ಕನ್ನಡ ಚಿತ್ರರಂಗದ ಟೈಗರ್ ಎಂದೇ ಖ್ಯಾತರಾಗಿದ್ದ ಪ್ರಭಾಕರ್, ಕನ್ನಡ ಚಿತ್ರರಂಗ ಕಂಡ ಅಪರೂಪದ ಆಲ್ ರೌಂಡರ್ ಎಂದರೆ ತಪ್ಪಿಲ್ಲ. ಸಹ ನಟನಾಗಿ ಪೋಷಕನಟನಾಗಿ ಖಳ ನಾಯಕನಾಗಿ ನಾಯಕ ನಟನಾಗಿ ಛಾಯಾಗ್ರಾಹಕನಾಗಿ ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟತೆ ಮೆರೆದ ವ್ಯಕ್ತಿ ಎಂದರೆ ಅದು ಪ್ರಭಾಕರ್. ಯಾವುದೇ ಪಾತ್ರವಾಗಿರಲಿ ಅಥವಾ ಯಾವ ಪ್ರಮಾಣದ ಪಾತ್ರವೇ ಆಗಿರಲಿ ಆ ಪಾತ್ರ ಸದಾ ಕಾಲ ನೆನಪಿನಲ್ಲಿ ಉಳಿಯುವಂತೆ ನಟಿಸುತ್ತಿದ್ದ ನಟ. ಅಂತೆಯೇ ಸುಮಾರು 450 ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರೂ ಇಂದಿಗೂ ಕನ್ನಡ ಚಿತ್ರ ರಸಿಕರ ಮನದಲ್ಲಿ ಅಚ್ಚಳಿಯದೇ ನೆನಪಿನಲ್ಲಿ ಉಳಿದಿದ್ದಾರೆ ನಟ ಪ್ರಭಾಕರ್. ಪ್ರಚಂಡ ನಟ ಸಾಹಸ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.ಆದರೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಬಿರುದು ಎಂದರೆ ಅದು ಟೈಗರ್.

ಟೈಗರ್ ಪ್ರಭಾಕರ್ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ ಹೆಸರುವಾಸಿಯಾಗಿದ್ದವರು. ಕನ್ನಡ ತೆಲುಗು ಮಾತ್ರವಲ್ಲದೇ ಮಲಯಾಳಂ ಮತ್ತು ಹಿಂದಿ ಬಾಷೆಯ ಚಿತ್ರಗಳಲ್ಲಿ ಕೂಡಾ ಅಭಿನಯಿಸಿ ಸೈ ಎನಿಸಿಕೊಂಡ ವ್ಯಕ್ತಿ ಪ್ರಭಾಕರ್ ಟೈಗರ್ ಎಂಬ ಪದಕ್ಕೆ ಅರ್ಥವನ್ನು ನೀಡಿದ್ದಾರೆ. ಸಣ್ಣ ಬಜೇಟ್ ಚಿತ್ರಗಳಲ್ಲಿ ನಕಾರಾತ್ಮಕ ಪಾತ್ರಗಳಲ್ಲಿ ಅಂದರೆ ಖಳನಾಯಕನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು. ಸುಮಾರು 450 ಚಿತ್ರಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ ಪ್ರಭಾಕರ್ ಕನ್ನಡ ಸಿನಿ ರಸಿಕರಿಗಂತೂ ಟೈಗರ್ ಪ್ರಭಾಕರ್ ಅವರ ಗತ್ತು, ಸ್ಟೈಲ್, ಡೈಲಾಗ್, ಮತ್ತು ಪೈಟಿಂಗ್ ಗಳನ್ನು ಇಂದಿಗೂ ಮರೆತಿಲ್ಲ.

ಯಾವ ಫ್ಯಾಮಿಲಿ ಬ್ಯಾಗ್ರೌಂಡ್ ಇಲ್ಲದೇ ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದವರು ಟೈಗರ್ ಪ್ರಭಾಕರ್. ಕಠಿಣ ಪರಿಶ್ರಮದ ನಂತರ ತನ್ನ 100ನೇ ಚಿತ್ರದಲ್ಲಿ ಪರಿಪೂರ್ಣ ನಾಯಕರಾಗಿ ಹೊರಹೊಮ್ಮಿದ್ದಾರೆ. ಇನ್ನೂ ಪ್ರಭಾಕರ್ ಅವರ ವೈವಾಹಿಕ ಜೀವನ ನೋಡುವುದಾದರೆ. ಮೂರು ಬಾರಿ ವಿವಾಹವಾಗಿ ಮೂವರಿಗೂ ವಿಚ್ಚೇದನ ನೀಡಿ ಒಂಟಿ ಜೀವನವನ್ನ ನಡೆಸುತ್ತಿದ್ದರು. ಅಲ್ಲದೇ ಚಿತ್ರದಲ್ಲಿ ಘರ್ಜಿಸಿದ ಪ್ರಭಾಕರ್ ಅವರ ಕೊನೆಯ ದಿನಗಳು ನಾವಂದು ಕೊಂಡಂತೆ ಸುಂದರವಾಗಿ ಏನೂ ಇರಲಿಲ್ಲ. ಅತಿಯಾದ ಅನಾರೋಗ್ಯದಿಂದ ಅವರ ಬಳಿ ಇದ್ದ ಹಣವೆಲ್ಲಾ ಖಾಲಿ ಆಗಿತ್ತು. ಮಾರ್ಚ್ 25, 2001 ರಲ್ಲಿ ಪ್ರಭಾಕರ್ ಅವರು ಇಹಲೋಕ ತ್ಯಜಿಸಿದರು.‌ ನಂತರ ಇವರ ಸಮಾಧಿಯನ್ನು ಶಾಂತಿ ನಗರದ ಭಾರತಿಯ ಕ್ರೈಸ್ತ ಸಮಾಧಿ ಎಂಬ ಸ್ಮಶಾನದಲ್ಲಿ ನಿರ್ಮಿಸಲಾಗಿದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವನ್ನು ಪ್ರಭಾಕರ್ ಅವರ ಬಗ್ಗೆ ಹೇಳಲೇ ಬೇಕು. 1958 ರ ಜಾವಾ ಮಾಡೆಲ್ ಬೈಕ್ ಅನ್ನು ಪ್ರಭಾಕರ್ ಅವರು ಓಡಿಸುತ್ತಿದ್ದರು. ಇವರಿಗೆ ಕಾರು, ಬೈಕ್ ಅಂದರೆ ತುಂಬಾ ಅಚ್ಚುಮೆಚ್ಚು ಹಾಗಾಗಿ ತಂದೆ ಬಿಟ್ಟು ಹೋದ ಅವರ ಬೈಕನ್ನು ಈಗ ಅವರ ಮಗ ವಿನೋದ್ ಪ್ರಭಾಕರ್ ಈ ಬೈಕ್ ಅನ್ನು ಸರಿಪಡಿಸಿ ಓಡಿಸುವ ಪ್ಲಾನ್ ಮಾಡಿದ್ದಾರೆ.

Leave a Reply

Your email address will not be published. Required fields are marked *