ಕನ್ನಡ ಚಿತ್ರರಂಗದಲ್ಲಿ ಅನೇಕ ನಟಿಯರು ಸ್ಟಾರ್ ನಟಿ ಎಂಬ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಮುಖ ಸ್ಟಾರ್ ನಟಿಯರ ಪಟ್ಟಿಯಲ್ಲಿ ರಾಧಿಕಾ ಪಂಡಿತ್ ಅವರು ಪ್ರಮುಖರು. ರಾಧಿಕಾ ಅವರು ಪುನೀತ್, ಗಣೇಶ್, ಶಿವರಾಜಕುಮಾರ್ ಹೀಗೆ ಅನೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ ಆದರೆ ದರ್ಶನ್ ಹಾಗೂ ಸುದೀಪ್ ಅವರ ಜೊತೆ ನಟಿಸಿಲ್ಲ. ಈ ಕುರಿತು ರಾಧಿಕಾ ಅವರು ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಸಿನಿಮಾ ರಂಗದಲ್ಲಿ ಹಿಟ್ ಆದ ನಟಿಯರು ಸಾಮಾನ್ಯವಾಗಿ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸುತ್ತಾರೆ. ನಾವು ನೋಡಿದ ಹಾಗೆ ಸದ್ಯ ಟಾಪ್ ಮೋಸ್ಟ್ ನಲ್ಲಿರುವ ನಟಿ ರಚಿತಾ ರಾಮ್ ಎಲ್ಲ ನಟರ ಜೊತೆಯೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಆದರೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಎಂದೆ ಖ್ಯಾತಿ ಪಡೆದ ರಾಧಿಕಾ ಪಂಡಿತ್ ಅವರು ಯಾಕೆ ಸ್ಟಾರ್ ನಟರಾದ ಸುದೀಪ್ ಹಾಗೂ ದರ್ಶನ್ ಅವರ ಜೊತೆ ತೆರೆ ಹಂಚಿಕೊಂಡಿಲ್ಲ ಅನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಅನೇಕರು ಇದಕ್ಕೆ ಯಶ್ ಅವರೆ ಕಾರಣನಾ ಅನ್ನುವ ಮಾತುಗಳನ್ನು ಆಡುತ್ತಿದ್ದಾರೆ ಆದರೆ ಇದರ ಹಿಂದೆ ಅಸಲಿ ಕಾರಣವೆ ಬೇರೆ ಇದೆ.
ರಾಧಿಕಾ ಪಂಡಿತ್ ಅವರು ಸ್ಯಾಂಡಲ್ ವುಡ್ ನ ಸ್ಟಾರ್ ನಟಿ. ಮಕ್ಕಳಾದ ಮೇಲೆ ಸಿನಿಮಾ ರಂಗದಿಂದ ಗ್ಯಾಪ್ ತೆಗೆದುಕೊಂಡಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ರಾಧಿಕಾ ಪಂಡಿತ್ ಅವರು ಫೈನಲ್ ಇಯರ್ ಬಿಕಾಂ ಮಾಡುತ್ತಿರುವಾಗಲೆ ನಂದ ಗೋಕುಲ ಅನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಆ ನಂತರ ಸುಮಂಗಲಿ ಧಾರವಾಹಿಯಲ್ಲಿಯೂ ನಟಿಸಿದ್ದಾರೆ. ಕಿರುತೆರೆಯಿಂದ ಬಣ್ಣದ ಜಗತ್ತು ಆರಂಭಿಸಿದ ರಾಧಿಕಾ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿ ಯಶಸ್ಸು ಕಂಡರು. ರಾಧಿಕಾ ಹಾಗೂ ಯಶ್ ಅವರು ನಂದಗೋಕುಲ ಧಾರವಾಹಿಯಲ್ಲಿ ಜೊತೆಗೆ ನಟಿಸಿದ್ದರು. ಆಗಲೆ ಅವರಲ್ಲಿ ಪ್ರೇಮಾಂಕುರವಾಗಿತ್ತು. ಬಳಿಕ ಡ್ರಾಮಾ ಚಿತ್ರದಲ್ಲಿಯೂ ಯಶ್ ಹಾಗೂ ರಾಧಿಕಾ ಇಬ್ಬರು ನಟಿಸಿದರು. ಅದೆ ರೀತಿ ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿಯಲ್ಲಿ ಮತ್ತೆ ರಾಧಿಕಾ ಅವರು ಯಶ್ ಜೊತೆ ಕಾಣಿಸಿಕೊಂಡರು.
ಈ ಕ್ಯೂಟ್ ಜೋಡಿಯ ಸಿನಿಮಾಗಳು ಹಿಟ್ ಆಯಿತು. ರೀಲ್ ಲೈಫ್ ನಲ್ಲಿ ಕಾಣಿಸಿಕೊಂಡ ಈ ಜೋಡಿ ರಿಯಲ್ ಲೈಫ್ ನಲ್ಲಿಯೂ ಜೊತೆಯಾದರು. ರಾಧಿಕಾ ಪಂಡಿತ್ ಡಿಸೆಂಬರ್ 9, 2016 ರಂದು ಗೋವಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇದೀಗ ಇಬ್ಬರು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ. ತನ್ನ ಸಿನಿಮಾ ಕರಿಯರ್ ನಲ್ಲಿ ರಾಧಿಕಾ ಅವರು ಶಿವಣ್ಣ, ಶ್ರೀನಗರ ಕಿಟ್ಟಿ, ಧ್ರುವ ಸರ್ಜಾ, ಪುನೀತ್ ರಾಜ್ ಕುಮಾರ್, ಅಜಯ್ ಜೊತೆ ನಟಿಸಿದ್ದು ಸುದೀಪ್ ಹಾಗೂ ದರ್ಶನ್ ಜೊತೆ ನಟಿಸಿಲ್ಲ.
ಈ ಬಗ್ಗೆ ರಾಧಿಕಾ ಅವರೆ ಮಾತನಾಡಿದ್ದು, ನನಗೆ ಹಿರಿಯ ನಟರು ಕಿರಿಯ ನಟರು ಇಂತವರ ಜೊತೆಯೆ ನಟಿಸಬೇಕು ಅನ್ನುವ ಭೇದಭಾವ ಇಲ್ಲ. ಕಥೆ ಚೆನ್ನಾಗಿದ್ದರೆ ನನಗೆ ಒಪ್ಪುವಂತಿದ್ದರೆ ಯಾರ ಜೊತೆಯಾದರೂ ನಟಿಸಲು ಸಿದ್ಧ ಅಂದಿದ್ದಾರೆ. ಈ ಮೂಲಕ ಎಲ್ಲರ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ರಾಧಿಕಾ ಅವರಿಗೆ ದರ್ಶನ್ ಹಾಗೂ ಸುದೀಪ್ ಜೊತೆಗೆ ನಟಿಸಲು ಒಳ್ಳೆಯ ಕಥೆಯ ಅಭಾವ ಅಥವಾ ಅವಕಾಶ ಸಿಗಲಿಲ್ಲವೆನೊ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ರಾಧಿಕಾ ಅವರ ಉತ್ತರದಿಂದ ನಿಮ್ಮ ಅಭಿಪ್ರಾಯ ತಿಳಿಸಿ.