ಹೊಟ್ಟೆ ಪಾಡಿಗಾಗಿ ಹೈವೇ ಪಕ್ಕ ಪಂಕ್ಚರ್ ಶಾಪ್ ಇಟ್ಟಿದ್ದ ಮಹಿಳೆಗೆ ಈ ಪೊಲೀಸ್ ಅಧಿಕಾರಿ ಮಾಡಿದ್ದೇನು ಗೊತ್ತೇ?

0 2

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಾರೆ. ತಮ್ಮ ಹೊಟ್ಟೆಪಾಡಿಗಾಗಿ, ತಮ್ಮ ಮನೆಯವರ ಒಳಿತಿಗಾಗಿ ಕೆಲಸ ಮಾಡುತ್ತಾರೆ. ಅದೇ ರೀತಿ ಹೈವೆಗಳಲ್ಲಿ ಮಹಿಳೆಯೊಬ್ಬಳು ಪಂಚರ್ ಹಾಕುವ ಕೆಲಸವನ್ನು ಮಾಡುತ್ತಿದ್ದು ಅವಳ ಪರಿಸ್ಥಿತಿಯನ್ನು ತಿಳಿದು ಪೊಲೀಸ್ ಒಬ್ಬರು ಸಹಾಯ ಮಾಡಿದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

2020 ನೇ ವರ್ಷವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ವರ್ಷದಲ್ಲಿ ಕೆಟ್ಟದ್ದಾಗಿರುವುದರ ಜೊತೆಗೆ ಒಳ್ಳೆಯದು ಆಗಿದೆ. ಸ್ನೇಹಾ ಎಂಬ ಮಹಿಳೆ ಹೈವೆಯಲ್ಲಿ ಪಂಚರ್ ಹಾಕುತ್ತಾಳೆ. ಹೀಗೆ ಒಂದು ದಿನ ಸ್ನೇಹಾ ಪಂಚರ್ ಹಾಕುವ ಸಮಯದಲ್ಲಿ ಅಲ್ಲಿಗೆ ಪೋಲಿಸ್ ಜೀಪ್ ಬರುತ್ತದೆ. ಸ್ನೇಹಾ ಕಷ್ಟಪಟ್ಟು ಲಾರಿ ಟೈರ್ ಗಳಿಗೆ ಪಂಚರ್ ಹಾಕುತ್ತಿರುವುದನ್ನು ನೋಡಿದ ಪೋಲಿಸರೊಬ್ಬರು ಜೀಪ್ ನಿಂದ ಕೆಳಗಿಳಿದು ಸ್ನೇಹಾ ಅವರ ಹತ್ತಿರ ಬಂದು ಈ ದಿನ ರಕ್ಷಾ ಬಂಧನ ಹಬ್ಬ ಇದೆ ಇವತ್ತು ನಿಮ್ಮ ಅಣ್ಣನಿಗೆ ರಾಖಿ ಕಟ್ಟಲು ಹೋಗಲಿಲ್ಲವೇ ಇಂದು ಕೂಡ ಕೆಲಸ ಮಾಡುತ್ತಿದ್ದೀರಾ ಎಂದು ಕೇಳುತ್ತಾರೆ. ಆಗ ಸ್ನೇಹಾ ಪೋಲಿಸ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಒಂದು ಕ್ಷಣ ಕಣ್ಣೀರು ಹಾಕುತ್ತಾರೆ ನಂತರ ನನಗೆ ಯಾರು ಅಣ್ಣ ಇಲ್ಲ, ನನ್ನ ಜೀವನದಲ್ಲಿ ಇದುವರೆಗೂ ರಾಖಿ ಕಟ್ಟಿಲ್ಲ, ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ಅವರನ್ನು ನೋಡಿಕೊಳ್ಳಲು ರಸ್ತೆಯ ಬದಿಯಲ್ಲಿ ಓಡಾಡುವ ಗಾಡಿಗಳಿಗೆ ಪಂಚರ್ ಹಾಕುತ್ತಿದ್ದೇನೆ ಎಂದು ಬೇಸರದಲ್ಲಿ ಹೇಳಿ ಕೊಳ್ಳುತ್ತಾಳೆ. ಮಹಿಳೆಯ ಮಾತನ್ನು ಕೇಳಿದ ಪೋಲಿಸ್ ಇನ್ಸ್ಪೆಕ್ಟರ್ ಅವರಿಗೆ ಬೇಸರವಾಯಿತು ಕೂಡಲೇ ಜೀಪ್ ಒಳಗಿದ್ದ ಸ್ವೀಟ್ ಬಾಕ್ಸ್ ಮತ್ತು ರಾಖಿಯನ್ನು ತಂದು ಸ್ನೇಹಾ ಅವರಿಗೆ ನೀಡಿ ತಗೋ ರಾಕಿ ಕಟ್ಟು ನಾನೇ ಇನ್ನು ಮುಂದೆ ನಿನಗೆ ಅಣ್ಣ ಎಂದು ಹೇಳುತ್ತಾರೆ.

ಇನ್ಸ್ಪೆಕ್ಟರ್ ಮಾತನ್ನು ಕೇಳಿದ ಸ್ನೇಹಾ ಖುಷಿಯಿಂದ ಕಣ್ಣೀರು ಹಾಕುತ್ತಾ ಪೋಲಿಸ್ ಅವರಿಗೆ ರಾಖಿಯನ್ನು ಕಟ್ಟುತ್ತಾರೆ. ಈ ಸಮಯದಲ್ಲಿ ಪೋಲಿಸ್ ಕೂಡ ಭಾವುಕರಾಗಿದ್ದರು. ಜೀವನದಲ್ಲಿ ನಿನಗೆ ಏನೇ ಸಮಸ್ಯೆ ಬಂದರು ನನಗೆ ಹೇಳು, ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಸ್ನೇಹಾ ಅವರಿಗೆ ಪೋನ್ ನಂಬರ್ ಕೊಟ್ಟು ಕೆಲಸದ ನಿಮಿತ್ತ ಹೊರಟು ಹೋಗುತ್ತಾರೆ. ನಮ್ಮೊಂದಿಗೆ ಹುಟ್ಟಿದವರು, ನಮ್ಮ ಮನೆಯವರೇ ನಮ್ಮ ಸಹಾಯಕ್ಕೆ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಯಾರೋ ನಮ್ಮವರಿಗಿಂತ ಹೆಚ್ಚು ಕಾಳಜಿ ತೋರಿಸುತ್ತಾರೆ. ಎಲ್ಲರೊಂದಿಗೂ ನಗು, ನಗುತ್ತಾ ಖುಷಿಯಿಂದ ಇರಬೇಕು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ನಾವು ಸಹಾಯ ಮಾಡೋಣ, ಬೇರೆಯವರಿಗೂ ತಿಳಿಸೋಣ.

Leave A Reply

Your email address will not be published.