ ಅಯ್ಯರ್ ಪರಿಚಯ ಆಗಿದ್ದರು ನಂತರ ಪ್ರೀತಿ ಮಾಡುತ್ತಾರೆ. ನಂತರ ಇಬ್ಬರ ಕುಟುಂಬದ ಒಪ್ಪಿಗೆಯ ಪಡೆದು ತಮ್ಮ ಪ್ರೇಯಸಿ ಶ್ರೇಯಾ ಅಯ್ಯರ್ ಅವರೊಂದಿಗೆ ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ಇವರು ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಸುನೀಲ್ ಅವರು ನಟಿಸಿದ ವೆಬ್ ಸಿರೀಸ್ ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಅವರು ನಟಿಸಿದ ಸಿನಿಮಾಕ್ಕೂ ಶ್ರೇಯಾ ಅವರೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಸುನೀಲ್ ಅವರ ಆಪ್ತರಾದ ಅನುಪಮಾ ಗೌಡ, ರಘು ಶಾಸ್ತ್ರಿ ಹೀಗೆ ಹಲವು ಗಣ್ಯರು ಸುನೀಲ್ ಅವರ ಮದುವೆಗೆ ಬಂದು ಆಶೀರ್ವಾದ ಮಾಡಿದ್ದಾರೆ. ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ ಅವಳೊಂದಿಗೆ ಸುನೀಲ್ ಹಾಗೂ ಅವರ ಪತ್ನಿಯ ಫೋಟೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

Leave a Reply

Your email address will not be published. Required fields are marked *